ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

Team Udayavani, Apr 8, 2020, 2:40 PM IST

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಸಾಂದರ್ಭಿಕ ಚಿತ್ರ

ಲಂಡನ್‌: ಕೋವಿಡ್-19ರ ಸಂದರ್ಭದಲ್ಲಿ ಈಗ ಏನಿದ್ದರೂ ವರ್ಕ್‌ ಆಫ್ ಹೋಂ ಎನ್ನೋ ಕಾಲ. ವರ್ಕ್‌ ಫ್ರಾಮ್‌ ಆಫೀಸ್‌ ಎಂಬುದು ಕೆಲವೇ ಜಾಗಗಳಿಗೆ ಸೀಮಿತ. ಅದರಲ್ಲೂ ಐಟಿ,ಬಿಟಿ ಗೆ ಮನೆಯಿಂದಲೇ ಕೆಲಸವೆಂದರೆ ಆಗಬಹುದು. ಉಳಿದವುಗಳಿಗೆ ಕಷ್ಟ.

ಅಂಥದ್ದೇ ಒಂದು ಸುದ್ದಿ ಬ್ರಿಟನ್‌ನದ್ದು. ಮೃಗಾಲಯ ನೋಡಿಕೊಳ್ಳುವವರಿಗೆ ವರ್ಕ್‌ ಫ್ರಾಮ್‌ ಹೋಂ ಎಂದರೆ ಹೇಗಿರಬಹುದು? ಅವರೇನೋ ಖುಷಿಯಿಂದ ಮನೆಗೇ ಹೋಗಿ ಕುಳಿತುಕೊಳ್ಳಬಹುದು ಎನ್ನೋಣ. ಆದರೆ ಮೃಗಾಲಯದಲ್ಲಿರುವ ವನ್ಯಜೀವಿಗಳ, ಪ್ರಾಣಿಗಳ ಕಥೆ? ದೇವರೇ ಕೇಳಬೇಕು.

ಅದಕ್ಕೆಂದೇ ಬ್ರಿಟನ್‌ನ ಕಾರ್ನ್ವಾಲ್‌ನಲ್ಲಿರುವ ವರ್ಲ್ಡ್ ಪ್ಯಾರಟ್‌ ಟ್ರಸ್ಟ್‌ ನಡೆಸುವ ಪ್ಯಾರಡೈಸ್‌ ಪಾರ್ಕ್‌ನ ಸಿಬಂದಿ ನಾವು ಅಂದುಕೊಳ್ಳುವ ಹಾಗೆ ಮಾಡಿಲ್ಲ. ಅದರ ಬದಲಾಗಿ ಅವರು ಅರಣ್ಯದಲ್ಲೇ ಸ್ವಯಂ ಏಕಾಂತವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್‌ ಮುಗಿಯುವವರೆಗೆ ಅವರು ಅಭಯಾರಣ್ಯದಲ್ಲೇ ಇದ್ದು ಪ್ರಾಣಿಗಳನ್ನು ನೋಡಿಕೊಂಡು ಬದುಕುತ್ತಾರಂತೆ.
ಇನ್ನು ಮೃಗಾಲಯದ ಪ್ರಾಣಿಗಳ ಹಾರೈಕೆಗೂ ಕೋವಿಡ್‌-19 ಬಿಸಿ ತಟ್ಟಿದೆ. ಅವುಗಳ ಸಂರಕ್ಷಣೆ ಹಾಗೂ ಪಾಲನೆಯೇ ಸವಾಲಾಗಿ ಪರಿಣಮಿಸಿದೆ.

ಕೆಲಸದ ಸ್ಥಳವೇ ಮನೆ
ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದ ವಿಶ್ವದೆಲ್ಲೆಡೆ ಸಂಪೂರ್ಣ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ. ಮೃಗಾಲಯದ ನಾಲ್ವರು ಸಿಬಂದಿ ಕೋವಿಡ್‌-19 ತಡೆಗಾಗಿ ಪ್ರಾಣಿಗಳ ಪಾಲನೆ ಹೊತ್ತು ಅಲ್ಲಿಯೇ ಉಳಿದಿದ್ದಾರೆ ಎಂದು ಬಿಬಿಸಿ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.

ಪ್ರಾಣಿಗಳ ಸರಂಕ್ಷಣೆ ಆದ್ಯ ಕರ್ತವ್ಯ
ನಾವು ಹಸಿವಾದರೆ ಬಾಯಿ ಬಿಟ್ಟು ಕೇಳುತ್ತೇವೆ. ಆದರೆ ಮೂಕ ಪ್ರಾಣಿಗಳಿಗೆ ಅದು ಸಾಧ್ಯವಿಲ್ಲ. ನಾವು ತಿನ್ನಲು ನೀಡಿದರೆ ಅವು ತಿನ್ನುತ್ತವೆ. ಇಲ್ಲವಾದರೆ ಇಲ್ಲ. ಅದರಲ್ಲೂ ಮೃಗಾಲಯ ಪ್ರಾಣಿಗಳು ಒಂದು ವಿಭಿನ್ನವಾದ ವಾತಾವರಣಕ್ಕೆ ಒಗ್ಗಿ ಹೋಗಿರುತ್ತವೆ. ಪ್ರತಿದಿನ ನೂರಾರು ಜನ ಮಧ್ಯೆ ಓಡಾಡಿಕೊಂಡ ಸಾರ್ವಜನಿಕರನ್ನು ಮನೆಯಲ್ಲಿಯೇ ಇರಿ ಎಂದು ಹೇಳಿದಾಗ ಹೇಗೆ ಕಸಿವಿಸಿ ಅಗುತ್ತದೆಯೋ, ಪ್ರತಿನಿತ್ಯ ಅವುಗಳನ್ನು ಬಂದು ಮಾತನಾಡಿಸುತ್ತಿದ್ದ ಸಾವಿರಾರು ಜನ ಒಮ್ಮೆಲೇ ಮಾಯಾವಾದರೆ ಅವುಗಳಲ್ಲಿಯೂ ಬದಲಾವಣೆ ಉಂಟಾಗುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಪ್ರಾಣಿಗಳ ಸಂರಕ್ಷಣೆಯೂ ಆದ್ಯ ಕರ್ತವ್ಯ ಎನ್ನುತ್ತಾರೆ ಈ ಸಿಬಂದಿ

ಮೃಗಾಲಯದಲ್ಲಿಯೇ ವಾಸ
ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು, ಸತತ 12 ವಾರ ಮೃಗಾಲಯದಲ್ಲಿಯೇ ನಾವು ಇರಲು ತೀರ್ಮಾನಿಸಿದ್ದು, ಅಲ್ಲಿಯೇ ಒಂದು ಗುಡಿಸಲು ಕಟ್ಟಿಕೊಂಡಿದ್ದೇವೆ. ನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ತಮ್ಮ ಸ್ನೇಹಿತರ ಬಳಿ ಮತ್ತು ಇತರೆ ಸಿಬಂದಿ ಮೂಲಕ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

12 ಸಾವಿರ ಪಕ್ಷಿಗಳು
ಈ ಅಭಯಾರಣ್ಯದಲ್ಲಿ ಸುಮಾರು 12 ಸಾವಿರ ಪಕ್ಷಿಗಳಿದ್ದು, ಕೆಂಪು ಪಾಂಡಾಗಳು, ಅಳಿಲುಗಳು ಸೇರಿದಂತೆ ಹಲವಾರು ಪ್ರಾಣಿಗಳಿವೆ. ಅವುಗಳಿಗೆ ಆಹಾರ ಒದಗಿಸುವುದು, ಶುಚಿತ್ವ ನೋಡಿಕೊಳ್ಳುವುದು ಮತ್ತು ಔಷಧಿ ನೀಡುವುದು ಇತ್ಯಾದಿ ಕೆಲಸದಲ್ಲಿ ಸಿಬಂದಿ ತೊಡಗಿಕೊಂಡಿದ್ದಾರೆ.

ಟಾಪ್ ನ್ಯೂಸ್

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.