ಲಾಕ್‌ಡೌನ್‌ಗೆ ಡೋಂಟ್‌ ಕೇರ್‌!

ಆದೇಶಕ್ಕಿಲ್ಲ ಕಿಮ್ಮತ್ತು ಕೆಲವೆಡೆ ಜನರ ದೌಲತ್ತು ಪೊಲೀಸರು ಸುಸ್ತೋ ಸುಸ್ತು

Team Udayavani, Apr 10, 2020, 1:39 PM IST

10-April-14

ಶಿವಮೊಗ್ಗ: ಕುವೆಂಪು ರಸ್ತೆಯಲ್ಲಿ ಕಂಡುಬಂದ ವಾಹನ, ಜನದಟ್ಟಣೆ

ಶಿವಮೊಗ್ಗ: ಕೊರೊನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದ್ದರೂ ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಲಾಕ್‌ಡೌನ್‌ ತೆರವಾದಂತೆ ಕಾಣುತ್ತಿದೆ. ಲಾಕ್‌ಡೌನ್‌ ಘೋಷಣೆ ಮಾಡಿದ ದಿನದಿಂದಲೇ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಪ್ರತಿಯೊಬ್ಬರು ಆದೇಶವನ್ನು ಪಾಲಿಸಬೇಕು ತಪ್ಪಿದಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿತ್ತು. ಈ ನಡುವೆ ಲಾಕ್‌ ಡೌನ್‌ ಉಲ್ಲಂಘಿಸಿ ರಸ್ತೆಗಿಳಿದ ದ್ವಿಚಕ್ರ ವಾಹನ ಸವಾರರಿಗೆ ಲಾಠಿ ಏಟು ಕೂಡ ಬಿದ್ದವು. ಒಂದೆರಡು ದಿನ ಈ ರೀತಿ ಪ್ರಯೋಗ ನಡೆದರೂ ಜನ ಇದಕ್ಕೂ ಬಗ್ಗಲಿಲ್ಲ.

ಎಲ್ಲ ಪ್ರಯತ್ನ ಮಾಡಿದ ಪೊಲೀಸರೂ ಕೊನೆಗೆ ಸುಮ್ಮನಾದರು. ಇದರ ಪರಿಣಾಮ ಎಂಬಂತೆ ಕ್ರಮೇಣ ನಗರದ ಬಿ.ಎಚ್‌. ರಸ್ತೆ, ನೆಹರು ರಸ್ತೆ, ದುರ್ಗಿಗುಡಿ, ಜೈಲ್‌ ರಸ್ತೆ, ವಿನೋಬನಗರ 100 ಅಡಿ ರಸ್ತೆ, ಸಾಗರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗತೊಡಗಿದೆ. ಸಂಚಾರಿ ಪೊಲೀಸರು ಇದನ್ನು ನೋಡಿಯೂ ನೋಡದಂತೆ ಸುಮ್ಮನಾಗಿದ್ದಾರೆ. ಲಾಕ್‌ ಡೌನ್‌ ಜಾರಿಯಲ್ಲಿದ್ದರೂ ತರಕಾರಿ, ಹಾಲು, ಔಷಧ, ದಿನಸಿ ಸಾಮಗ್ರಿ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತರಕಾರಿ, ಹಾಲು, ದಿನಸಿ, ಔಷಧ ಖರೀದಿ ನೆಪದಲ್ಲಿ ಮನೆಯಿಂದ ಹೊರಬಂದು ರಾಜಾರೋಷವಾಗಿ ತಿರುಗಾಡುವುದು ಮುಂದುವರೆದಿದೆ.

ಇದಲ್ಲದೆ ಬೆಳಗ್ಗೆ ತಾಲೂಕಿನ ಯಾವುದೇ ಕೇಂದ್ರದಿಂದಲೂ ಸರಾಗವಾಗಿ ಓಡಾಡಬಹುದಾಗಿದೆ. ತಾಲೂಕು ಕೇಂದ್ರದಲ್ಲಿ ಚೆಕ್‌ಪೋಸ್ಟ್‌ ಇದ್ದರೂ ಅಲ್ಲಿ 24 ಗಂಟೆಯೂ ಸಿಬ್ಬಂದಿ ಇರುವುದಿಲ್ಲ. ಅಲ್ಲದೆ ಪ್ರಮುಖ ವ್ಯಾಪಾರ ಪ್ರದೇಶಗಳಲ್ಲಿ ಮಳಿಗೆಗಳು ನಿಧಾನಕ್ಕೆ ತೆರೆಯ ಲಾರಂಭಿಸಿದೆ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸತೊಡಗಿದ್ದಾರೆ. ಇನ್ನು ಬ್ಯಾಂಕು, ಎಟಿಎಂ ಕೇಂದ್ರ, ಪಡಿತರ ಅಂಗಡಿಗಳ ಎದುರು ಜನಜಂಗುಳಿಯೇ ನೆರೆದಿರುತ್ತದೆ. ಹೆಚ್ಚಿನ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮ ಧಿಕ್ಕರಿಸಲಾಗುತ್ತಿದೆ. ಜತೆಗೆ, ನಗರದ ಹೊರ ಭಾಗಗಳಲ್ಲಿ ಅಂಗಡಿ-ಮುಂಗಟ್ಟುಗಳು ಒಂದೊಂದಾಗಿ ತೆಗೆಯಲಾರಂಭಿಸಿವೆ.

ಕೊರೊನಾ ಎಂಬ ಮಾಹಾಮಾರಿ ಇನ್ನಿಲ್ಲದಂತೆ ಕಾಡುತ್ತಿದೆ. ರಾಜ್ಯದಲ್ಲೂ ಸೋಂಕು ಹೆಚ್ಚುತ್ತಿದ್ದು, ಎಲ್ಲೆಡೆ ಭೀತಿ ಮೂಡಿಸಿದೆ. ಇದನ್ನು ತಡೆಯಲೆಂದೇ ಲಾಕ್‌ಡೌನ್‌ ಇದ್ದರೂ ಜನ ಉದಾಸೀನತೆ ತೋರುತ್ತಿರುವುದು ಮಾತ್ರ ವಿಪರ್ಯಾಸ.

ಟಾಪ್ ನ್ಯೂಸ್

1-chagan

Maharashtra; ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ: ಭುಜಬಲ್‌ ಅಸಮಾಧಾನ

1-qeq-wewqe

Constitution; ರಾಜ್ಯಸಭೆಯಲ್ಲಿ ಖರ್ಗೆ-ನಿರ್ಮಲಾ ಜಟಾಪಟಿ

High Court: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು

High Court: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು

Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…

Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…

Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ

Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ

1-hck

Hockey; ವನಿತಾ ಜೂನಿಯರ್‌ ವಿಶ್ವಕಪ್‌ : ಭಾರತ ಆಯ್ಕೆ

ಇದು 0 ಪರ್ಸೆಂಟ್‌ ಅಭಿವೃದ್ಧಿ,100 ಪರ್ಸೆಂಟ್‌ ಭ್ರಷ್ಟಾಚಾರದ ಸರಕಾರ: ಸುನಿಲ್‌

ಇದು 0 ಪರ್ಸೆಂಟ್‌ ಅಭಿವೃದ್ಧಿ,100 ಪರ್ಸೆಂಟ್‌ ಭ್ರಷ್ಟಾಚಾರದ ಸರಕಾರ: ಸುನಿಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siruguppa: ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆಯ ಶವ ಪತ್ತೆ

Siruguppa: ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆಯ ಶವ ಪತ್ತೆ

raghavendra

Shimoga; ನಮ್ಮ ನಾಯಕರು ಗಮನ ಹರಿಸಲಿ: ಕುಮಾರ್‌ ಬಂಗಾರಪ್ಪ ಹೇಳಿಕೆಗೆ ರಾಘವೇಂದ್ರ ತಿರುಗೇಟು

ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳುಗಳ ಕಾಲ ನಿರ್ಬಂಧ

Sagara: ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳುಗಳ ಕಾಲ ನಿರ್ಬಂಧ

9

BJP: ಜನವರಿಯಲ್ಲಿ ರಾಜ್ಯಾಧ್ಯಕ್ಷರ ಬದಲು; ಕುಮಾರ ಬಂಗಾರಪ್ಪ

car-parkala

Sagara: ಪ್ರವಾಸಿ ಬಸ್ ಅಪಘಾತ; 15ಕ್ಕೂ ಹೆಚ್ಚು ಮಂದಿಗೆ ಗಾಯ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-chagan

Maharashtra; ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ: ಭುಜಬಲ್‌ ಅಸಮಾಧಾನ

Suside-Boy

Sulya: ಮಂಡೆಕೋಲು ಗ್ರಾಮದ ಯುವಕ ಆತ್ಮಹತ್ಯೆ

1-sambhal

Sambhal: ದೇಗುಲದ ಬಾವಿಯಲ್ಲಿ 3 ಭಗ್ನ ವಿಗ್ರಹ ಪತ್ತೆ

Bus-Steering

Uppinangady: ಹಿಮ್ಮುಖ ಚಲಿಸಿದ ಬಸ್‌: ವಿದ್ಯಾರ್ಥಿಗೆ ಗಾಯ

1-ger

ವಿಶ್ವಾಸ ಕಳೆದುಕೊಂಡ ಜರ್ಮನಿ ಚಾನ್ಸಲರ್‌: ಶೀಘ್ರ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.