ಲಾಕ್ ಡೌನ್ ತೆರವು ಬೆನ್ನಲ್ಲೇ ಪ್ರವಾಸಿ ತಾಣಕ್ಕೆ ಮುಗಿಬಿದ್ದ ಚೀನೀಯರು!
Team Udayavani, Apr 8, 2020, 8:52 PM IST
ದಕ್ಷಿಣ ಚೀನದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹುವಾಂಗ್‌ಶಾನ್ ಪರ್ವತ ಶ್ರೇಣಿ.
ಬೀಜಿಂಗ್: 2 ತಿಂಗಳುಗಳ ಬಳಿಕ ಲಾಕ್‌ಡೌನ್ ಸಡಿಲಿಸಿದ ಬೆನ್ನಲ್ಲೇ, ಸೋಂಕು ಹರಡುವ ಭಯವನ್ನೂ ಮರೆತ ಚೀನದ ಸಾವಿರಾರು ಪ್ರಜೆಗಳು ಪ್ರವಾಸಿ ತಾಣಗಳಿಗೆ ಹುಚ್ಚರಂತೆ ಮುಗಿಬಿದ್ದಿದ್ದಾರೆ. ಲಾಕ್ ಡೌನ್ ಸಡಿಲಿಸಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಸಾವಿರಾರು ಮಂದಿ ಒಂದೇ ಕಡೆ ಸೇರಿರುವುದು ಸೋಂಕು ಮತ್ತೆ ವ್ಯಾಪಕವಾಗುವ ಆತಂಕ ಸೃಷ್ಟಿಸಿದೆ.
ಜತೆಗೆ, ಸೋಂಕಿನ ಜನರನ್ನು ನಿಯಂತ್ರಿಸುವುದು ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಸೋಂಕಿನ ಉಗಮ ಸ್ಥಾನವಾಗಿರುವ ವುಹಾನ್ ನಗರದಲ್ಲಿನ ಎಲ್ಲ ತಾತ್ಕಾಲಿಕ ಆಸ್ಪತ್ರೆಗಳನ್ನು ಮುಚ್ಚಿದ ಚೀನ ಸರಕಾರ, ಲಾಕ್ ಡೌನ್ ಅನ್ನು ತಕ್ಕ ಮಟ್ಟಿಗೆ ಸಡಿಲಿಸಿತ್ತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ನಾಗರಿಕರು, ದಕ್ಷಿಣ ಚೀನದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹುವಾಂಗ್‌ಶಾನ್ ಪರ್ವತ ಶ್ರೇಣಿ ನೋಡಲು ಮುಗಿಬಿದ್ದಿದ್ದಾರೆ.
ಚೀನದಲ್ಲಿ ಹೊಸ ಸಾವು ಸಂಭವಿಸಿಲ್ಲ
ಕೋವಿಡ್ 19 ವೈರಸ್ ನ ತವರೂರಾಗಿರುವ ಚೀನದಲ್ಲಿ ಮಂಗಳವಾರಕ್ಕೆ ಸಂಬಂಧಿಸಿದಂತೆ ಹೊಸತಾಗಿ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಜನವರಿಂದ ಈಚೆಗೆ ಸೋಂಕಿನ ಪರಿಣಾಮವಾಗಿ ಸಾವಿನ ಸಂಖ್ಯೆ ಮಾಹಿತಿ ನೀಡುತ್ತಿದ್ದ ರಾಷ್ಟ್ರದಿಂದ ಇದೇ ಮೊದಲ ಬಾರಿಗೆ ಹೊಸ ಸಾವಿನ ಮಾಹಿತಿ ಪ್ರಕಟಗೊಂಡಿಲ್ಲ.
ಆದರೆ ವಿದೇಶಗಳಿಂದ ಬಂದ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 983ಕ್ಕೆ ಏರಿಕೆಯಾಗಿದೆ. ಈ ಅಂಶವನ್ನು ಚೀನದ ರಾಷ್ಟ್ರೀಯ ಆರೋಗ್ಯ ಆಯೋಗ ನೀಡಿದೆ. ಅಲ್ಲಿ ಒಟ್ಟು 3, 331 ಸಾವು ಸಂಭವಿಸಿದೆ. ಚೀನದಲ್ಲಿ ಸೋಮವಾರದವರೆಗೆ 81,740 ಪ್ರಕರಣಗಳು ಖಚಿತಪಟ್ಟಿವೆ. ಈ ಪೈಕಿ 1, 242 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 77,167 ಮಂದಿ ಡಿಸ್ಚಾರ್ಜ್ ಆಗಿದ್ದಾರೆಂದು ಆಯೋಗ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.