ಪುಸ್ತಕ ಕೇಳಿಸುವ ಆಡಿಬಲ್
Team Udayavani, Apr 6, 2020, 4:48 PM IST
ಹಿಂದೆಲ್ಲಾ ಟೇಪ್ ರೆಕಾರ್ಡರುಗಳು, ಹಾಡು ಕೇಳುವುದಕ್ಕೆ ಮಾತ್ರವೇ ಸೀಮಿತವಾಗಿದ್ದವು. ನಂತರದ ದಿನಗಳಲ್ಲಿ, ಸಿನಿಮಾಗಳನ್ನು ಆಡಿಯೊ ರೂಪದಲ್ಲಿ ಕ್ಯಾಸೆಟ್ ಮಾಡಿ ಬಿಡುಗಡೆ ಮಾಡಲಾಯಿತು.
ಇಂದು ಕ್ಯಾಸೆಟ್ಟುಗಳ ಟ್ರೆಂಡ್ ಇಲ್ಲ. ಆದರೆ, ಡಿಜಿಟಲ್ ಜಗತ್ತಿನಲ್ಲಿ ಶ್ರವಣಮಾಧ್ಯಮ ವಿವಿಧ ಮಜಲುಗಳನ್ನು ಕಂಡಿದೆ. ಇಂದಿನ ಬಿಝಿ ಜಗತ್ತಿನಲ್ಲಿ, ಪುಸ್ತಕ ಓದಲು ಹೆಚ್ಚಿನವರಿಗೆ ಆಸೆಯಿದೆ, ಆದರೆ ಪುರುಸೊತ್ತಿಲ್ಲ. ಅಂಥವರನ್ನು ಗಮನದಲ್ಲಿರಿಸಿಕೊಂಡು ಸೃಷ್ಟಿಯಾದ ಉದ್ಯಮವೇ “ಆಡಿಬಲ್’. ಇದು, ಇ-ಕಾಮರ್ಸ್ ದೈತ್ಯ ಅಮೇಜಾನ್ ಸಂಸ್ಥೆಗೆ ಸೇರಿದ ಉದ್ಯಮ.
ಇಲ್ಲಿ, ಪುಸ್ತಕಗಳನ್ನು ಖ್ಯಾತನಾಮರ ದನಿಯಲ್ಲಿ ರೆಕಾರ್ಡ್ ಮಾಡಿ, ಜನರಿಗೆ ಒದಗಿಸುತ್ತಾರೆ. ಮಕ್ಕಳ ಕಥೆ ಪುಸ್ತಕಗಳು, ನರ್ಸರಿ ಗೀತೆಗಳು, ಪ್ರೇಮ ಕಥನಗಳು, ಕಾದಂಬರಿಗಳು, ಪ್ರಸಿದ್ಧ ಸಾಹಿತಿಗಳ ಕೃತಿಗಳು. ಹೀಗೆ, ಎಲ್ಲದರ ಆಡಿಯೊ ಆವೃತ್ತಿಯೂ ಇಲ್ಲಿ ಲಭ್ಯ. ಅದನ್ನು ಕೇಳಬೇಕೆಂದರೆ, ನಿಗದಿತ ಶುಲ್ಕ ಕೊಟ್ಟು ಚಂದಾದಾರರಾಗಬೇಕಿತ್ತು. ಇದೀಗ ಮನೆಯಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಸಮಯದಸದುಪಯೋಗ ಪಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ, “ಆಡಿಬಲ್’ ಸಂಸ್ಥೆ 200ಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ನೀಡಿದೆ. ಇಲ್ಲಿರುವುದರಲ್ಲಿ ಹೆಚ್ಚಿನವು ಇಂಗ್ಲಿಷ್ ಪುಸ್ತಕಗಳು. ಇತರೆ ಕೆಲಸಗಳನ್ನು ಮಾಡಿಕೊಂಡೇ ಪುಸ್ತಕ ಕೇಳುವುದರಿಂದ, ಕೆಲಸ ಮುಗಿಸುವುದರ ಜೊತೆಗೆ ಪುಸ್ತಕ ಓದಿದ ಸಂತಸವೂ ಜೊತೆಯಾಗುತ್ತದೆ. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರ ಕಲಿಕೆಯೂ ಆಗುತ್ತದೆ. ಹೇಗೆಂದರೆ, ಇದರಲ್ಲಿ ಮಕ್ಕಳ ಕಥೆಗಳೂ, ಶಿಶುಗೀತೆಗಳೂ ಇವೆ. ಕಂಪ್ಯೂಟರ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್ ಯಾವುದರಲ್ಲಾದರೂ ಆಡಿಬಲ್ ಸೇವೆ ಪಡೆದುಕೊಳ್ಳಬಹುದು. tinyurl.com/r5w33tr
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.