ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಭಾರತದ ಆತಿಥ್ಯದಲ್ಲಿ ನವೆಂಬರ್‌ನಲ್ಲಿ ಐದು ತಾಣಗಳಲ್ಲಿ ಫ‌ುಟ್‌ಬಾಲ್‌ ಕೂಟ

Team Udayavani, Apr 5, 2020, 5:45 AM IST

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಹೊಸದಿಲ್ಲಿ: ಭಾರತದಲ್ಲಿ ಮುಂದಿನ ನವೆಂಬರ್‌ನಲ್ಲಿ ನಡೆಯ ಲಿರುವ ಫಿಫಾ ಅಂಡರ್‌-17 ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟವನ್ನು ಮುಂದೂಡಲಾಗಿದೆ. ಜಗತ್ತಿನೆಲ್ಲೆಡೆ ಕೋವಿಡ್ 19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಫ‌ುಟ್‌ಬಾಲ್‌ನ ವಿಶ್ವ ಆಡಳಿತ ಮಂಡಳಿ ಫಿಫಾ ಶನಿವಾರ ಈ ಕೂಟವನ್ನು ಮುಂದೂಡಲು ನಿರ್ಧರಿಸಿತು.

ವನಿತೆಯರ 17 ವರ್ಷ ಕೆಳಗಿನ ಈ ಪ್ರತಿಷ್ಠಿತ ಪಂದ್ಯಾಟವು ದೇಶದ ಐದು ನಗರಗಳಲ್ಲಿ (ಕೋಲ್ಕತಾ, ಗುವಾಹಾಟಿ, ಭುವನೇಶ್ವರ, ಅಹ್ಮದಾಬಾದ್‌ ಮತ್ತು ನವೀ ಮುಂಬಯಿ) ನವೆಂಬರ್‌ 2ರಿಂದ 21ರ ವರೆಗೆ ನಡೆಯಲಿತ್ತು. ಈ ಪಂದ್ಯಾಟವು 16 ತಂಡಗಳ ನಡುವೆ ನಡೆಯಲಿತ್ತು. ಆತಿಥ್ಯ ಹಿನ್ನೆಲೆಯಲ್ಲಿ ಭಾರತ ನೇರವಾಗಿ ಅರ್ಹತೆ ಪಡೆದಿತ್ತು. ಅಂಡರ್‌-17 ವನಿತಾ ವಿಶ್ವಕಪ್‌ಫ‌ುಟ್‌ಬಾಲ್‌ ಕೂಟದಲ್ಲಿ ಇದೇ ಮೊದಲ ಬಾರಿ ಭಾರತ ಆಡುವ ಅರ್ಹತೆ ಗಳಿಸಿತ್ತು.

ಫಿಫಾ ಕಾನೆಡೆರೇಶನ್ಸ್‌ನ ಕಾರ್ಯ ಕಾರಿ ಬಣವು ಅಂಡರ್‌-17 ವಿಶ್ವಕಪ್‌ ಕೂಟವನ್ನು ಮುಂದೂಡಲು ನಿರ್ಧರಿಸಿತು. ಕೋವಿಡ್ 19 ವೈರಸ್‌ನಿಂದ ಉಂಟಾದ ಸಂಕಷ್ಟವನ್ನು ಪರಾ ಮರ್ಶಿಸಲು ಫಿಫಾ ಕೌನ್ಸಿಲ್‌ನ ಬ್ಯುರೋ ಕಾರ್ಯಕಾರಿ ಬಣವನ್ನು ರಚಿಸಿತ್ತು. ಫಿಫಾ ಅಂಡರ್‌-20 ಮತ್ತು ಅಂಡರ್‌-17 ವನಿತಾ ವಿಶ್ವಕಪ್‌ ಕೂಟವನ್ನು ಮುಂದೂಡುವಂತೆ ಕಾರ್ಯಕಾರಿ ಸಮಿತಿಯು ಫಿಫಾ ಕೌನ್ಸಿಲ್‌ಗೆ ಶಿಫಾರಸು ಮಾಡಿತ್ತು. ಅಂಡರ್‌-20 ಕೂಟವು 2020ರ ಆಗಸ್ಟ್‌-ಸಪ್ಟೆಂಬರ್‌ನಲ್ಲಿ ಪನಾಮ/ಕೋಸ್ಟರಿಕಾದಲ್ಲಿ ನಡೆಯಬೇಕಿತ್ತು. ಈ ಕೂಟಗಳ ಹೊಸ ದಿನಾಂಕವನ್ನು ಗುರುತಿಸಲಾಗಿದೆ ಎಂದು ಫಿಫಾ ಪ್ರಕಟನೆಯಲ್ಲಿ ತಿಳಿಸಿದೆ.

ಕೂಟ ಆರಂಭವಾಗಲು ಕೇವಲ ಐದು ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ ಏಶ್ಯವನ್ನು ಬಿಟ್ಟರೆ ಉಳಿದ ಕಡೆಯ ಅರ್ಹತಾ ಕೂಟಗಳು ಇನ್ನಷ್ಟೇ ಆಗಬೇಕಾಗಿದೆ. ಏಶ್ಯ ವಲಯದಿಂದ ಜಪಾನ್‌ ಮತ್ತು ಉತ್ತರ ಕೊರಿಯ ಅರ್ಹತೆ ಗಳಿಸಿದೆ.

ಕೋವಿಡ್ 19 ವೈರಸ್‌ನ ಹಾವಳಿಯಿಂದಾಗಿ ಇನ್ನುಳಿದ ಐದು ಅಂದರೆ ಆಫ್ರಿಕಾ, ಯುರೋಪ್‌, ಓಶಿಯಾನಿಯ, ದಕ್ಷಿಣ ಅಮೆರಿಕ ಹಾಗೂ ಸೆಂಟ್ರಲ್‌, ಉತ್ತರ ಅಮೆರಿಕ ಮತ್ತು ಕೆರೆಬಿಯನ್‌ನಲ್ಲಿ ನಡೆಯಬೇಕಾದ ಅರ್ಹತಾ ಕೂಟಗಳು ನಡೆಯದೇ ಬಾಕಿ ಉಳಿದಿವೆ.

ಮುಂದೂಡಿಕೆ ನಿರೀಕ್ಷಿತ
ಅಪಾಯಕಾರಿ ವೈರಸ್‌ನಿಂದಾಗಿ ಹಲವು ಕ್ರೀಡಾಕೂಟಗಳು ಮುಂದೂಡಲ್ಪಟ್ಟ ಕಾರಣ ಅಂಡರ್‌-17 ಕೂಟವು ನಿರೀಕ್ಷಿತವಾಗಿ ಮುಂದೂಡಲ್ಪಟ್ಟಿದೆ. ನಾವು ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕಿದೆ ಎಂದು ತಿಳಿಸಿದ ಅಖೀಲ ಭಾರತ ಫ‌ುಟ್‌ಬಾಲ್‌ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕುಶಲ್‌ ದಾಸ್‌ ಅವರು ಈ ಕೂಟ ಮುಂದಿನ ವರ್ಷ ನಡೆಯುವ ಸಾಧ್ಯತೆಯಿದೆ ಎಂದರು.

ಟಾಪ್ ನ್ಯೂಸ್

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

Agarwal

Vijay Hazare Trophy; ಮಯಾಂಕ್‌ ಅಗರ್ವಾಲ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvAUS: ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.