ಕೋವಿಡ್ ವೈರಸ್ ಮಣಿಸಲು ಆಯುರ್ವೇದವೇ ಸಶಕ್ತ ; ಇಲ್ಲಿದೆ ಸರಳ ಉಪಾಯಗಳು
Team Udayavani, Apr 6, 2020, 6:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಕೋವಿಡ್ 19 ಮಹಾಮಾರಿಯನ್ನು ಮಣಿಸುವಲ್ಲಿ, ಎಲ್ಲ ಪ್ರಕಾರದ ಔಷಧಗಳೂ ಸೋಲನ್ನಪ್ಪಿವೆ. ಕೊನೆಗೆ ಈಗ ತಜ್ಞರು ‘ಆಯುರ್ವೇದ ಮಾತ್ರವೇ ಈ ಮಾರಕ ವೈರಸ್ ವಿರುದ್ಧ ಹೋರಾಡಲು ಸಶಕ್ತ’ ಎನ್ನುವ ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಸೋಂಕಿತನಿಗೆ ರೋಗ ನಿರೋಧಕ ಶಕ್ತಿ ಅಧಿಕವಿದ್ದರಷ್ಟೇ ಆತ ಬೇಗನೆ ಚೇತರಿಸಿಕೊಳ್ಳಬಲ್ಲ. ಈ ರೋಗ ನಿರೋಧಕ ಶಕ್ತಿಯು ಆಯುರ್ವೇದವು ಪ್ರಧಾನವಾಗಿ ಸೂಚಿಸುವಂಥ ತುಳಸಿ, ದಾಲ್ಚಿನ್ನಿ, ಕಾಳುಮೆಣಸು, ಒಣಶುಂಠಿ, ಒಣ ದ್ರಾಕ್ಷಿಗಳಿಂದ ಹೆಚ್ಚು ಸಿಗುತ್ತದೆ. ಅಲ್ಲದೆ ಯೋಗ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ವೈದ್ಯವಿಜ್ಞಾನಿಗಳು.
ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ, ಆಯುರ್ವೇದದ ಪ್ರಯೋಜನಗಳ ಮಾರ್ಗಸೂಚಿ ಸಿದ್ಧಪಡಿಸುವಂತೆ, ಆಯುಷ್ ಇಲಾಖೆಗೆ ಸೂಚಿಸಿದ್ದರು. ಅದರಂತೆ ಬಿಸಿ ನೀರು ಸೇವನೆ, ಯೋಗಾಸನ, ಪ್ರಾಣಾಯಾಮ, 30 ನಿಮಿಷಗಳ ಧ್ಯಾನವನ್ನು ನಿತ್ಯ ಪಾಲಿಸುವಂತೆ ಇಲಾಖೆ, ಜನರಿಗೆ ಸಲಹೆ ನೀಡಿತ್ತು. ಅಲ್ಲದೆ, ಅಡುಗೆ ವೇಳೆ ಅರಿಶಿನ, ಜೀರಿಗೆ, ಕೊತ್ತಂಬರಿ, ಬೆಳ್ಳುಳ್ಳಿ ಬಳಕೆ ಹಾಗೂ ಬೆಲ್ಲದಿಂದ ಮಾಡಿದ ಲಿಂಬೆ ಹಣ್ಣಿನ ಜ್ಯೂಸ್ ಅನ್ನು ಸೇವಿಸುವಂತೆ ತಿಳಿಸಿತ್ತು. ಈ ಎಲ್ಲ ಪದಾರ್ಥಗಳು ಕೋವಿಡ್ ವೈರಸ್ ಕಾಟವನ್ನು ತಡೆಯಲು ಸಶಕ್ತವಾಗಿವೆ ಎನ್ನುವುದು ಆಯುರ್ವೇದದ ಸಲಹೆ ಕೂಡ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.