ಗ್ರಾಹಕರಿಂದ ಸಹಿ ಪಡೆದು ಪಡಿತರ ವಿತರಿಸಲು ನಿರಾಸಕ್ತಿ
Team Udayavani, Apr 8, 2020, 3:16 PM IST
ಆಲಮಟ್ಟಿ: ಪಡಿತರ ಪಡೆಯಲು ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿಯಲ್ಲಿ ನಿಂತಿರುವ ನಾಗರಿಕರು.
ಆಲಮಟ್ಟಿ: ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಮಹಿಳೆಯರು, ವಯೋವೃದ್ಧರು ಪರದಾಡುವಂತಾಗಿದ್ದು, ಸರ್ಕಾರ ಬಯೋಮೆಟ್ರಿಕ್ ಹಾಗೂ ಒಟಿಪಿ ಕ್ರಮಗಳನ್ನು ನಿಲ್ಲಿಸಿ ಗ್ರಾಹಕರ ಸಹಿ ಪಡೆದು ಸರ್ಕಾರದ ನಿಯಮಗಳು ಉಲ್ಲಂಘನೆಯಾಗದಂತೆ ಹಂಚಿಕೆ ಮಾಡಲು ಆದೇಶಿಸಿದ್ದರೂ ಸ್ಥಳೀಯ ಅನ್ನದಾನೇಶ್ವರಿ ನ್ಯಾಯಬೆಲೆ ಅಂಗಡಿಯಲ್ಲಿ ಮಾತ್ರ ಒಟಿಪಿ ಬರದಿದ್ದರೇ ಪಡಿತರ ಇಲ್ಲ ಎನ್ನುವಂತಾಗಿದೆ.
ಆಲಮಟ್ಟಿ ಪಟ್ಟಣಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಇಲ್ಲಿನ ನಾಗರಿಕರಿಗೆ ಪಡಿತರ ಧಾನ್ಯ ವಿತರಣೆ ಮಾಡಲು ಕಳೆದ ಐದು ದಿನಗಳಿಂದ ಒಟಿಪಿ ಮಾದರಿ ಅನುಸರಿಸಿ ಒಂದೇ ಗಣಕ ಯಂತ್ರ ಬಳಸಿಕೊಂಡು ಪಡಿತರ ವಿತರಣೆಗೆ ಕ್ರಮಕೈಗೊಂಡಿರುವುದರಿಂದ ಒಂದೆರಡು ಪಡಿತರ ಚೀಟಿಯವರಿಗೆ ವಿತರಣೆ ಮಾಡುವಷ್ಟರಲ್ಲಿ ಸರ್ವರ್ ಡೌನ್ ಆಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಐದು ದಿನಗಳಿಂದ ಪಡಿತರ ವಿತರಣೆ ಮಾಡಲಾಗುತ್ತಿದೆಯಾದರೂ ಅರ್ಧದಷ್ಟೂ ಜನರಿಗೂ ಇನ್ನೂ ಪಡಿತರ ಸಿಕ್ಕಿಲ್ಲ. ಇತ್ತ ಸರ್ಕಾರದ ಆದೇಶವನ್ನೂ ಪಾಲಿಸದೇ ಅತ್ತ ಹೆಚ್ಚುವರಿ ಗಣಕಯಂತ್ರಗಳನ್ನೂ ಬಳಸದೇ ಇರುವುದರಿಂದ ಪಡಿತರ ಆಹಾರ ಧಾನ್ಯ ಪಡೆಯಲು ದಿನಬೆಳಗಾದರೆ ಪಡಿತರಕ್ಕಾಗಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇದರಿಂದ ಮಾರಕ ರೋಗ ಕರೋನಾ ಹರಡುವ ಭೀತಿ ಒಂದೆಡೆಯಾದರೆ ಮನೆಯಲ್ಲಿ ಚಿಕ್ಕಮಕ್ಕಳನ್ನು ಬಿಟ್ಟು ಬಂದು ಸಾಲಿನಲ್ಲಿ ನಿಲ್ಲುತ್ತಿರುವ ಮಹಿಳೆಯರು ಹಾಗೂ ವೃದ್ಧರಿಗೆ ತೀವ್ರತೊಂದರೆಯಾಗುತ್ತದೆ. ತಾಪಂ ಸದಸ್ಯ ಮಲ್ಲು ರಾಠೊಡ, ಗ್ರಾಪಂ ಅಧ್ಯಕ್ಷೆ ಸೈದಮ್ಮಾ ಬೆಣ್ಣಿ ಹಾಗೂ ಆಲಮಟ್ಟಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಎಸ್ .ಜಿ.ಲಾಡ್ ಹಾಗೂ ಸಿಬ್ಬಂದಿ ನ್ಯಾಯಬೆಲೆ ಅಂಗಡಿ ಎದುರು ಠಿಕಾಣಿ ಹೂಡಿ ಪಡಿತರ ಪಡೆಯಲು ಬರುವ ನಾಗರಿಕರಿಗೆ ಸಾಮಾಜಿಕ ಅಂತರ ಕಾಪಾಡಲು ಹಾಗೂ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಬೇಕಿದೆ.
ಸರ್ಕಾರದ ಆದೇಶ ಗೌರವಿಸುತ್ತೇವೆ. ಆದರೆ, ಕೊರೊನಾ ಪರಿಣಾಮ ಪುಸ್ತಕದಲ್ಲಿ ಪಡಿತರ ಗ್ರಾಹಕರ ಸಹಿ ಪಡೆಯಬೇಕಾದರೆ ಒಂದೇ ಪೆನ್ನನ್ನು ಹಲವರು ಉಪಯೋಗಿಸುತ್ತಾರೆ, ಅಲ್ಲದೇ ಹೆಬ್ಬೆಟ್ಟು ಮುದ್ರೆ ಹಾಕಬೇಕಾದರೆ ಒಂದೇ ಪ್ಯಾಡ್ ಬಳಸಬೇಕಾಗುತ್ತದೆ. ಅದರಿಂದಾಗಿ ಸೋಂಕು ಹರಡಬಾರದು ಎಂದು ಒಟಿಪಿ ಮಾದರಿ ಅನುಸರಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ.
ಶಿವಾನಂದ ಟುಬಾಕಿ,
ಆಪರೇಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.