ಕೋವಿಡ್ 19 ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆ
Team Udayavani, Apr 9, 2020, 6:47 PM IST
ಮುಂಬಯಿ, ಎ. 8: ಮೀರಾ-ಭಾಯಂದರ್ ನಲ್ಲಿ ಮಂಗಳವಾರ ಐದು ಹೊಸ ಪ್ರಕರಣಗಳು ಮತ್ತು ಒಂದು ಸಾವಿನೊಂದಿಗೆ, ಪ್ರಕರಣಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ನಾಗರಿಕ ನಿಗಮವು ತರಕಾರಿ ಮತ್ತು ದಿನಸಿ ಶಾಪಿಂಗ್ ಸಮಯವನ್ನು ನಿರ್ಬಂಧಿಸಿದ್ದು ಮತ್ತು ಹೆಚ್ಚಿನ ಜನಸಂದಣಿಯನ್ನು ಒಟ್ಟುಗೂಡಿಸುವ ಎರಡು ಮಾರುಕಟ್ಟೆಗಳನ್ನು ಮುಚ್ಚಿದೆ. ಮೀರಾ ಭಾಯಂದರ್ ಮಾರ್ಚ್ 29ರಂದು ಮೊದಲ ಪ್ರಕರಣವನ್ನು ವರದಿ ಮಾಡಿದೆ.
ಆದರೆ ಒಂದು ವಾರದೊಳಗೆ ಈ ಸಂಖ್ಯೆ ತೀವ್ರವಾಗಿ ಹೆಚ್ಚಾಯಿತು. ಮೀರಾರೋಡ್ 14 ಮತ್ತು ಭಾಯಂದರ್ ನಿಂದ 8 ರೋಗಿಗಳು ವರದಿಯಾಗಿದ್ದಾರೆ. ಮಂಗಳವಾರ ಐದು ಜನರು ಸಕಾರಾತ್ಮಕವಾಗಿ ವರದಿಯಾಗಿರೆ. ಅದರಲ್ಲಿ ಜೋಗೇಶ್ವರಿ ಆಘಾತ ಆರೈಕೆ ಕೇಂದ್ರದಲ್ಲಿ ದಾಖಲಾದ 50 ವರ್ಷದ ವ್ಯಕ್ತಿಯು ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಮಾರುಕಟ್ಟೆಗೆ ಬೀಗ ಈಗ, ಕಾಶಿ ಮತ್ತು ಉತ್ತನ್‌ನಲ್ಲಿ ಎರಡು ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ ಮತ್ತು ಇತರ ತರಕಾರಿ ಮಾರುಕಟ್ಟೆಗಳು ಬೆಳಗ್ಗೆ 9ರಿಂದ 12ರ ವರೆಗೆ ತೆರೆದಿರುತ್ತವೆ. ದಿನಸಿ ಅಂಗಡಿಗಳು ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ತೆರೆದಿರುತ್ತವೆ. ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ / ಡೀಸೆಲ್ ಮಾರಾಟಕ್ಕೆ ಎಂಬಿಎಂಸಿ ಈಗಾಗಲೇ ನಿಷೇಧ ಹೇರಿತ್ತು. ಈ ಮೊದಲು ಪಾಸಿಟಿವ್ ಪ್ರಕರಣ ಕಂಡುಬಂದ ಇಬ್ಬರು ರೋಗಿಗಳಿಗೆ ಈಗ ನೆಗೆಟಿವ್ ವರದಿ ಬಂದಿದೆ. ಅವರನ್ನು ಕಸ್ತೂರ್ಬಾ ಆಸ್ಪತ್ರೆ ಮತ್ತು ಕೋಕಿಲಾಬೆನ್ ಆಸ್ಪತ್ರೆ ಬಿಡುಗಡೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.