ಮಲ್ಲಾಪುರ ಕೆರೆಯಲ್ಲಿ ಮೀನುಗಳ ಸಾವು

ದುರ್ವಾಸನೆಗೆ ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣ

Team Udayavani, Apr 9, 2020, 11:05 AM IST

09-April-3

ಚಿತ್ರದುರ್ಗ: ಮಲ್ಲಾಪುರ ಕೆರೆಯಲ್ಲಿ ಸತ್ತಿರುವ ಮೀನುಗಳ ರಾಶಿ.

ಚಿತ್ರದುರ್ಗ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದಲ್ಲೇ ಇರುವ ಮಲ್ಲಾಪುರ ಕೆರೆಯಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದುದ್ದು, ದುರ್ವಾಸನೆ ಬರುತ್ತಿದೆ. ಇದರಿಂದ ಮಲ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಜನತೆ ಕೆರೆ ಬಳಿ ಹಾದು ಹೋಗುವುದು ಕಷ್ಟವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ನಗರಕ್ಕೆ ಬರುವವರು ಕೂಡಾ ವಾಸನೆಗೆ ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೋವಿಡ್-19 ವೈರಸ್‌ನಿಂದ ಭಯಭೀತರಾಗಿರುವ ಜನರಿಗೆ ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಸತ್ತು ಕೆಟ್ಟ ವಾಸನೆ ಬರುತ್ತಿರುವುದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಚಿತ್ರದುರ್ಗದ ನಗರದ ಎಲ್ಲಾ ತ್ಯಾಜ್ಯ ಮಲ್ಲಾಪುರ ಕೆರೆಯ ಒಡಲು ಸೇರುತ್ತಿದ್ದು, ಆಳುವ ವರ್ಗದವರು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಕೆರೆಯಲ್ಲಿ ಶೇಖರಣೆಯಾಗುತ್ತಿರುವ ಮಲೀನ ಹಾಗೂ ವಿಷಯುಕ್ತ ನೀರು ಕೂಡಾ ಮೀನುಗಳ ಮಾರಣ ಹೋಮಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದು, ಇತ್ತೀಚೆಗೆ ಸುರಿದ ಮಳೆಯ ಕಾರಣಕ್ಕೆ ಈ ರೀತಿ ಮೀನುಗಳು ಸಾಯುತ್ತಿರಬಹುದು ಎಂದು ಅಂದಾಜಿಸಲಾಗಿದೆ. ತಕ್ಷಣ ಈ ಮೀನುಗಳನ್ನು ಹಿಡಿದು ಹೂಳಬೇಕು. ಜತೆಗೆ ಕೆರೆಯಲ್ಲಿರುವ ಇತರೆ ಮೀನುಗಳನ್ನು ಹಿಡಿದು ಮಾರಾಟ ಮಾಡಬೇಕು. ಆಗ ಕೆರೆಯಲ್ಲಿನ ಮೀನುಗಳ ಪ್ರಮಾಣ ಕಡಿಮೆಯಾಗಿ ಉಸಿರಾಟಕ್ಕೆ ಅನುಕೂಲವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆರೆಯಲ್ಲಿ ಮೀನುಗಾರಿಕೆ ನಡೆಸಲು ಸಾಕಷ್ಟು ಹಣ ಹೂಡಿ ಗುತ್ತಿಗೆ ಪಡೆದಿದ್ದವರು ಕೂಡಾ ಇದರಿಂದ ಕಂಗಾಲಾಗಿದ್ದು, ಈಗ ಲಾಕ್‌ ಡೌನ್‌ ಇರುವುದರಿಂದ ಮೀನು ಮಾರಾಟ ಕೂಡಾ ಕಷ್ಟವಾಗಲಿದೆ. ಈ ಸಂದರ್ಭದಲ್ಲಿ ಮೀನುಗಳು ಸಾಯುತ್ತಿರುವುರು ಆತಂಕವನ್ನು ಹೆಚ್ಚಿಸಿದೆ.

ಮಳೆ ಬಂದಾಗ ಹೊಸ ನೀರು ಹರಿದು ಬರುವುದರಿಂದ ಈ ರೀತಿ ಮೀನುಗಳು ಮರಣ ಹೊಂದುತ್ತವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈಗ ಸತ್ತಿರುವ ಮೀನುಗಳನ್ನು ನಾವೇ ತೆಗೆದು ಹಾಕುತ್ತಿದ್ದೇವೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಕಳೆದ ಐದು ವರ್ಷದಿಂದ ಕೆರೆ ಸ್ವತ್ಛವಾಗಿಲ್ಲ. ಈ ಎಲ್ಲಾ ಕಾರಣಕ್ಕೆ ಇಷ್ಟು ಪ್ರಮಾಣದಲ್ಲಿ ಮೀನು ಗಳು ಸಾಯುತ್ತಿರಬಹುದು ಎಂದು ಮಹಾತ್ಮಾ ಗಾಂಧಿ ಕೆರೆ ಬಳಕೆದಾರರ ಸಂಘದ ಅಧ್ಯಕ್ಷೆ ಸಿದ್ದಲಿಂಗಮ್ಮ, ಖಜಾಂಚಿ ಸಿದ್ದಪ್ಪ ಪಿಳ್ಳಿಕೇರೆನಹಳ್ಳಿ ಹಾಗೂ ಕಾರ್ಯದರ್ಶಿ ಬಸವರಾಜ್‌ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.