ಕೇರಳದಲ್ಲಿ ವಾಕ್ – ಇನ್ ಕಿಯಾಸ್ಕ್ ; ಇದೇ ಮೊದಲ ಬಾರಿಗೆ ದೇಶದಲ್ಲಿ ಇಂಥ ಪ್ರಯೋಗ
Team Udayavani, Apr 7, 2020, 6:43 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸಾಮೂಹಿಕವಾಗಿ ಸ್ಯಾಂಪಲ್‌ಗಳ ಸಂಗ್ರಹಕ್ಕಾಗಿ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಆರು ವಾಕ್-ಇನ್ ಕಿಯಾಸ್ಕ್ ಗಳನ್ನು ತೆರೆಯಲಾಗುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಮೊದಲ ಬಾರಿ ಈ ರೀತಿಯ ಕಿಯಾಸ್ಕ್ ಗಳನ್ನು ತೆರೆಯಲಾಗಿತ್ತು. ಇದೀಗ ಐಸೋಲೇಷನ್ ವಾರ್ಡ್‌ಗಳು, ಪರೀಕ್ಷಾ ಸೌಲಭ್ಯಗಳನ್ನು ಒಳಗೊಂಡಿರುವ ಎರ್ನಾಕುಲಂ ಜಿಲ್ಲೆಯ 4 ಆಸ್ಪತ್ರೆಗಳಲ್ಲಿ ಅದೇ ಮಾದರಿಯ ಕಿಯಾಸ್ಕ್ ಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಮುಂಭಾಗದಲ್ಲಿ ಗಾಜಿನಿಂದ ಸೀಲ್ ಮಾಡಲಾದ ವಾಕ್-ಇನ್ ಸ್ಯಾಂಪಲ್ ಕಿಯಾಸ್ಕ್ ನಲ್ಲಿ (ವಿಸ್ಕ್) ಒಬ್ಬ ವೈದ್ಯ ಸಿಬ್ಬಂದಿ ನಿಲ್ಲಲು ಸ್ಥಳಾವಕಾಶ ಇರಲಿದ್ದು, ಅಲ್ಲಿ ನಿಂತ ಸಿಬ್ಬಂದಿ ಸಾರ್ವಜನಿಕರಿಂದ ಸ್ಯಾಂಪಲ್ ಸಂಗ್ರಹಿಸುತ್ತಾರೆ.
ಮುಖಾಮುಖಿ ಭೇಟಿಯಾಗದೆಯೂ ಸಾರ್ವಜನಿಕರು ತಮ್ಮ ಗಂಟಲ ದ್ರವ ನೀಡಲು ಅವಕಾಶವಿದ್ದು, ಕಿಯಾಸ್ಕ್ ನ ಮುಂಭಾಗದ ಗಾಜಿಗೆ ಅಟ್ಯಾಚ್ ಆಗಿರುವ ಗ್ಲೌಸ್‌ಗಳಲ್ಲಿ ಸ್ಯಾಂಪಲ್ ಇರಿಸಬೇಕು. ಪ್ರತಿಯೊಂದು ಸ್ಯಾಂಪಲ್ ಪಡೆದ ನಂತರ ಗ್ಲೌಸ್‌ಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛ ಮಾಡಲಾಗುತ್ತದೆ. ಈ ರೀತಿಯ ಪ್ರಯೋಗ ಭಾರತದಲ್ಲೇ ಮೊದಲಾಗಿದ್ದು, ಇದರಿಂದ ಪಿಪಿಇ ಕಿಟ್‌ಗಳ ಬೇಡಿಕೆ ತಗ್ಗಲಿದೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಸುಹಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.