ಬೇಸಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪೂರ್ವ ಸಿದ್ಧತೆ
Team Udayavani, Apr 10, 2020, 6:26 AM IST
ಉಡುಪಿ: ನಗರಸಭೆ ಹಾಗೂ ಆಸುಪಾಸಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗದಂತೆ ಜಿಲ್ಲಾಡಳಿತ, ನಗರಸಭೆ ಮುನ್ನೆಚ್ಚರಿಕೆ ವಹಿಸಿದ್ದು, ಬಜೆ ಡ್ಯಾಂಗೆ ಪಂಪಿಂಗ್ ಆರಂಭಿಸಿದೆ.
ಪಂಚನಬೆಟ್ಟು ಪರಿಸರದಿಂದ ನೀರನ್ನು ಪಂಪ್ ಮೂಲಕ ಮೇಲಕ್ಕೆತ್ತಿ ಬಜೆ ಡ್ಯಾಮ್‌ಗೆ ಹರಿಸುವ ಕಾರ್ಯ ಗುರುವಾರದಿಂದ ಆರಂಭಗೊಂಡಿದೆ.ಹಿರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಪಂಚನಬೆಟ್ಟುವಿನಲ್ಲಿ ಐದು ಪಂಪ್‌ಗ್ಳ ಮೂಲಕ ಶಿರೂರು ಡ್ಯಾಮ್ ವರೆಗೆ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಶಾಸಕ ರಘುಪತಿ ಭಟ್, ನಗರಸಭೆಯ ಆಯುಕ್ತರು ಹಾಗೂ ಅಭಿಯಂತರು ಉಪಸ್ಥಿತರಿದ್ದರು. ಈಗ ಮೂರು ಪಂಪು ಅಳವಡಿಸಿ ನೀರನ್ನು ಮೇಲಕ್ಕೆತ್ತಿ ಶಿರೂರು ಡ್ಯಾಮಿಗೆ ಹರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಶಿರೂರು ಡ್ಯಾಮ್ ಬಳಿ ಮತ್ತೆರಡು ಪಂಪ್ ಅಳವಡಿಸಿ ಒಟ್ಟು ಐದು ಪಂಪ್‌ಗ್ಳನ್ನು ಬಳಸಿನೀರು ಮೇಲಕ್ಕೆತ್ತಿ, ಡ್ಯಾಂಗೆ ಹರಿಸಲಾಗು ತ್ತದೆ. ಇದರಿಂದ ಬಜೆಯಲ್ಲಿಯೇ ನೀರಿನ ಸಂಗ್ರಹ ಹೆಚ್ಚಾಗಲಿದೆ. ಇಲ್ಲಿಂದ ಎಂದಿನಂತೆ ಪಂಪಿಂಗ್ ಮಾಡಿ ನೀರು ಸರಬರಾಜು ಆಗಲಿದೆ.
ನೀರಿನ ಲಭ್ಯತೆ ಬಗ್ಗೆ ಪರಿಶೀಲನೆ
ಬೇಸಗೆಯಲ್ಲಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಸಭೆ ನಡೆಸಿ ಮುಂದಿನ ಯೋಜನೆಯ ಬಗ್ಗೆ ಚರ್ಚಿಸಲಾಗಿದೆ. ಜನವರಿಯಲ್ಲಿ ಡ್ಯಾಂ ಇರುವ ಪ್ರದೇಶಕ್ಕೆ ಶಾಸಕ ರಘುಪತಿ ಭಟ್ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಸೂಚಿಸಿದ್ದರು.
ಬಜೆಯಲ್ಲಿ ಪ್ರಸ್ತುತ 4.49 ಮೀಟರ್ ನೀರಿದೆ. ಶಿರೂರಿನಲ್ಲಿ ನೀರು ಬಹುತೇಕ ಖಾಲಿಯಾಗಿದೆ. ಆದರೆ ಅಕ್ಕಪಕ್ಕದ 4-5
ಹೊಂಡಗಳಲ್ಲಿ ನೀರಿದೆ. ಇಲ್ಲಿಂದ ಪಂಪಿಂಗ್ ಮಾಡಲಾಗುತ್ತದೆ. ಇಲ್ಲವಾದರೆ ಈ ನೀರು ಬೇಸಗೆಯ ಬಿಸಿಗೆ ಬತ್ತಿ ಹೋಗಿ ಉಪಯೋಗಕ್ಕೆ ಸಿಗುವುದಿಲ್ಲ ಎಂದು ಈಗಲೇ ಪಂಪಿಂಗ್ ಮಾಡಿ ಇದನ್ನು ಡ್ಯಾಂನಲ್ಲಿ ಶೇಖರಿಸಿಡ ಲಾಗುತ್ತದೆ. ಸದ್ಯ ನೀರಿನ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಸ್ಯೆ ಎದುರಾಗುವ ಮೊದಲೇ ಪರಿಹಾರ
ನಗರ ಸಭೆಗೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಬರಬಾರದು ಅನ್ನುವ ಕಾರಣಕ್ಕೆ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದೇವೆ. ಕಳೆದ ವರ್ಷ ಮೇ ತಿಂಗಳ ಆರಂಭದಲ್ಲಿಯೇ ಸಂಪೂರ್ಣ ನೀರು ಖಾಲಿಯಾಗಿತ್ತು. ಈ ಬಾರಿ ಎಪ್ರಿಲ್‌ನಲ್ಲಿಯೇ ಬತ್ತಿ ಹೋಗುವ ಗುಂಡಿಗಳ ನೀರು ಶೇಖರಿಸಿ ನಿರಂತರ ನೀರು ಕೊಡುವ ವ್ಯವಸ್ಥೆ ಆಗಲಿದೆ. ಇಲ್ಲಿರುವ ನೀರು ಒಂದು ಬಾರಿ ಸಂಪರ್ಕ ಕಡಿತಗೊಂಡರೆ ಮತ್ತೆ ಬಜೆಗೆ ಹರಿಸಲು ಸಾಧ್ಯವಾಗುವುದಿಲ್ಲ. ಸಂಪರ್ಕ ಕಡಿತವಾಗುವ ಮೊದಲೇ ನೀರನ್ನು ಪಂಪಿಂಗ್ ಮಾಡಿ ಶಿರೂರಿಗೆ ಹರಿಸಬೇಕಿದೆ. ನೀರು ಖಾಲಿ ಆದ ಮೇಲೆ ಮಾಡಿದರೆ ಪ್ರಯೋಜನ ಆಗುವುದಿಲ್ಲ. ಸಮಸ್ಯೆ ಎದುರಾಗುವ ಮೊದಲೇ ಪರಿಹಾರ ಮಾರ್ಗಗಳನ್ನು ಕಂಡುಕೊಂಡಿದ್ದೇವೆ.
–ರಘುಪತಿ ಭಟ್ , ಶಾಸಕರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.