ಚಿಂತಿಸುವ ಸಮಯ ಅಲ್ಲ ಮೊದಲು ಜೀವ
Team Udayavani, Apr 8, 2020, 10:22 AM IST
ಹಿರಿಯ ನಟ ಅನಂತ್ ನಾಗ್ ಸಿನಿಮಾ ಚಿತ್ರೀಕರಣ, ಕಾರ್ಯಕ್ರಮದ ಹೊರತು ಸುಖಾಸುಮ್ಮನೆ ಎಲ್ಲೂ ಕಾಣಿಸಕೊಳ್ಳುವುದಿಲ್ಲ. ತಮ್ಮದೇ ಶಿಸ್ತಿನ ಜೀವನ ನಡೆಸಿ ಕೊಂಡಿರುವ ಅನಂತ್ ನಾಗ್ ಈ ಲಾಕ್‌ಡೌನ್ ವೇಳೆಯಲ್ಲಿ ಏನು ಮಾಡುತ್ತಿದ್ದಾರೆ ಅವರ ಈಗಿನ ದಿನಚರಿ ಹೇಗಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ.
ಅನಂತ್ ನಾಗ್ ಅವರಿಗೆ ಲಾಕ್ ಡೌನ್‌ನಿಂದ ಕಷ್ಟವಾಯಿಯೇ ಎಂದರೆ, ನಗುತ್ತಾ ಹೀಗೆ ಉತ್ತರಿಸುತ್ತಾರೆ. ಬಹುಶಃ ನನಗೆ ಈಗ 17 ವರ್ಷವಾಗಿದ್ದರೆ ಮನೆಯಲ್ಲೇ ಕೂರಲು ಕಷ್ಟವಾಗುತ್ತಿತೇನೋ. ಆದರೆ ನನಗೀಗ 71. ಈ ಲಾಕ್ ಡೌನ್ ನನಗೇನೂ ತೊಂದರೆ ಕೊಟ್ಟಿಲ್ಲ. ಏಕೆಂದರೆ ಇದು ಜನರ ಒಳ್ಳೆಯದಕ್ಕಾಗಿ ಮಾಡಿರೋದು. ಈ ಹಿಂದೆಯೂ ಮಹಾಮಾರಿ ರೋಗಗಳು ಬಂದು ಲಕ್ಷಾಂತರ ಜನ ಸಾವನ್ನಪ್ಪಿದ್ದರು ಎಂಬುದನ್ನು ಓದುತ್ತಿದ್ದೆ. ಈಗ ಮತ್ತೆ ಅಂತಹ ಪರಿಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ನಾವೆಲ್ಲ ಎಚ್ಚರದಿಂದ ಇದ್ದು, ಸರ್ಕಾರದ ಆದೇಶಗಳನ್ನು ಪಾಲಿಸಬೇಕು’ ಎನ್ನುವ ಅನಂತ್ ನಾಗ್ ಅವರು ತಮ್ಮ ದಿನಚರಿಯ ಬಗ್ಗೆಯೂ ಹೇಳುತ್ತಾರೆ.
ನನ್ನ ದಿನಚರಿಯಲ್ಲಿ ಹೆಚ್ಚೇನು ಬದಲಾವಣೆಯಾಗಿಲ್ಲ. ಸಾಮಾನ್ಯವಾಗಿ ನಾನು ಆರು ತಿಂಗಳು ಚಿತ್ರೀಕರಣ ಮಾಡಿ, ಮಿಕ್ಕ ಆರು ತಿಂಗಳು ಮನೆಯಲ್ಲಿಯೇ ಇರುತ್ತೇನೆ. ಈ ವೇಳೆ ಪ್ರಾರ್ಥನೆ, ಧ್ಯಾನ, ಓದು, ಯೋಗ, ವ್ಯಾಯಾಮ ಮಾಡುತ್ತಿರುತ್ತೇನೆ. ಅದು ಈಗಲೂ ಮುಂದುವರೆದಿದೆ. ಊರು, ಆಶ್ರಮ ಎಂದೆಲ್ಲಾ ಹೋಗುತ್ತಿದ್ದೆ. ಆದರೆ ಸದ್ಯಕ್ಕೆ ಅದು ಸಾಧ್ಯವಾಗುತ್ತಿಲ್ಲ. ಇನ್ನು, ನಾವು ವರ್ಷಕ್ಕೊಂದು ಬಾರಿ ವಿದೇಶ ಟ್ರಿಪ್ ಪ್ಲ್ಯಾನ್ ಮಾಡುತ್ತಿದ್ದೆವು. ಪ್ರತಿ ಬಾರಿ ಪ್ಲ್ಯಾನ್ ಮಾಡುವಾಗಲೂ ಚೈನಾವನ್ನು ಬಿಡುತ್ತಿದ್ದೆವು. ಇನ್ನು ಫಾರಿನ್ ಇರಲ್ಲ’ ಎನ್ನುವುದು ಅನಂತ್ ನಾಗ್ ಅವರ ಮಾತು.
ಕೋವಿಡ್ 19 ದಿಂದ ಎಲ್ಲಾ ಕ್ಷೇತ್ರಗಳು ನೆಲ ಕಚ್ಚಿವೆ. ದೊಡ್ಡ ಮಟ್ಟದಲ್ಲಿ ಆರ್ಥಿಕ ಹೊಡೆತ ಬಿದ್ದಿದೆ. ಈ ಬಗ್ಗೆ ಮಾತನಾಡುವ ಅನಂತ್ ನಾಗ್ ಅವರು, ಸಿನಿಮಾ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಕೊರೊನಾ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಆದರೆ ಈಗ ಆ ಬಗ್ಗೆ ಚಿಂತಿಸಿ ಕೂರಲು ಸಮಯವಿಲ್ಲ. ಮೊದಲು ಜೀವ, ಆ ನಂತರ ಜೀವನ. ಕೊರೊನಾ ಎಂಬ ಮಹಾಮಾರಿಯಿಂದ ಎಲ್ಲರೂ ದೂರವಿರಬೇಕು. ಅದ ರಿಂದ ಮುಕ್ತವಾದ ಬಳಿಕ ಮಿಕ್ಕ ಯೋಚನೆಗಳು ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.