ಕೊರೊನಾ ತಡೆಗೆ ಕಠಿಣ ಕ್ರಮ ಅನಿವಾರ್ಯ
ಹೆಚ್ಚುವರಿ ನಾಲ್ಕು ಚೆಕ್‌ಪೋಸ್ಟ್ ತೆರೆಯಲು ಶಾಸಕ ಭೀಮಾ ನಾಯ್ಕ ಸೂಚನೆ
Team Udayavani, Apr 8, 2020, 3:43 PM IST
ಕೊಟ್ಟೂರು: ಶಾಸಕ ಭೀಮಾ ನಾಯ್ಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು
ಕೊಟ್ಟೂರು: ಕೋವಿಡ್ -19ಗೆ ಸಂಬಂಧಿಸಿದಂತೆ ಶಾಸಕ ಎಸ್. ಭಿಮಾ ನಾಯ್ಕ ನೇತೃತ್ವದಲ್ಲಿ ಕೊಟ್ಟೂರಿನ ಹರಿಪ್ರಿಯ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದರು. ಜಿಲ್ಲೆಯಲ್ಲಿ ಈಗಾಗಲೇ 6 ಕೊರೊನಾ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿಯ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಆರೋಗ್ಯ ಇಲಾಖೆ ಶ್ರಮದಿಂದಾಗಿ ಬೇರೆ ಊರು, ದೇಶಗಳಿಂದ ಬಂದವರ ಮಾಹಿತಿ ಪಡೆದು ಅವರನ್ನೂ ಗೃಹಬಂಧನಲ್ಲಿ ಇರಿಸಲಾಗಿದೆ ಎಂದರು.
ಕೊರೊನಾ ತಡೆಗಟ್ಟಲು ಕೆಲವು ಕಠಿಣ ಕ್ರಮ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಹಲವು ಮಹತ್ವದ ಅಂಶಗಳನ್ನು ಚರ್ಚಿಸಲಾಯಿತು. ಪ್ರಧಾನಿ, ಸಿಎಂ ಸೂಚಿಸಿರುವ ಲಾಕ್‌ಡೌನ್ ಗೆ ಸ್ಪಂದಿಸಬೇಕಾದುದು ನಮ್ಮ ಕರ್ತವ್ಯ ಎಂದರು. ತಾಲೂಕು ದಂಡಾಧಿಕಾರಿಗಳು ಈಗಾಗಲೇ ಸ್ವತಃ ವಾರ್ಡ್‌ಗಳಲ್ಲಿ ಹಾಗೂ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಔಷಧ ಗಳನ್ನು ಸಿಂಪಡಿಸಿ ಜನ ಜಾಗ್ರತೆ ಮೂಡಿಸುತ್ತಿದ್ದಾರೆ ಹಾಗೂ ಪ್ರತಿ ವಾರ್ಡ್‌ನ ಕಡುಬಡವರಿಗೆ
ಉಚಿತ ಹಾಲು ಸೌಲಭ್ಯ ಮತ್ತು 2 ತಿಂಗಳ ಪಡಿತರವನ್ನು ಸಹ ವಿತರಿಸಲಾಗುತ್ತಿದೆ ಎಂದರು.
ಎರಡು ಜಿಲ್ಲೆಗಳು ಸೇರುವ ಗಡಿಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಸಂಚಾರ ನಿಯಮ ಪಾಲಿಸುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇವೆ ಶ್ಲಾಘನೀಯ ಎಂದರು. ಇನ್ನೂ 4 ಚೆಕ್ ಪೋಸ್ಟ್ ನಿರ್ಮಿಸುವಂತೆ ಸೂಚಿಸಿದರು. ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಮತ್ತು ಮುಸ್ಲಿಂ ಬಾಂಧವರು ನಮಾಜ್‌ನ್ನು ಮನೆಯಲ್ಲಿಯೇ ಮಾಡಿಕೊಳ್ಳಿ ಎಂದು ಹೇಳಿದರು.
ತಾಲೂಕು ದಂಡಾಧಿಕಾರಿ ಜಿ.ಅನಿಲ್ ಕುಮಾರ, ಜಿಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಪಶುವೈದ್ಯ ಡಾ| ರವಿಪ್ರಕಾಶ, ಪಪಂ ಮುಖ್ಯಾಧಿಕಾರಿ ಎಚ್.ಎಫ್ ಬಿದರಿ, ತಾಲೂಕು ವೈದ್ಯಾಧಿಕಾರಿ ಷಣ್ಮುಖ ನಾಯ್ಕ, ರವೀಂದ್ರ ಕುರುಬಗಟ್ಟೆ, ಕಾಳಿಂಗ, ಇಒ ಬಸಣ್ಣ ಹಾಗೂ ಪಪಂ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.