ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!
ಬಿಸಿಸಿಐಗೆ ತೆರೆಮರೆಯಲ್ಲಿ ಒತ್ತಡ ಹೇರಿದರೆ ಕ್ರಿಕೆಟಿಗರು?
Team Udayavani, Apr 6, 2020, 5:45 AM IST
ಮುಂಬೈ: ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಟಿ20 ಕೂಟದ 13ನೇ ಆವೃತ್ತಿ ಈ ಸಲ ನಡೆಯುವ ಕುರಿತು ಇನ್ನೂ ಗೊಂದಲಗಳು ಮುಂದುವರಿದೇ ಇವೆ, ಈ ಬೆನ್ನಲ್ಲೆ ಹಲವು ಆಟಗಾರರು ಮುಚ್ಚಿದ ಬಾಗಿಲಲ್ಲಿ ಕಿರು ಐಪಿಎಲ್ ಕೂಟ ನಡೆಸುವಂತೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಮೇಲೆ ತೆರೆಮರೆಯಲ್ಲಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಟಿ20 ಕ್ರಿಕೆಟ್ ಕೂಟವೇ ಐಪಿಎಲ್, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ, ಕನಿಷ್ಟ ಐಪಿಎಲ್ ಆಡಿದರೂ ಸಾಕು ಎಂದು ಕನಸು ಹೊತ್ತಿರುವ ಅದೆಷ್ಟೊ ಕ್ರಿಕೆಟಿಗರಿದ್ದಾರೆ. ವಿಶ್ವದ ಯಾವುದೇ ಟಿ20 ಆಡಿದರೂ ಕ್ರಿಕೆಟಿಗರ ಜೀವನ ಆರ್ಥಿಕವಾಗಿ ಸುಭದ್ರವಾಗುತ್ತದೆ ಎನ್ನುವ ಖಾತ್ರಿಯಿಲ್ಲ. ಆದರೆ ಒಂದು ಬಾರಿ ಐಪಿಎಲ್ ಆಡಿದರೆ ಪೂರ್ಣ ಜೀವನವೇ ಸೆಟ್ಲ ಆಗುತ್ತದೆ ಎನ್ನುವ ಎಷ್ಟೋ ಕ್ರಿಕೆಟಿಗರಿದ್ದಾರೆ. ಹೀಗಾಗಿ ಪೂರ್ಣ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ಏನಂತೆ ಕಿರು ಕೂಟವನ್ನಾದರೂ ನಡೆಸಿ ಎನ್ನುವ ಕೂಗು ತೆರೆಮರೆಯಲ್ಲಿ ಕೇಳಿ ಬರುತ್ತಿದೆ.
ಪೀಟರ್ಸನ್ ಒತ್ತಾಯ
ಪ್ರೇಕ್ಷಕರಿಲ್ಲದೆ ಕೂಡ ಐಪಿಎಲ್ ಆಡಲು ಆಟಗಾರರು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಮಾತನಾಡಿ ಹೇಳಿದ್ದು ಹೀಗೆ, “ಈ ಸಲ ಐಪಿಎಲ್ ನಡೆಯುತ್ತದೆ ಎನ್ನುವುದು ನನ್ನ ಬಲವಾದ ನಂಬಿಕೆ. ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗನೂ ಐಪಿಎಲ್‌ನಲ್ಲಿ ಆಡುವ ಉತ್ಕಟ ಬಯಕೆ ಹೊಂದಿರುತ್ತಾನೆ, ಹೀಗಾಗಿ ಮೂರು ಅಥವಾ ನಾಲ್ಕು ವಾರಗಳ ಕಿರು ಐಪಿಎಲ್ ನಡೆಸಿ, ಮುಚ್ಚಿದ ಬಾಗಿಲಿನಲ್ಲಿ ಮೂರು ಕ್ರೀಡಾಂಗಣದಲ್ಲಿ 8 ತಂಡಗಳ ನಡುವೆ ಹಣಾಹಣಿ ನಡೆಯಲಿ, ಆರ್ಥಿಕ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ಇದು ಅನಿವಾರ್ಯ, ಇದರಿಂದ ಫ್ರಾಂಚೈಸಿಗೆ ಸ್ವಲ್ಪ ಆದಾಯ ಬರುತ್ತದೆ’ ಎಂದು ಪೀಟರ್ಸನ್ ಸಲಹೆ ನೀಡಿದ್ದಾರೆ.
ಎಪ್ರಿಲ್ 15ಕ್ಕೆ ನಿರ್ಧಾರ ?
ಸದ್ಯ ಭಾರತದಲ್ಲಿ ಲಾಕ್‌ಡೌನ್ ಅವಧಿ ಮುಕ್ತಾಯವಾಗಿಲ್ಲ, ಎ. 14ರ ವರೆಗೆ ಇರಲಿದೆ. ಪರಿಸ್ಥಿತಿ ನೋಡಿಕೊಂಡು ಸರಕಾರ ಲಾಕ್‌ಡೌನ್ ಹಿಂದೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಎಪ್ರಿಲ್ 15ರಂದು ಐಪಿಎಲ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಕೊರೊನಾ ವೈರಸ್ ಪ್ರಕರಣಗಳು ದೇಶದಲ್ಲಿ ಏರುತ್ತಲೇ ಇರುವುದರಿಂದ ಐಪಿಎಲ್‌ಗೆ ಅವಕಾಶ ಸಿಗುವುದು ಕಷ್ಟ. ಮೇ ಮೊದಲ ವಾರದೊಳಗೆ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ಈ ಸಲ ಐಪಿಎಲ್ ಕೂಟವನ್ನು ಸಂಪೂರ್ಣ ರದ್ದುಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಐಪಿಎಲ್ 13ನೇ ಆವೃತ್ತಿಯನ್ನು 2021ಕ್ಕೆ ಆಯೋಜಿಸುವ ಚಿಂತನೆ ಇಟ್ಟುಕೊಳ್ಳಲಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.