ಇದೀಗ ಸಣ್ಣ ಜ್ವರವಿದ್ರೂ ಕ್ವಾರಂಟೈನ್
Team Udayavani, Apr 6, 2020, 1:31 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ 19 ವೈರಸ್ ಸೋಂಕು ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರ್ಯಾಪಿಡ್ ಆ್ಯಂಟಿ ಬಾಡಿ ಟೆಸ್ಟ್‌ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಕಂಟೈನ್‌ಮೆಂಟ್ ಝೋನ್ ಮತ್ತು ಹೆಚ್ಚು ವಲಸಿಗರಿರುವ ಪ್ರದೇಶಗಳಲ್ಲಿ ಆ್ಯಂಟಿಬಾಡಿ ಟೆಸ್ಟ್ (ಪ್ರತಿರೋಧ ಪರೀಕ್ಷೆ) ನಡೆಯಲಿದೆ.
ವ್ಯಕ್ತಿಗೆ ಸೋಂಕನ್ನು ತಡೆದುಕೊಳ್ಳಲು ಅಗತ್ಯವಾದ ಪ್ರತಿರೋಧ ಕಣಗಳು (ಆ್ಯಂಟಿಬಾಡಿ) ಇವೆಯಾ ಎಂಬುದನ್ನು ಈ ಪರೀಕ್ಷೆ ತಿಳಿಸುತ್ತದೆ. ಕಂಟೈನ್‌ಮೆಂಟ್ ಮತ್ತು ವಲಸಿಗರ ಪ್ರದೇಶಗಳಲ್ಲಿ ಪ್ರತಿ ಯೊಬ್ಬ ವ್ಯಕ್ತಿಯೂ ಈ ಪರೀಕ್ಷೆ ಒಳಪಡು ತ್ತಾನೆ. ಪಾಸಿಟಿವ್ ಫಲಿತಾಂಶ ಬಂದವರಿಗೆ, ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ. ಇನ್‌ಫ್ಲ್ಯೂಯೆಂಝಾ ಸೋಂಕು, ಸಣ್ಣ ಜ್ವರವಿರುವ ವ್ಯಕ್ತಿಯನ್ನೂ ಇಲ್ಲಿ ಹೆಚ್ಚುವರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲದೆ, ಇಂಥ ರೋಗಿಗಳನ್ನು 14 ದಿನಗಳ ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗು ತ್ತದೆ. ನಿತ್ಯವೂ ವೈದ್ಯರ ನಿಗಾದಲ್ಲೇ ಇರಬೇಕಾಗುತ್ತದೆ. ಕಫ, ಶೀತ, ಗಂಟಲು ಕೆರೆತ ಲಕ್ಷಣಗಳಿದ್ದವರನ್ನೂ ಹೀಗೆಯೇ ವರ್ಗೀಕರಿಸಲಾಗುತ್ತದೆ.
ದೇಹದಲ್ಲಿ ಪ್ರತಿರೋಧ ಶಕ್ತಿ ಕಡಿಮೆ ಇರುವಂತವರನ್ನೇ ಈ ಮಾರಕ ವೈರಸ್, ನುಂಗಿ ನೀರು ಕುಡಿಯುತ್ತಿರುವುದರಿಂದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಈ ಪರೀಕ್ಷಾ ಕ್ರಮವನ್ನು ಸರ್ಕಾರಕ್ಕೆ ಸೂಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.