ಕೋವಿಡ್-19 ಗೆದ್ದ 104 ವರ್ಷದ ಸೈನಿಕ
Team Udayavani, Apr 5, 2020, 4:55 PM IST
ಮಣಿಪಾಲ: ಕೆಲವು ಪವಾಡಗಳಿಗೆ ನಾವು ಅನಿವಾರ್ಯವಾಗಿ ಸಾಕ್ಷಿಯಾಗಬೇಕಾಗುತ್ತದೆ. “ಸಮಯ ಬಂದಾಗ, ನಮ್ಮ ಹಣೆಯ ಮೇಲೆ ಬರೆದಿದ್ದರೆ ಯಾರಾದರೂ ಅಷ್ಟೇ ಗಂಟು ಮೂಟೆಕಟ್ಟಿ ಹೊರಡಬೇಕು’ ಎಂಬ ಮಾತು ನಮ್ಮ ನಿಮ್ಮ ನಡುವೆ ಸಂದರ್ಭ ಬಂದಾಗ ಅನುರಣಿಸುತ್ತಿರುತ್ತದೆ. ಇದೀಗ ಇಂತಹದ್ದೇ ಘಟನೆಯೊಂದಕ್ಕೆ ಅಮೆರಿಕ ಸಾಕ್ಷಿಯಾಗಿದೆ.
ಇಳಿ ವಯಸ್ಸು, 100 ಮಳೆಗಾಲದ ಜತೆ 2ನೇ ಜಾಗತಿಕ ಯುದ್ಧವನ್ನು ಕಂಡಿದ್ದ ಆ ದೇಹಕ್ಕೆ ಮಾರಣಾಂತಿಕ ಕೋವಿಡ್-19 ಸೋಂಕು ಅಪ್ಪಳಿಸಿತ್ತು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನೇನು ಬದುಕಿ ಬರುವುದು ಕಷ್ಟವೇ ಎಂಬ ಮಾತಿತ್ತು. ಆದರೆ 2ನೇ ವಿಶ್ವಯುದ್ಧ ಹೋರಾಡಿದ್ದ ಆ ತಾತ ಮೂರನೇ ಯುದ್ಧವನ್ನೂ ಗೆದ್ದು ಬಂದ.
104 ವರ್ಷದ ವಿಲಿಯಂ ಬಿಲ್ ಲ್ಯಾಪ್ಚಿಸ್ ಎಂಬವರು ಮಾರ್ಚ್ 5ರಂದು ಕೋವಿಡ್-19 ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. 1918ರ ಸ್ಪಾನಿಷ್ ಫ್ಲೂ, 1929ರ ಮಹಾ ಆರ್ಥಿಕ ಕುಸಿತ, 2ನೇ ಮಹಾಯುದ್ದ ಮತ್ತು ಈಗಿನ ಕೊವಿಡ್ 19ರ ಎದುರಿ ಜಯಿಸಿ ಬಂದು ತಮ್ಮ 104 ನೇ ಹುಟ್ಟು ಹಬ್ಬವನ್ನು ಅಮೆರಿಕದ ಒರೆಗಾನ್ ನಲ್ಲಿ ಎಪ್ರಿಲ್ 1 ರಂದು ಆಚರಿಸಿದ್ದಾರೆ.
ಲ್ಯಾಪ್ಚಿಸ್ ಅವರು ವಾಸವಿರುವ ಭಾಗದಲ್ಲಿ 15 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅವರ 102ನೇ ಹುಟ್ಟುಹಬ್ಬಕ್ಕೆ 200 ಮಂದಿ ಸೇರಿದ್ದು, ನಾವು 104ನೇ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದುಕೊಂಡಿದ್ದೆವು. ಆದರೆ ಅವರು ಆಸ್ಪತ್ರೆ ಸೇರಿದ ಬಳಿಕ ಮತ್ತು ಅದರಲ್ಲೂ ಅಮೆರಿಕದಲ್ಲಿ ಕೋವಿಡ್-19 ಸೋಂಕಿತರ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಿರುವಾಗ ನಾವು ಭಯ ಭೀತರಾಗಿದ್ದೆವು ಎಂದು ಹೇಳುತ್ತಾರೆ ಮಗಳು ಕ್ಯಾರೋಲಿ ಬ್ರೌನ್.
ತಮ್ಮ ತಂದೆಯನ್ನು ಉಳಿಸಿದ ವೈದ್ಯ ಜಗತ್ತಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದು ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿಗೆ ಸ್ಪೂರ್ತಿಯನ್ನು ತುಂಬಿದ ಘಟನೆಯಾಗಿದೆ ಎಂದಿದ್ದಾರೆ ಕ್ಯಾರೋಲಿ ಬ್ರೌನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.