130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು
ಮುಂಬೈನಲ್ಲಿ ಈ ಡಬ್ಬಾವಾಲಾಗಳು ದಿನಂಪ್ರತಿ 200,000 ಲಕ್ಷದಷ್ಟು ಮನೆ ಅಡುಗೆಯನ್ನು ತಯಾರಿಸುತ್ತಾರೆ.
Team Udayavani, Apr 9, 2020, 3:59 PM IST
Representative Image
ಮುಂಬೈ:ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು ಒಂದೆಡೆಯಾದರೆ, ಮತ್ತೊಂದೆಡೆ ದಿನಗೂಲಿ ನೌಕರರು, ಕಾರ್ಮಿಕರು ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದೀಗ ಮುಂಬೈನಲ್ಲಿ ಅತ್ಯಂತ ಜನಪ್ರಿಯವಾಗಿ ಡಬ್ಬಾವಾಲಾಗಳ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ ಎಂದು ವರದಿ ತಿಳಿಸಿದೆ.
ಸದ್ಯ ಮುಂದುವರಿದಿರುವ ಲಾಕ್ ಡೌನ್ ನಿಂದಾಗಿ ಟಿಫಿನ್ ಡೆಲಿವರಿ ಸೇವೆ ನಿಂತು ಹೋಗಿದೆ. ಇದರಿಂದ ಡಬ್ಬಾವಾಲಾಗಳಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಿದ್ದು, ಇದೀಗ ಸರ್ಕಾರದ ಆರ್ಥಿಕ ನೆರವಿಗಾಗಿ ಎದುರು ನೋಡುತ್ತಿದ್ದಾರೆ ಎಂದು ವರದಿ ವಿವರಿಸಿದೆ. ಜೀ ವರದಿ ಪ್ರಕಾರ, ಡಬ್ಬಾವಾಲಾಗಳು ಮಾರ್ಚ್ 31ರಂದು ಟಿಫಿನ್ ಸರ್ವಿಸ್ ಅನ್ನು ಮುಂಬೈನಲ್ಲಿ ನಿಲ್ಲಿಸಿದ್ದರು. ಅಲ್ಲದೇ 21 ದಿನಗಳ ಲಾಕ್ ಡೌನ್ ಗೆ ಪೂರ್ಣ ಬೆಂಬಲ ಘೋಷಿಸಿದ್ದರು.
ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕೋವಿಡ್ 19 ವೈರಸ್ ಪ್ರಕರಣ ದಿಢೀರ್ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗತೊಡಗಿದೆ. ಮುಂಬೈನಲ್ಲಿ ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದಾಗಿ ಡಬ್ಬಾವಾಲಾಗಳಿಗೆ ತಮ್ಮ ದೈನಂದಿನ ಖರ್ಚು, ವೆಚ್ಚಕ್ಕೆ ಸಮಸ್ಯೆ ತಂದೊಡ್ಡಿದೆ ಎಂದು ಅಲವತ್ತುಕೊಂಡಿರುವುದಾಗಿ ವರದಿ ವಿವರಿಸಿದೆ.
ಯಾವುದೇ ಸಮಸ್ಯೆ ಇಲ್ಲದೆ ಟಿಫಿನ್ ಡೆಲಿವರಿ ಹಾಗೂ ಇಡೀ ಜಗತ್ತಿನಲ್ಲಿಯೇ ಅದ್ಬುತ ಮ್ಯಾನೇಜ್ ಮೆಂಟ್ ಕೌಶಲ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು ಮುಂಬೈನ ಡಬ್ಬಾವಾಲಾಗಳು. ಇವರು ಮುಂಬೈನಲ್ಲಿರುವ ಲಕ್ಷಾಂತರ ಗ್ರಾಹಕರಿಗೆ ಟಿಫಿನ್ ಸರ್ವಿಸ್ ನೀಡುವ ಮೂಲಕ ವ್ಯವಹಾರ ನಡೆಸುತ್ತಿದ್ದರು.
ಮುಂಬೈನಲ್ಲಿ ಈ ಡಬ್ಬಾವಾಲಾಗಳು ದಿನಂಪ್ರತಿ 200,000 ಲಕ್ಷದಷ್ಟು ಮನೆ ಅಡುಗೆಯನ್ನು ತಯಾರಿಸುತ್ತಾರೆ. ಆದರೆ ಕಳೆದ 130 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೀರ್ಘಕಾಲ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿರುವುದು. ಅಲ್ಲದೇ ಸರ್ಕಾರ ಕೂಡಾ ಲಾಕ್ ಡೌನ್ ಮುಂದುವರಿಸುವ ಸುಳಿವು ನೀಡಿದೆ. ಹೀಗಾಗಿ ಡಬ್ಬಾವಾಲಾಗಳಿಗೆ ಸದ್ಯ ತಮ್ಮ ಸೇವೆಯನ್ನು ಪುನರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ವರದಿ ತಿಳಿಸಿದೆ.
ಲಾಕ್ ಡೌನ್ ದಿನಗಳಲ್ಲಿ ನಮಗೆ ಕೆಲಸವೇ ಇಲ್ಲದಂತಾಗಿದೆ. ಇದರಿಂದಾಗಿ ಡಬ್ಬಾವಾಲಾಗಳಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಹೀಗಾಗಿ ಸಾರ್ವಜನಿಕರಿಂದ ಹಾಗೂ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: 20 ವರ್ಷದಿಂದ ಪಾಳು ಬಿದಿದ್ದ ಮನೆಯ ಫ್ರಿಡ್ಜಲ್ಲಿ ತಲೆಬುರುಡೆ ಪತ್ತೆ!
Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
BJP Leader; ಇಂಡಿಯಾ ಗೇಟ್‌ಗೆ “ಭಾರತ್ ಮಾತಾ ದ್ವಾರ’ ಹೆಸರಿಡಿ: ಮೋದಿಗೆ ಪತ್ರ
Thalassery: ಸಿಪಿಎಂ ನಾಯಕನ ಹತ್ಯೆ ಪ್ರಕರಣ: ಆರೆಸ್ಸೆಸ್‌ನ 9 ಸದಸ್ಯರಿಗೆ ಜೀವಾವಧಿ ಶಿಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.