2 ಫೀವರ್ ಕ್ಲಿನಿಕ್ ಆರಂಭ
Team Udayavani, Apr 7, 2020, 3:57 PM IST
ತುಮಕೂರು: ಜಿಲ್ಲೆಯ ಶಿರಾ ತಾಲೂಕಿನಲ್ಲಿ ಕೋವಿಡ್ 19 ವೈರಸ್ ಸೋಂಕಿತ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿರಾ ಸಾರ್ವಜನಿಕ ಆಸ್ಪತ್ರೆ ಹಾಗೂ ಶಿರಾ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ 2 ಫೀವರ್ ಕ್ಲಿನಿಕ್ ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ತಿಳಿಸಿದರು.
ಸೋಮವಾರ ಮಾಹಿತಿ ನೀಡಿದ ಅವರು, ಕೋವಿಡ್ 19 ಸೋಂಕಿತ ಮೃತ ವ್ಯಕ್ತಿಯ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವೆಂದು ಘೋಷಿಸಿದ್ದು, ಈ ವಲಯದ ಮನೆಗಳನ್ನು ಪ್ರತಿದಿನ ಆರೋಗ್ಯ ಸಿಬ್ಬಂದಿ ಸಮೀಕ್ಷೆ ಮಾಡುತ್ತಿದ್ದಾರೆ. ಜ್ವರ, ತಲೆ ನೋವು, ಕೆಮ್ಮು, ನೆಗಡಿ ಮತ್ತಿತರ ಕೋವಿಡ್ 19 ರೋಗಲಕ್ಷಣಗಳು ಕಂಡುಬಂದರೆ ಕೂಡಲೇ ಫೀವರ್ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ಕಳುಹಿಸಲಾಗುವುದು. ಯಾವುದೇ ತೊಂದರೆ ಇಲ್ಲವೆಂದು ದೃಢಪಟ್ಟಲ್ಲಿ ಮಾತ್ರ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗುವುದು. ಜ್ವರ ಕಡಿಮೆಯಾಗದೆ ಕೆಮ್ಮಿನಿಂದ ಬಳಲುತ್ತಿದ್ದರೆ ಆಸ್ಪತ್ರೆಯ ಐಸೋಲೇಷನ್‌ನಲ್ಲಿ ಇಡಲಾಗುವುದು ಎಂದರು.
ಆರೋಗ್ಯ ಸಿಬ್ಬಂದಿಗೆ ಪ್ರತಿ ದಿನ ದೂರವಾಣಿ ಕರೆ, ವಿಡಿಯೋ ಹಾಗೂ ಝೂಮ್ ಆ್ಯಪ್ ಮೂಲಕ ತರಬೇತಿ ನೀಡಲಾಗುತ್ತಿದ್ದು, ಇವರು ಪ್ರತಿದಿನ ಮನೆ-ಮನೆಗೆ ಭೇಟಿ ನೀಡಿ ಕೋವಿಡ್ 19 ವೈರಸ್ ಹರಡುವ ಹಾಗೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಸಂಚಾರಿ ವಾಹನದ ಮೂಲಕ ಜಿಲ್ಲಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಗುರುತಿಸಲಾಗಿರುವ 480 ಮಂದಿ ಪ್ರಯಾಣಿಕರನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ. ಈ ಪೈಕಿ ಚಿಕ್ಕನಾಯಕನಹಳ್ಳಿ ತಾಲೂಕಿನ 8, ಗುಬ್ಬಿಯ 7, ಕೊರಟಗೆರೆ-2, ಕುಣಿಗಲ್ -14, ಮಧುಗಿರಿ-5, ಪಾವಗಡ-18, ಶಿರಾ – 11, ತಿಪಟೂರು-11, ತುಮಕೂರು – 173 ಹಾಗೂ ತುರುವೇಕೆರೆ ತಾಲೂಕಿನ 14 ಸೇರಿದಂತೆ ಒಟ್ಟು 263 ಜನರು ಕ್ವಾರೆಂಟೈನ್ ಅವಧಿಯಲ್ಲಿದ್ದಾರೆ. ದೆಹಲಿಗೆ ಹೋಗಿ ಬಂದಿರುವ ಸೋಂಕಿತ ಮೃತ ವ್ಯಕ್ತಿಯ ಸಹ ಪ್ರಯಾಣಿಕರು ಸೇರಿದಂತೆ ಒಟ್ಟು 18 ಮಂದಿ ನಿಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.