ಅಕ್ರಮ ಮದ್ಯ ಮಾರಾಟದ ಮೇಲೆ ನಿಗಾ
ಉಡುಪಿ ಜಿಲ್ಲೆಯಲ್ಲಿ 12 ವಿಶೇಷ ಗಸ್ತು ತಂಡ
Team Udayavani, Apr 5, 2020, 12:47 PM IST
ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಪತ್ತೆಗೆ ಜಿಲ್ಲೆಯಲ್ಲಿ ವಲಯವಾರು ತಲಾ 4 ವಿಶೇಷ ಗಸ್ತು ತಂಡಗಳನ್ನು ರಚಿಸಲಾಗಿದೆ.ಲಾಕ್‌ಡೌನ್ ಸಮಯದಲ್ಲಿ ಎಲ್ಲ ವಿಧದ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಆದರೂ ಕೆಲವೆಡೇ ಅಕ್ರಮ ಮದ್ಯ ಮಾರಾಟದ ವಾಸನೆ ಘಾಟು ಬೀರುತ್ತಿದೆ. ಇದನ್ನು ಅಬಕಾರಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಮದ್ಯದಂಗಡಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರೆ ಕ್ಲೋಸಿಂಗ್, ಓಪನಿಂಗ್ ಸ್ಟಾಕ್ ವ್ಯವಸ್ಥಿತವಾಗಿ ಪರಿಶೀಲನೆ ನಡೆಸಿ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.ಜಿಲ್ಲೆಯ ಕೆಲವೆಡೆ ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕ ಎಂಬಂತೆ ಅಬಕಾರಿ ಇಲಾಖೆ 20ರಿಂದ 30ರಷ್ಟು ಕರೆಗಳನ್ನು ಸ್ವೀಕರಿಸಿ ಪರಿಶೀಲನೆ ನಡೆಸಿದೆ.
ಮೂರು ವಲಯಗಳಲ್ಲಿ ಕಾರ್ಯಾಚರಣೆ
ಉಡುಪಿ-ಕಾಪು-ಬ್ರಹ್ಮಾವರ, ಕುಂದಾಪುರ-ಬೈಂದೂರು, ಕಾರ್ಕಳ-ಹೆಬ್ರಿ ಮೂರು ವಲಯಗಳಲ್ಲಿ 12 ತಂಡಗಳು ಗಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಯಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಂಡ ಮುಚ್ಚಿರುವ ಮದ್ಯದ ಅಂಗಡಿಗಳ ಸುತ್ತಮುತ್ತಲೂ ಫೋಟೋ ತೆಗೆದು ಉಪ ಆಯುಕ್ತರಿಗೆ ಫೋಟೊ ಕಳಿಸುತ್ತಿರಬೇಕು.ಅಬಕಾರಿ ಅಕ್ರಮಗಳಿದ್ದಲ್ಲಿ ಉಡುಪಿ-9964027232, ಕುಂದಾಪುರ – 8277088399, ಕುಂದಾಪುರ ಉಪವಿಭಾಗ – 7899019906, ಕಾರ್ಕಳ- 9481033662 ಸಂಪರ್ಕಿಸಬಹುದು.
ಕಾನೂನು ಕ್ರಮ
ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶವೇ ಇಲ್ಲ, ಈ ರೀತಿ ನಡೆದಲ್ಲಿ ಮದ್ಯದಂಗಡಿಗಳನ್ನು ಪರಿಶೀಲನೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಕೂಡ ಈ ಬಗ್ಗೆ ಮಾಹಿತಿ ನೀಡಬಹುದು.
– ನಾಗೇಶ್ ಕುಮಾರ್,
ಅಬಕಾರಿ ಇಲಾಖೆ ಉಪ ಆಯುಕ್ತರು ಉಡುಪಿ ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.