“ಸ್ಮಾರ್ಟ್ ಮಾರುಕಟ್ಟೆ’ ನಿರ್ಮಾಣಕ್ಕೆ ಸಜ್ಜು
ಸೆಂಟ್ರಲ್ ಮಾರುಕಟ್ಟೆ ಶೀಘ್ರ ನೆಲಸಮ
Team Udayavani, Apr 9, 2020, 1:55 PM IST
ವಿಶೇಷ ವರದಿ–ಮಂಗಳೂರು: ಶಿಥಿಲಾವಸ್ಥೆಗೆ ತಲುಪಿರುವ ಸ್ಟೇಟ್‌ಬ್ಯಾಂಕ್‌ನ ಹಳೆಯ ಕೇಂದ್ರ ಮಾರುಕಟ್ಟೆಯನ್ನು (ಸೆಂಟ್ರ ಲ್)
ಕೆಡವಿ ಸ್ಮಾರ್ಟ್ ಸ್ವರೂಪದ ನೂತನ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಕಾರ್ಯ ಗತಗೊಳ್ಳಲು ಕಾಲ ಸನ್ನಿಹಿತವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಮಾರು ಕಟ್ಟೆಯ ಹಾಲಿ ವ್ಯಾಪಾರಿಗಳನ್ನು ಬೈಕಂ ಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಬುಧ ವಾರದಿಂದ ಸ್ಥಳಾಂತರಿಸಲಾಗಿದೆ. ಈ ಮೂಲಕ ವ್ಯಾಪಾರಿಗಳಿಗೆ ನೂತನ ಮಾರುಕಟ್ಟೆ ನಿರ್ಮಾಣವಾಗುವವರೆಗೆ ಪರ್ಯಾಯ ಸ್ಥಳಾವಕಾಶ ಕಲ್ಪಿಸುವ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗಿದೆ. ಹೀಗಾಗಿ ಜಿಲ್ಲಾಡಳಿತ, ಮಂಗಳೂರು ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಕಂಪೆನಿಯು ಜತೆಯಾಗಿ ಸ್ಮಾರ್ಟ್ ಸೆಂಟ್ರಲ್ ಮಾರುಕಟ್ಟೆ ನಿರ್ಮಾಣ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಇಚ್ಚಾಶಕ್ತಿ ಪ್ರದರ್ಶಿಸಬೇಕಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ 114 ಕೋ.ರೂ. ವೆಚ್ಚದಲ್ಲಿ ಸ್ಟೇಟ್‌ಬ್ಯಾಂಕ್‌ನಲ್ಲಿ ನೂತನ ಸೆಂಟ್ರಲ್ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಒಪ್ಪಿಗೆ ದೊರೆತಿದ್ದು, ಟೆಂಡರ್ ಹಂತದಲ್ಲಿದೆ. ತರಕಾರಿ, ಹಣ್ಣುಹಂಪಲುಗಳ ಸೆಂಟ್ರಲ್ ಮಾರುಕಟ್ಟೆ, ಸಮೀಪದ ಮೀನು- ಮಾಂಸ ಮಾರುಕಟ್ಟೆ ಹಾಗೂ ಸ್ಟೇಟ್‌ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣ ಸಮೀಪದ ಮೀನಿನ ಮಾರುಕಟ್ಟೆಯನ್ನು ಒಂದೇ ಕಟ್ಟಡದಲ್ಲಿ ನಿರ್ಮಿಸಲು ಯೋಜನೆಯಲ್ಲಿ ಉದ್ದೇಶಿಸಲಾಗಿದೆ. ಈಗಿನ ಸೆಂಟ್ರಲ್ ಮಾರುಕಟ್ಟೆ ಹಾಗೂ ಮಾಂಸ ಮಾರಾಟದ ಮಾರುಕಟ್ಟೆಗಳನ್ನು ಸಂಪೂರ್ಣ ತೆರವುಗೊಳಿಸಿ ನೂತನ ಮಾರುಕಟ್ಟೆ ನಿರ್ಮಾಣವಾಗಲಿದೆ.
133 ಸ್ಟಾಲ್‌ಗಳು
ತರಕಾರಿ- ಹಣ್ಣುಹಂಪಲು ಸಹಿತ 133 ಸ್ಟಾಲ್‌ಗಳು, ಸಮೀಪದ ಮಾಂಸ ಮಾರುಕಟ್ಟೆಯಲ್ಲಿ 94 ಸ್ಟಾಲ್‌ಗಳು ಹಾಗೂ ಸರ್ವಿಸ್ ಬಸ್ ನಿಲ್ದಾಣ ಬಳಿಯ ಮೀನು ಮಾರು ಕಟ್ಟೆಯಲ್ಲಿ 135 ಸ್ಟಾಲ್‌ಗಳಿವೆ ಎಂದು ಮನಪಾ ಅಂದಾಜಿಸಿದೆ.
ಕೆಲವೇ ದಿನದಲ್ಲಿ ತಾತ್ಕಾಲಿಕ ಮಾರುಕಟ್ಟೆ ಕೆಲಸ
ಸದ್ಯ ಹೋಲ್‌ಸೆಲ್ ಮಾರಾಟಗಾರರಿಗೆ ಬೈಕಂಪಾಡಿಯಲ್ಲಿ ಅವಕಾಶ ನೀಡಲಾಗಿದೆಯಾದರೂ ತರಕಾರಿ, ಹಣ್ಣುಹಂಪಲು ಮಾರಾಟ ಮಾಡುವವರಿಗೆ ಮುಂದಿನ 3 ತಿಂಗಳ ಅನಂತರ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಅವಕಾಶ ಮಾಡಿಕೊಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಪುರಭವನದ ಹಿಂಬದಿಯ “ಬೀದಿ ಬದಿ ವ್ಯಾಪಾರಿಗಳ ವಲಯ’ದಲ್ಲಿ 2920 ಚದರ ಮೀಟರ್, ನೆಹರೂ ಮೈದಾನಿನ ಫುಟ್‌ಬಾಲ್ ಮೈದಾನಕ್ಕೆ ತಾಗಿರುವ (ಪುರಭವನದ ಹಿಂಭಾಗ)ಖಾಲಿ ಜಾಗದಲ್ಲಿ 3818 ಚದರ ಮೀಟರ್ ಸೇರಿದಂತೆ ಒಟ್ಟು 6761 ಚದರ ಮೀಟರ್ ಜಾಗದಲ್ಲಿ ಸೆಂಟ್ರಲ್ ಮಾರುಕಟ್ಟೆ ಹಾಗೂ ಮಾಂಸ ಮಾರುಕಟ್ಟೆಯ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಯೋಚಿಸಲಾಗಿದೆ. ಕೆಲವೇ ದಿನದಲ್ಲಿ ಇದರ ಕಾಮಗಾರಿ ನಡೆಯುವ ನಿರೀಕ್ಷೆ ಇದೆ.
“ಸ್ಮಾರ್ಟ್ ಸೆಂಟ್ರಲ್
ಮಾರುಕಟ್ಟೆ’ಯಲ್ಲಿ ಏನಿರಲಿದೆ?
ನಿರ್ಮಾಣವಾಗಲಿರುವ ಸ್ಮಾರ್ಟ್ ಸೆಂಟ್ರಲ್ ಮಾರುಕಟ್ಟೆಯಲ್ಲಿ ಮೂರು ವಲಯ ನಿರ್ಮಾಣವಾಗಲಿದೆ. ಈ ಪೈಕಿ ಒಂದನೇ ವಲಯದಲ್ಲಿ ತರಕಾರಿ ಹಾಗೂ ಹಣ್ಣು ಹಂಪಲುಗಳ ಮಾರುಕಟ್ಟೆ, ಎರಡನೇ ವಲಯದಲ್ಲಿ ಮಾಂಸ ಹಾಗೂ ಮೀನು ಮಾರುಕಟ್ಟೆ ಮತ್ತು ಮೂರನೇ ವಲಯದಲ್ಲಿ ರಖಂ ಹಾಗೂ ಚಿಲ್ಲರೆ ವ್ಯಾಪಾರಸ್ಥರಿಗೆ ಅವಕಾಶ ನೀಡಲಾಗುತ್ತದೆ. ಕೆಳಮಹಡಿ ಸೇರಿದಂತೆ ಒಟ್ಟು ಮೂರು ಮಹಡಿಗಳಲ್ಲಿ ನೂತನ ಮಾರುಕಟ್ಟೆ ನಿರ್ಮಾಣವಾಗಲಿದೆ. 583 ಕಾರು, 146 ದ್ವಿಚಕ್ರ ವಾಹನ ನಿಲುಗಡೆಗೆ ಹೊಸ ಮಾರುಕಟ್ಟೆಯಲ್ಲಿ ಅವಕಾಶವಿರಲಿದೆ. 14,353 ಚದರ ಮೀಟರ್‌ನಷ್ಟು ಸ್ಥಳವನ್ನು ಪಾರ್ಕಿಂಗ್‌ಗೆಂದು ಮೀಸಲಿಡಲಾಗುತ್ತದೆ. ಒಟ್ಟು ಸ್ಮಾರ್ಟ್ ಮಾರುಕಟ್ಟೆಗಾಗಿ 145 ಕೋ.ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಾರದೊಳಗೆ ತಾತ್ಕಾಲಿಕ ಮಾರುಕಟ್ಟೆ ಕಾಮಗಾರಿ
ಸ್ಮಾರ್ಟ್‌ಸಿಟಿ ಯೋಜನೆಯಡಿ 114 ಕೋ.ರೂ. ವೆಚ್ಚದಲ್ಲಿ ಸೆಂಟ್ರಲ್ ಮಾರುಕಟ್ಟೆ ನಿರ್ಮಾಣ ಯೋಜನೆ ಟೆಂಡರ್ ಹಂತದಲ್ಲಿದೆ. ಶೀಘ್ರದಲ್ಲಿ ಈಗಿ ರುವ ಹಳೆಯ ಮಾರುಕಟ್ಟೆ ಕೆಡವಿ, ಹೊಸ ಮಾರುಕಟ್ಟೆ ನಿರ್ಮಾಣದ ಉದ್ದೇಶವಿದೆ. ಜತೆಗೆ, ವಾರದೊಳಗೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು.
- ಮಹಮ್ಮದ್ ನಝೀರ್, ವ್ಯವಸ್ಥಾಪಕ ನಿರ್ದೇಶಕರು,
ಸ್ಮಾರ್ಟ್‌ಸಿಟಿ ಮಂಗಳೂರು
ಹಳೆ ಕಟ್ಟಡ ಕೆಡವಲು ತೀರ್ಮಾನ
ಮಂಗಳೂರು ಸೆಂಟ್ರಲ್ ಮಾರುಕಟ್ಟೆಯ ತರಕಾರಿ/ ಮೀನು ಮಾರುಕಟ್ಟೆ ಎರಡು ಹಳೆ ಕಟ್ಟಡಗಳು ದುರಸ್ತಿ ಮಾಡಲಾಗದೆ ಶಿಥಿಲಾವಸ್ಥೆಯಲ್ಲಿದೆ. ವರ್ತಕರ, ಗ್ರಾಹಕರ ಹಿತದೃಷ್ಟಿಯಿಂದ ಹಳೆ ಕಟ್ಟಡವನ್ನು ಕೆಡವಲು ಮಂಗ ಳೂರು ಪಾಲಿಕೆ ತೀರ್ಮಾನಿಸಿದೆ.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ,
ಆಯುಕ್ತರು, ಮನಪಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.