ಕೊನೆ ಭಾಗದ ಜಮೀನಿಗೆ ನೀರು ಹರಿಸಿ
Team Udayavani, Apr 9, 2020, 1:22 PM IST
ಮಲೇಬೆನ್ನೂರು: ಕೊನೆಭಾಗದ ರೈತರು ಜಿಪಂ ಸದಸ್ಯ ಬಿ.ಎಂ. ವಾಗೀಶಸ್ವಾಮಿ ಹಾಗೂ ಎಇಇ ರವಿಕುಮಾರ್ ಅವರ ಜತೆ ಚರ್ಚಿಸಿದರು.
ಮಲೇಬೆನ್ನೂರು: ಭದ್ರಾ ಜಲಾಶಯದ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪದೇ ಭತ್ತದ ಬೆಳೆ ಒಣಗಲಾರಂಭಿಸಿದೆ ಎಂದು ರೈತರು ಆರೋಪಿಸಿದ್ದಾರೆ. ನಾಲೆಯಲ್ಲಿ ಸಮರ್ಪಕ ನೀರು ಹರಿಯುತ್ತಿಲ್ಲ. ಆದ್ದರಿಂದ ಮಳೆ ಬಂದರೆ ಮಾತ್ರ ಬೆಳೆ ಕೈಗೆ ಸಿಗುತ್ತದೆ. ಇಲ್ಲವಾದರೆ ಕೊನೆಭಾಗದ ರೈತರ ಜೀವನ ಕಷ್ಟಕರವಾಗಿದೆ ಎಂದು ರೈತ ಸಂಘದ ಪಾಲಾಕ್ಷಪ್ಪ ಅವರು ಜಿ.ಪಂ ಸದಸ್ಯ ಬಿ.ಎಂ. ವಾಗೀಶಸ್ವಾಮಿಗೆ ಮನವರಿಕೆ ಮಾಡಿಕೊಟ್ಟರು.
ಸಮೀಪದ ಕೊಮಾರನಹಳ್ಳಿ ಬಳಿ 4.6 ಅಡಿ ಗೇಜ್ ಇರುವುದರಿಂದ ಕೊನೆಭಾಗದ ಜಮೀನುಗಳಿಗೆ ನೀರು ಸಿಗುತ್ತಿಲ್ಲ. ಆದ್ದರಿಂದ ನಮ್ಮ ಭಾಗದ ನೀರು ನಮಗೆ ಕೊಡಿ ಎಂದು ಒತ್ತಡ ತರಬೇಕಿದೆ ಎಂದು ವಾಗೀಶಸ್ವಾಮಿ ರೈತರಿಗೆ ತಿಳಿಸಿದರು. ಲಾಕ್‌ಡೌನ್ ಆಗಿರುವುದರಿಂದ ಇಂಜಿನಿಯರ್‌ಗಳು ನೀರಿನ ನಿರ್ವಹಣೆ ಮಾಡುತ್ತಿಲ್ಲ. ಚಾನಲ್ ಮೇಲೆ ಎಇಇ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ ಮೂವರು ಇಂಜಿನಿಯರ್‌ಗಳು ಮತ್ತು ಇಇ ಅವರು ಪತ್ತೆ. ಇದರಿಂದ ನೀರಿನ ನಿರ್ವಹಣೆ ಹಳಿ ತಪ್ಪಿದೆ ಎಂದು ಕೊನೆಭಾಗದ ರೈತರ ಆರೋಪ ಮಾಡಿದರು. ಆರ್2 ಬಳಿ ನೀರಿನ ಮಟ್ಟ ಸರಿಯಾಗಿದೆ ಅಲ್ಲಿಂದ ಮುಂದುವರೆದು ಬಸವಾಪಟ್ಟಣದಿಂದ ಮಲೇಬೆನ್ನೂರು ಕಡೆ ಬರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಕೊಮಾರನಹಳ್ಳಿ ಬಳಿ ನೀರಿನ ಗೇಜ್ ಕಡಿಮೆಯಾಗಿದೆ. ಕೊಮಾರನಹಳ್ಳಿ ಬಳಿ 5 ಅಡಿ ನಿರಂತರ ನೀರಿನ ಗೇಜ್ ಬಂದಲ್ಲಿ ಕೊನೆಭಾಗದ ಜಮೀನುಗಳಿಗೆ ನೀರು ತಲುಪಿಸಬಹುದು ಎಂದು ಇಎಎ ರವಿಕುಮಾರ್ ತಿಳಿಸಿದರು.
ಕೊನೆಭಾಗದ ನಂದಿತಾವರೆ, ಹೊಳೆಸಿರಿಗೆರೆ, ಭಾನುವಳ್ಳಿ, ಕಾಮಲಾಪುರ, ಎಕ್ಕಗೊಂದಿ, ಕಡರನಾಯಕನಹಳ್ಳಿ, ಲಕ್ಕಶೆಟ್ಟಿಹಳ್ಳಿ, ಮತ್ತಿತರ ಕಡೆ ನೀರು ಇಲ್ಲದೆ ಒಡೆ ಕಟ್ಟುತ್ತಿರುವ ಭತ್ತ ಒಣಗುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ, ಜಿಲ್ಲಾ ಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ, ಕೆಲಸಕ್ಕೆ ಗೈರು ಆಗಿರುವ ಇಂಜಿನಿಯರ್ ಗಳನ್ನು ಕೂಡಲೇ ಕರೆಯಿಸಿ ರೈತರಿಗೆ ನೀರಿನ ನಿರ್ವಹಣೆ ಮಾಡುವ ಜವಾಬ್ದಾರಿ ಹೊರಿಸಬೇಕು ಎಂದು ರೈತಸ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ ಆಗ್ರಹಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.