ಪೊಲೀಸ್ ಶೋಧದ ಬೆನ್ನಲ್ಲೇ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವ 100 ತಬ್ಲಿಘಿಗಳು
ಪಾಕಿಸ್ತಾನದಲ್ಲೂ ಹೆಚ್ಚುತ್ತಿದೆ ಸೋಂಕಿತ ತಬ್ಲಿಘಿಗಳ ಸಂಖ್ಯೆ
Team Udayavani, Apr 10, 2020, 9:04 AM IST
ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದವರನ್ನು ಕೋವಿಡ್ ಸೋಂಕು ತಪಾಸಣೆಗಾಗಿ ಕರೆದೊಯ್ಯುತ್ತಿರುವುದು.
ನವದೆಹಲಿ: ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿ, ಆನಂತರ ತಲೆ ಮರೆಸಿಕೊಂಡಿರುವ ತಬ್ಲೀಘಿ -ಎ-ಜಮಾತ್ ಸಂಘಟನೆಯ ಇನ್ನೂ 100 ಜನ ತಬ್ಲೀಘಿ ಗಳು ರಾಷ್ಟ್ರ ರಾಜಧಾನಿಯ ವಿವಿಧೆಡೆ ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂಬ ಆತಂಕಕಾರಿ ವಿಚಾರ ಬಯಲಾಗಿದೆ.
ತಲೆಮರೆಸಿಕೊಂಡಿರುವ ಮಾಹಿತಿಯ ಜಾಡು ಹಿಡಿದು ಮುನ್ನಡೆದಿದ್ದ ದೆಹಲಿ ಪೊಲೀಸರು ಅಂಥವರನ್ನು ಪತ್ತೆ ಹಚ್ಚಲು ಅವರ ಮೊಬೈಲ್ ಡೇಟಾ ಮಾಹಿತಿಗಳನ್ನು ಬಳಸಲಾರಂಭಿಸಿದ್ದರು. ಪೊಲೀಸರ ಈ ತಂತ್ರಗಾರಿಕೆ ಅರಿವಿಗೆ ಬಂದಿದ್ದೇ ತಡ, ದೆಹಲಿಯ ನಾನಾ ಭಾಗಗಳಲ್ಲಿ ಅಡಗಿದ್ದ ತಬ್ಲೀಘಿಗಳು ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ. ಜೊತೆಗೆ, ಈವರೆಗೆ ಪತ್ತೆಯಾಗಿರುವ 198 ವಿದೇಶಿ ತಬ್ಲೀಘಿಗಳನ್ನು ಗುರುತು ಹಚ್ಚುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಾಕ್ ಗುಡುಗು: ನೆರೆಯ ಪಾಕಿಸ್ತಾನದಲ್ಲೂ ಕೋವಿಡ್ ಸೋಂಕು ಹರಡಿರುವ ತಬ್ಲೀಘಿ-ಎ-ಜಮಾತ್ ಸಂಘಟನೆಯ ವಿರುದ್ಧ ಅಲ್ಲಿನ ಸರಕಾರ ಕಿಡಿ ಕಾರಿದೆ. ಕೋವಿಡ್ ಭೀತಿ ಆವರಿಸಿದ ದಿನಗಳಲ್ಲೇ ಸರಕಾರದ ಒಪ್ಪಿಗೆ ಇಲ್ಲದಿದ್ದರೂ ಪಂಜಾಬ್‌ನ ರೈವಿಂದ್ ನಗರದಲ್ಲಿ ತಬ್ಲೀಘಿ ಸಂಘಟನೆಯು ಮಾ. 10ರಂದು ಅದ್ಧೂರಿಯಾಗಿ ಧಾರ್ಮಿಕ ಸಮಾವೇಶ ಆಯೋಜಿಸಿತ್ತು. ಅದರಲ್ಲಿ 70ರಿಂದ 80 ಸಾವಿರ ತಬ್ಲೀಘಿಗಳು ಭಾಗವಹಿಸಿದ್ದರು.
ಅದರ ಬೆನ್ನಲ್ಲೇ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಹಾಜರಾಗಿದ್ದ ಸುಮಾರು 30,000 ವಿದೇಶಿ ತಬ್ಲೀಘಿಗಳು ಪಾಕಿಸ್ತಾನದಲ್ಲೇ ಉಳಿಯುವಂತಾಗಿದೆ. ಇದರಿಂದ ಸೋಂಕು ಗಣನೀಯವಾಗಿ ಹರಡುತ್ತಿದೆ. ಸಾವಿರಾರು ತಬ್ಲೀಘಿಗಳಲ್ಲಿ ಸೋಂಕು ಅಥವಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. ಈವರೆಗೆ, 10,200 ತಬ್ಲೀಘಿಗಳನ್ನು ನಿಗ್ರಹ ವಲಯಕ್ಕೆ ರವಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.