![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 10, 2020, 6:30 AM IST
ಹೊಸದಿಲ್ಲಿ: ಕೋವಿಡ್ 19 ಯುದ್ಧದಲ್ಲಿ ಸಮಗ್ರ ಗೆಲುವು ಸಾಧಿಸುವುದಕ್ಕಾಗಿ ಕೇಂದ್ರ ಸರಕಾರವು ರಾಜ್ಯಗಳಿಗೆ 15,000 ಕೋಟಿ ರೂಪಾಯಿ ಗಳ ಬೃಹತ್ ತುರ್ತು ಪ್ಯಾಕೇಜನ್ನು ಘೋಷಿಸಿದೆ.
ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ 19 ತಡೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಮೇಲ್ದರ್ಜೆ ಗೇರಿಸಿ ಕೊಳ್ಳಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಪ್ಯಾಕೇಜ್ ಘೋಷಿಸಲಾಗಿದೆ.
ಮೂರು ಹಂತಗಳಲ್ಲಿ ಇದು ಜಾರಿಗೆ ಬರಲಿದ್ದು, ಭವಿಷ್ಯದಲ್ಲಿ ಎಂದಾದರೂ ಕೋವಿಡ್ 19 ಹಾವಳಿ ಮತ್ತೆ ಭುಗಿಲೆದ್ದರೆ ಮತ್ತೆ ಹೋರಾಟಕ್ಕೆ ಸಮಗ್ರ ದೇಶವನ್ನು ಸನ್ನದ್ಧವಾಗಿರಿಸುವ ಮಹತ್ವದ ಉದ್ದೇಶವೂ ಈ ಪ್ಯಾಕೇಜ್‌ನ ಹಿಂದಿದೆ.
ಮೂರು ಹಂತಗಳಲ್ಲಿ ಅನುಷ್ಠಾನ
ಮೊದಲ ಹಂತ 2020ರ ಜ. 1ರಿಂದ ಜೂನ್.
ಎರಡನೇ ಹಂತ 2020ರ ಜುಲೈನಿಂದ 2021ರ ಮಾರ್ಚ್.
ಮೂರನೇ ಹಂತ 2021ರ ಎಪ್ರಿಲ್‌ನಿಂದ 2024ರ ಮಾರ್ಚ್.
ಹಣ ನಿಗದಿ ಹೇಗೆ?
ಈಗಾಗಲೇ ಜಾರಿಯಾಗಿರುವ ಪ್ಯಾಕೇಜ್‌ನ ಮೊದಲ ಹಂತದ ಅನುಷ್ಠಾನಕ್ಕಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರವು 4,113 ಕೋ.ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಮುಂದಿನ ಹಂತಗಳಲ್ಲಿ ಆಯಾ ಕಾಲಘಟ್ಟದ ಅಗತ್ಯಗಳಿಗೆ ಅನುಗುಣವಾಗಿ ಹಣ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಮೊದಲ ಹಂತದ ಯೋಜನೆಗಳು
-ಕೋವಿಡ್ 19 ಚಿಕಿತ್ಸೆಗಾಗಿ ಈಗಾಗಲೇ ಗುರುತಿಸಲಾಗಿರುವ ಆಸ್ಪತ್ರೆಗಳು ಮೇಲ್ದರ್ಜೆಗೆ.
-ಕೋವಿಡ್ 19 ಪತ್ತೆ ಪ್ರಯೋಗಾಲಯಗಳು, ಐಸೋಲೇಷನ್ ಬ್ಲಾಕ್‌ಗಳು ಮೇಲ್ದರ್ಜೆಗೆ.
– ಐಸಿಯುಗಳಲ್ಲಿ ವೆಂಟಿಲೇಟರ್, ಆಮ್ಲಜನಕ ಸರಬರಾಜು ವ್ಯವಸ್ಥೆ ಜಾರಿ.
– ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್ ಖರೀದಿ.
– ಪ್ರಯೋಗಾಲಯಗಳಿಗೆ ಸೋಂಕುಪೀಡಿತರ ಸ್ಯಾಂಪಲ್ ತ್ವರಿತ ರವಾನಿನೆ ವ್ಯವಸ್ಥೆ ಜಾರಿ.
– ಆಸ್ಪತ್ರೆಗಳು, ಸರಕಾರಿ ಕಚೇರಿಗಳು, ಸಾರ್ವಜನಿಕ ವಾಹನಗಳು, ಆ್ಯಂಬುಲೆನ್ಸ್‌ಗಳನ್ನು ಸೋಂಕು ರಹಿತವಾಗಿಸುವುದು.
ಪ್ಯಾಕೇಜ್‌ನ ಉದ್ದೇಶಿತ ಪ್ರಯೋಜನಗಳು
– ಕೋವಿಡ್ 19 ಸೋಂಕು ಪೀಡಿತರ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆಗಳ ನಿರ್ಮಾಣ.
– ಸರ್ವ ಸುಸಜ್ಜಿತ ಐಸೋಲೇಷನ್ ವಾರ್ಡ್‌ಗಳುಳ್ಳ ಬ್ಲಾಕ್‌ಗಳ ನಿರ್ಮಾಣ.
– ಎಲ್ಲ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ವೆಂಟಿಲೇಟರ್, ಆಮ್ಲ ಜನಕ ಸರಬರಾಜು ವ್ಯವಸ್ಥೆ ರೂಪಿಸುವುದು.
-ವೈದ್ಯರಿಗೆ, ಇನ್ನಿತರ ವೈದ್ಯಕೀಯ ಸಿಬಂದಿಗೆ ಪರ್ಸನಲ್ ಪ್ರೊಟೆಕ್ಷನ್ ಪರಿಕರ (ಪಿಪಿಇ)ಗಳ ಸಂಗ್ರಹ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.