ಆ್ಯಪ್ ಗೇಮ್ ಲರ್ನಿಂಗ್ ಚೆಸ್
Team Udayavani, Apr 7, 2020, 6:21 PM IST
ಥತ್ತೇರಿಕೆ, ಟಿವಿ ಆಯ್ತು, ಮೊಬೈಲ್ ಸಂಭಾಷಣೆ ಮುಗೀತು. ಇನ್ನೇನಪ್ಪಾ ಮಾಡೋದು ಅಂತ ತಲೆ ಕೆರೆದುಕೊಳ್ಳಬೇಡಿ. ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಅಂತಿದೆ, ಗೊತ್ತಲ್ಲ? ಅಲ್ಲಿ 4.4 ರೇಟಿಂಗ್ ಇರೋ ಚೆಸ್ ಗೇಮ್ ಇದೆ. ಅದರೊಳಗೆ ಕುಳಿತು ನೋಡಿ. ಈಚೆಗೆ ಬರುವ ಮನಸ್ಸೇ ಆಗುವುದಿಲ್ಲ. ಅಯ್ಯೋ, ನನಗೆ ಚೆಸ್ ಬರೋಲ್ಲ ಎಂಬ ಚಿಂತೆ ಬೇಡ. ಅದೇ ನಿಮಗೆ ಚೆಸ್ ಕಲಿಸುತ್ತದೆ. ಇದರಲ್ಲಿ ಈಸಿ ಮೆಥೆಡ್, ಮೀಡಿಯಂ ಮೆಥೆಡ್ ಅಂತಿದೆ. ಎರಡರಲ್ಲೂ ಗೆದ್ದರೆ, ಹಾರ್ಡ್ ಮೆಥೆಡ್‌ಗೆ ಹೋಗ್ತೀರಿ. ಇಲ್ಲಿ ಒಬ್ಬರೇ ಚೆಸ್ ಆಡಬಹುದು. ಅಥವಾ ಆನ್ ಲೈನ್‌ನಲ್ಲಿ ಇನ್ನಾರಾದರೂ ಸಿಕ್ಕರೆ, ಇಬ್ಬರೂ ಅಂತರ ಕಾಪಾಡಿಕೊಂಡೇ ಆಟ ಮುಂದುವರಿಸಬಹುದು.
ಕ್ರಾಸ್ ವರ್ಡ್ : ಇಂಗ್ಲಿಷ್ ಕ್ರಾಸ್ ವರ್ಡ್ ಫಸಲ್ ಅಂತಿದೆ. ಇದರ ರೇಟಿಂಗ್ 4.4. ಇಂಗ್ಲಿಷ್ ಪದಬಂಧ ಇದು. ಹೊಸದಾಗಿ ಪದಬಂಧ ಮಾಡುವವರಿಗೆ ಅದ್ಭುತವಾದ ಆ್ಯಪ್. ಈಸಿ, ಮೀಡಿಯಂ, ಹಾರ್ಡ್, ವೆರಿ ಹಾರ್ಡ್ ಅನ್ನೋ ಹಂತಗಳು ಇವೆ. ಈಸಿ ಮೆಥೆಡ್‌ನಲ್ಲಿ ಐದೈದು ಕ್ರಾಸ್ ವರ್ಡ್ ಮಾತ್ರ ಇದೆ. ಪ್ರತಿ ಬಂಧಕ್ಕೆ ಅಕ್ಷರಗಳ ಹಿಂಟ್ ಕೊಡುತ್ತದೆ. ಅದನ್ನು ಹಿಂಬಾಲಿಸಿದರೆ, ಆಟ ಆಡುವುದು ಸುಲಭ. ಹೆಚ್ಚು ಹಿಂಟ್ ಬೇಕು ಅಂತಾದರೆ, ಒಂದು ಜಾಹೀರಾತಿನ ವಿಡಿಯೋ ನೋಡಬೇಕು. ಮೇಲ್ಭಾಗದಲ್ಲಿ ಸ್ಟಾರ್ ಇರುತ್ತದೆ. ಅದನ್ನು ಒತ್ತಿದರೆ, ನಮ್ಮ ಖಾತೆಯಲ್ಲಿ ಎಷ್ಟು ಹಿಂಟ್ ಅಕ್ಷರಗಳು ಇವೆ ಅನ್ನೋ ಮಾಹಿತಿ ಇರುತ್ತದೆ. ಕ್ರಾಸ್‌ವರ್ಡ್ ಆಡುವುದರಿಂದ, ಇಂಗ್ಲಿಷ್ ಪದಗಳ ಪರಿಚಯ ಚೆನ್ನಾಗಿ ಆಗುತ್ತದೆ.
ಮೊಬೈಲ್ ಪ್ರೀಮಿಯಂ ಲೀಗ್ : ಇದೂ ಗೂಗಲ್ ಆ್ಯಪ್‌ನಲ್ಲೇ ಸಿಗುತ್ತದೆ. ಇದರಲ್ಲಿ ಕೇರಂ, ಪೋಕರ್, ಹೋಪ್ಸ್, ಫುಟ್‌ಬಾಲ್, ವಾಲಿಬಾಲ್, ಮ್ಯಾಥ್ಸ್ ಕ್ಲಾಸ್‌ನಂಥ ಹೆಚ್ಚು ಕಮ್ಮಿ ಸುಮಾರು 50 ಆಟಗಳಿವೆ. ಇಲ್ಲಿ ಆ್ಯಪ್‌ನ ವಿಶೇಷ ಎಂದರೆ, ನೀವು ಹಣ ಕೊಟ್ಟು ಇಲ್ಲಿ ಆಟ ಆಡಬಹುದು. ಪುಕ್ಕಟ್ಟೆಯಾ ಗಿಯೂ ಆಡಬಹುದು. ಕೆಲವೊಂದು ಆಟಗಳಿಂದ ಸಣ್ಣ ಪ್ರಮಾಣದ ಹಣ ಕೂಡ ಮಾಡಬಹುದು. ಹೇಗೆ ಆಟ ಆಡಬೇಕು ಅನ್ನೋದನ್ನು ಹೇಳಿಕೊಡಲೆಂದೇ, ಗೈಡ್ ಫಾರ್ ಎಂಪಿಎಲ್ ಗೇಮ್ ಅನ್ನೋ ಇನ್ನೊಂದು ಆ್ಯಪ್ ಇದೆ. ಅಂದ ಹಾಗೆ, ಇದನ್ನು ಹುಡುಕು ವುದು ಬಹಳ ಸುಲಭ. ವಿರಾಟ್ ಕೋಹ್ಲಿ, ಇದರ ಬ್ರಾಂಡ್ ಅಂಬಾಸಿಡರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.