ಜ್ಯೋತಿ ಬೆಳಗಿಸಿದ ಕ್ರೀಡಾ ತಾರೆಯರ ಸಂದೇಶ
Team Udayavani, Apr 7, 2020, 5:18 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕೊಟ್ಟ “ದೀಪ ಬೆಳಗುವ’ ಕರೆಗೆ ಇಡೀ ದೇಶದ ಜನತೆಯೇ ಒಗ್ಗೂಡಿತ್ತು, ರವಿವಾರ ರಾತ್ರಿ 9 ಗಂಟೆಗೆ ಕೋವಿಡ್ 19ವನ್ನು ಹೊಡೆದೊಡಿಸುವ ಆತ್ಮಶಕ್ತಿಯ ಪ್ರತೀಕವಾದ ಜ್ಯೋತಿಯನ್ನು ಇಡೀ ದೇಶದ ಜನತೆ ಬೆಳಗಿತು, ಜಾತಿ, ಮತ ಧರ್ಮಭೇದವನ್ನು ಮರೆತು ಎಲ್ಲರೂ ಒಗ್ಗೂಡಿ ಭಾವೈಕ್ಯದ ಸಂದೇಶ ಸಾರಿದ್ದು ವಿಶೇಷವಾಗಿತ್ತು.
ಜ್ಯೋತಿ ಬೆಳಗುವ ಕಾರ್ಯಕ್ರಮದಲ್ಲಿ ದೇಶದ ಖ್ಯಾತನಾಮ ಕ್ರೀಡಾಪಟುಗಳೆಲ್ಲ ಕೈ ಜೋಡಿಸಿದ್ದರು, ತಮ್ಮ ಮನೆಯಂಗಳದಲ್ಲಿ, ಬಾಲ್ಕನಿಯಲ್ಲಿ ಜ್ಯೋತಿ ಬೆಳಗಿಸಿದ ಕ್ರೀಡಾ ತಾರೆಯರು ಫೋಟೊ, ಸಂದೇಶವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಏನೆಲ್ಲ ಹಂಚಿಕೊಂಡಿದ್ದಾರೆ ಎನ್ನುವ ವರದಿ ಇಲ್ಲಿದೆ ಓದಿ…
ಟ್ವಿಟರ್ ಸಂದೇಶಗಳು
“ಎಲ್ಲರು ಒಟ್ಟಾಗಿ ನಡೆಸುವ ಒಂದು ಪ್ರಾರ್ಥನೆಯಿಂದ ದೇಶಕ್ಕೆ ಒಳಿತಾಗಬಹುದು, ಪ್ರತಿಯೊಬ್ಬರಿಗಾಗಿ ಪ್ರಾರ್ಥಿಸಿ, ಅವರೆಲ್ಲರಿಗೂ ಬೆಂಬಲವಾಗಿ ನಿಲ್ಲಿ’
-ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ
“ಪ್ರಧಾನ ಮಂತ್ರಿಗಳ ಕರೆಯ ಮೇರೆಗೆ ದೀಪ ಹಚ್ಚುವ ಕಾರ್ಯಕ್ರಮ ನಡೆಸಿದ್ದೇನೆ, ನಮಗಾಗಿ ದುಡಿಯುತ್ತಿರುವ ಡಾಕ್ಟರ್, ನರ್ಸ್, ಪೊಲೀಸ್ ಸಿಬಂದಿ ಸೇರಿದಂತೆ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಅಭಾರಿಯಾಗಿದ್ದೇನೆ, ಜೈ ಹಿಂದ್…ಜೈ ಭಾರತ್’
– ಯೋಗೇಶ್ವರ್ ದತ್, ಒಲಿಂಪಿಯನ್ ಕುಸ್ತಿಪಟು
“ಕೋವಿಡ್ 19 ವಿರುದ್ಧದ ಹೋರಾಟಕ್ಕೆ ನನ್ನ ದೇಶದ ಭಾವೈಕ್ಯತೆಯ ಪ್ರತೀಕವಾದ ದೀಪ, ಪ್ರಧಾನಿಗಳೇ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ’
– ಹಿಮಾ ದಾಸ್, ಖ್ಯಾತ ಆ್ಯತ್ಲೀಟ್
“ಇಂತಹ ಸಂಕಷ್ಟದ ಸಮಯದಲ್ಲಿ ನಾವೆಲ್ಲ ನಿಮ್ಮೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತೇವೆ.
– ಮಣಿಕಾ ಬಾತ್ರಾ, ಟೇಬಲ್ ಟೆನಿಸ್ ಆಟಗಾರ್ತಿ
“ಕೋವಿಡ್ 19 ವಿರುದ್ಧ ಹೋರಾಟದಲ್ಲಿ ಒಗ್ಗಟ್ಟಿನಿಂದ ತಮ್ಮ ಪಾತ್ರವನ್ನು ನಿರ್ವಹಿಸುತ್ತಿರುವ ಪ್ರತಿಯೊಬ್ಬರ ಜತೆಗೆ ನಾವಿದ್ದೇವೆ. ಎಲ್ಲರು ಒಟ್ಟಾಗಿ ಹೋರಾಡಿ ಶೀಘ್ರದಲ್ಲೇ ಎಲ್ಲ ಸಮಸ್ಯೆಗಳಿಂದ ಮುಕ್ತಿಪಡೆಯುವ. ಓಂ ಶಾಂತಿಃ.. ಶಾಂತಿಃ…ಶಾಂತಿಃ’
– ವೀರೇಂದ್ರ ಸೆಹವಾಗ್, ಮಾಜಿ ಕ್ರಿಕೆಟಿಗ
“ಬೆಳಕು ಮನೆಗೆ ತೆರಳಲು ನಮಗೆಲ್ಲ ಮಾರ್ಗದರ್ಶನ ನೀಡುತ್ತದೆ’
– ಕೆ.ಎಲ್.ರಾಹುಲ್, ಖ್ಯಾತ ಕ್ರಿಕೆಟಿಗ
“ಆರೋಗ್ಯ ಸೈನಿಕರಿಗಾಗಿ ಇಡೀ ದೇಶವೇ ಇಂತಹದೊಂದು ಕಾರ್ಯದಲ್ಲಿ ಒಟ್ಟಾಗಿ ನಿಂತು ಹೃದಯಸ್ಪರ್ಶಿ ನಮನಗಳನ್ನು ಸಲ್ಲಿಸಿದ್ದು ನೋಡಿ ಮನಸ್ಸು ತುಂಬಿ ಬಂತು, ಎಲ್ಲರದ್ದು ಅದ್ಭುತವಾದ ಭಾಗವಹಿಸುವಿಕೆ, ಇಂತಹ ಸಂದರ್ಭದಲ್ಲಿ ನಾವೆಲ್ಲ ಮತ್ತಷ್ಟು ದೃಢ ಮನಸ್ಸಿನಿಂದ ನಿಂತು ಕೋವಿಡ್ 19 ವಿರುದ್ಧ ಹೋರಾಟ ನಡೆಸಬೇಕಿದೆ’.
– ಹಾರ್ದಿಕ್ ಪಾಂಡ್ಯ, ಖ್ಯಾತ ಕ್ರಿಕೆಟಿಗ
“ನಮ್ಮ ಸುತ್ತಮುತ್ತ, ಆಸ್ಪತ್ರೆ, ರಸ್ತೆ ಬೀದಿಗಳನ್ನು ಸ್ವತ್ಛಗೊಳಿಸಿ ವೈರಸ್ ಹರಡದಂತೆ ತಡೆಯುತ್ತಿರುವ ಸ್ವತ್ಛತಾ ಸೈನಿಕರಿಗೆ ನನ್ನ ಹಾಗೂ ಕುಟುಂಬದ ಪರವಾಗಿ ಧನ್ಯವಾದಗಳು. ಜತೆಗೆ ನಮ್ಮ ಹಿರಿಯರನ್ನು ಜೋಪಾನವಾಗಿ ನೋಡಿಕೊಳ್ಳುವ ಪ್ರತಿಜ್ಞೆ ಮಾಡಿ, ಇಂತಹ ಸಂದರ್ಭದಲ್ಲಿ ಅವರ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿ’
– ಸಚಿನ್ ತೆಂಡುಲ್ಕರ್, ಹಿರಿಯ ಕ್ರಿಕೆಟಿಗ
“ಇಡೀ ಭಾರತಕ್ಕಾಗಿ ನಾವೆಲ್ಲ ಒಟ್ಟಾಗಿ ಇಂತಹ ಮಹತ್ಕಾರ್ಯದಲ್ಲಿ ಒಂದಾಗಿ ನಿಲ್ಲಬೇಕು. ಕಷ್ಟದ ಪರಿಸ್ಥಿತಿಯ ವಿರುದ್ಧ ಹೋರಾಡಿ ಗೆಲ್ಲಬೇಕು’.
– ಸುರೇಶ್ ರೈನಾ, ಖ್ಯಾತ ಕ್ರಿಕೆಟಿಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.