ಗ್ರಾಮೀಣ ತರಕಾರಿಗಳಿಗೆ ಉತ್ತಮ ಬೇಡಿಕೆ
Team Udayavani, Apr 9, 2020, 1:29 PM IST
ಉಡುಪಿ: ದೇಶವನ್ನು ಲಾಕ್ ಡೌನ್ ಮಾಡಿರುವುದರಿಂದ ಗ್ರಾಮೀಣ ಪ್ರದೇಶದ ತರಕಾರಿಗಳಿಗೆ ಈಗ ಆಯಾ ಪ್ರದೇಶದಲ್ಲಿಯೇ ಬೇಡಿಕೆ ಸೃಷ್ಟಿಯಾಗಿದೆ. ಈ ಮೊದಲು ಅಷ್ಟೊಂದು ಬೇಡಿಕೆ ಇರಲಿಲ್ಲ. ಈಗ ಹೊರಗಿನಿಂದ ತರಕಾರಿ ಬರುವುದೂ ಕಡಿಮೆ ಆಗಿರುವುದರಿಂದ ಆಯಾ ಊರಿನಲ್ಲಿ ತರಕಾರಿ ಬೆಳೆಸುತ್ತಿರುವವರ ಮನೆಗೆ ಹೋಗಿ ಕೊಂಡೊಯ್ಯುತ್ತಿದ್ದಾರೆ. ಜನರಿಗೆ ಪೇಟೆಗೆ ಹೋಗುವುದಕ್ಕೆ ಅವಕಾಶ ಇಲ್ಲದಿರು ವುದೂ ಕಾರಣವಾಗಿದೆ. ಈಗ ದಲ್ಲಾಳಿಗಳ ಕಾಟವಿಲ್ಲದ ಕಾರಣ ಬೆಳೆಗಾರರಿಗೆ ಅನುಕೂಲವಾಗುತ್ತಿದೆ.
ಗರಿಗೆದರಿದ ವ್ಯಾಪಾರ
ಸುಮಾರು ಎರಡು ವರ್ಷದಿಂದ ಉಡುಪಿ, ಮಣಿಪಾಲ ಸೇರಿದಂತೆ ಆಯ್ದ ಪ್ರದೇಶದಲ್ಲಿ ತರಕಾರಿಯನ್ನು ಬೆಳೆಗಾರರ ಸೊಸೈಟಿ ನೇತೃತ್ವದಲ್ಲಿ ವಾಹನಗಳ ಮೂಲಕ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಆಷ್ಟಾಗಿ ಲಾಭವಿರಲಿಲ್ಲ. ಕೋವಿಡ್ 19 ಭೀತಿಯಿಂದ ವಾಹನ ಸಂಚಾರ ಹಾಗೂ ಜನ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಮಾಂಸಾಹಾರಿಗಳು ಸಹ ತರಕಾರಿ ಕಡೆಗೆ ಮೊರೆ ಹೋಗಿದ್ದಾರೆ. ಈಗ ಬೇಡಿಕೆ ಹೆಚ್ಚಾಗು¤ದೆ. ಕೆಲವೇ ಸಮಯದಲ್ಲಿ ಖಾಲಿಯಾಗುತ್ತಿದೆ ಎಂದು ಬೆನಗಲ್ ತರಕಾರಿ ಬೆಳಗಾರರ ಸಂಘದ ಕಾರ್ಯದರ್ಶಿ ನಾಗಾರಾಜ್ ಉಳಿತ್ತಾಯ ತಿಳಿಸಿದರು.
ಮನೆ ಸೊಪ್ಪಿಗೂ ಬಂತು ಬೇಡಿಕೆ!
ನಮ್ಮಲ್ಲಿ ಬಸಲೆ, ಹರಿವೆ ತರಕಾರಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಸಲಾಗುತ್ತದೆ. ಕಳೆದ ವರ್ಷ ಬೆಳೆದ ಈ ಸೊಪ್ಪು ತರಕಾರಿ ಕೇವಲ ಮನೆ ಅಡುಗೆ ಹಾಗೂ ನೆರೆ ಮನೆಯವರಿಗೆ ನೀಡಿದೆ. ಉಳಿದ ಸೊಪ್ಪು ತಿನ್ನಲು ಸಾಧ್ಯವಾಗದೆ ಜಾನುವಾರುಗಳಿಗೆ ಮೇವಿನ ರೂಪದಲ್ಲಿ ನೀಡಿದೆ. ಮೊನ್ನೆ ತನಕ ಸೊಪ್ಪು ತರಕಾರಿ ಕೇಳದ ಜನರು ಇದೀಗ ಮುಗಿಬಿದ್ದು ಖರೀದಿಸುತ್ತಿದ್ದಾರೆ. ತೊಂಡೆಕಾಯಿ, ಬೆಂಡೆಕಾಯಿ ಸಹ ಬೆಳೆಸಿ
ದ್ದೇನೆ. ಬೇಡಿಕೆ ಪೂರೈಸುವಷ್ಟು ಇಳುವರಿ ಇಲ್ಲ. ದೂರದೂರದಿಂದ ಬಂದು ಖರೀದಿ ಸುತ್ತಿರುವುದು ನೋಡಿದರೆ ತರಕಾರಿ ಬೆಳೆಸಬೇಕು ಎನ್ನುವ ಹಂಬಲ ಹೆಚ್ಚಿದೆ ಎಂದು ಕೃಷಿಕ ಭಾಸ್ಕರ್ ತಿಳಿಸಿದರು.
ತಾಜಾ ತರಕಾರಿ
ಪ್ರಸ್ತುತ ಸ್ಥಳೀಯವಾಗಿ ಸಿಗುವ ತರಕಾರಿಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದೇವೆ. ಇದು ಕಡಿಮೆ ಬೆಲೆಯಲ್ಲಿ ಸಿಗುವುದರ ಜತೆಗೆ ತಾಜಾವಾಗಿರುವುದರಿಂದ ರುಚಿ ಚೆನ್ನಾಗಿರುತ್ತದೆ. ಜತೆಗೆ ಮನೆ ಬಾಗಿಲಿಗೆ ವಾಹನದಲ್ಲಿ ಬರುವ ಅಗತ್ಯ ವಸ್ತುಗಳು ಅಂಗಡಿಗಳಿಗಿಂತ ಕಡಿಮೆ ದರದಲ್ಲಿ ಸಿಗುತ್ತಿದೆ.
-ಸಂಪಾ ನಾಯಕ್, ಬ್ರಹ್ಮಾವರ ನಿವಾಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.