Lockdown ಹಿನ್ನೆಲೆಯಲ್ಲಿ ಕಾಪು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಕಾರ್ಯಾಚರಣೆ
Team Udayavani, Apr 8, 2020, 2:47 PM IST
ಲಾಕ್ ಡೌನ್ ಹಿನ್ನಲೆಯಲ್ಲಿ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಟ್ಟು ನಿಟ್ಟಿನ ಕಾರ್ಯಾಚರಣೆ ಮುಂದುವರಿದಿದೆ. ಕಾಪು ಎಸ್ಸೈ ರಾಜಶೇಖರ ಸಾಗನೂರು ಅವರ ನೇತೃತ್ವದಲ್ಲಿ ಪೊಲೀಸರು ನಗರದಾದ್ಯಂತ ಚುರುಕಿನ ಕಾರ್ಯಾಚರಣೆ ಮುಂದುವರಿಸಿದ್ದು ಬುಧವಾರ ವಾಹನ ತಪಾಸಣೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಕಾಪು ಪೇಟೆಯಲ್ಲಿ ತೆರೆದಿರುವ ವಾಣಿಜ್ಯ ಬ್ಯಾಂಕ್ ಗಳಿಗೆ ಭೇಟಿ ನೀಡಿದ ಪೊಲೀಸರು ಅಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳು ಮತ್ತು ಜನರ ನಡುವಿನ ಅಂತರ ಕಾಯ್ದುಕೊಳ್ಳುವಿಕೆಯ ಕ್ರಮವನ್ನು ಪರಿಶೀಲಿಸಿದರು. 11 ಗಂಟೆಯ ಬಳಿಕವೂ ತೆರೆದಿದ್ದ ಅಂಗಡಿಗಳ ಮಾಲಕರಿಗೆ ಅಂಗಡಿ ಮುಚ್ಚುವಂತೆ ಎಚ್ಚರಿಕೆ ನೀಡಿದ ಅವರು ಬೇಕಾ ಬಿಟ್ಟಿಯಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆ ಹಿಡುದು ಎಚ್ಚರಿಕೆಯನ್ನೂ ನೀಡಿದ್ದಾರೆ.