ಸೋಂಕು ಮೂಲ ಪತ್ತೆಗೆ ವೈರಾಲಜಿ ತಜ್ಞರ ನೇಮಕ
Team Udayavani, Apr 10, 2020, 5:21 PM IST
ಸಾಂದರ್ಭಿಕ ಚಿತ್ರ
ಮಂಡ್ಯ: ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡಿರುವ ಮೂಲವನ್ನು ಪತ್ತೆ ಹಚ್ಚಲು ವಿಶ್ವ ಆರೋಗ್ಯ ಸಂಸ್ಥೆ ನಿಯಮಾವಳಿ ಪ್ರಕಾರ ವೈರಾಲಜಿ ತಜ್ಞರೊಬ್ಬರನ್ನು ತನಿಖಾಧಿಕಾರಿಯನ್ನಾಗಿ (ಕನ್ಸಲ್ಟೆಂಟ್) ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಏ.7ರ ಮಂಗಳವಾರದಿಂದ ಕೋವಿಡ್ 19 ಸೋಂಕು ದೃಢಪಟ್ಟ ವರದಿ ಕೈ ಸೇರುತ್ತಿದ್ದಂತೆ ಸೋಂಕು ಯಾರಿಂದ ಯಾರಿಗೆ ಹರಡಿದೆ ಎಂಬುದರ ಮೂಲ ಪತ್ತೆಗೆ ಜಿಲ್ಲಾಡಳಿತ ಮುಂದಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಅವಲೋಕನ ಮಾಡಿರುವ ಆರೋಗ್ಯ ಅಧಿಕಾರಿಗಳಿಗೆ ಸಾಕಷ್ಟು ಗೊಂದಲಗಳು ಕಾಡುತ್ತಿದ್ದು, ನಿಖರ ಮಾಹಿತಿ ಸಿಗದೆ ತಲೆ ನೋವು ತಂದಿದೆ. ದೆಹಲಿಯ ತಬ್ಲೀಘಿ ಸಭೆಯಲ್ಲಿ ಭಾಗವಹಿಸಿದ್ದ 10 ಧರ್ಮಗುರುಗಳು ಹಾಗೂ ಮಳವಳ್ಳಿಯಿಂದ ತೆರಳಿದ್ದ 7 ಮಂದಿ ಪೈಕಿ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಈ ಸೋಂಕು ಮೊದಲಿಗೆ ಕಂಡು ಬಂದಿದ್ದು ಯಾರಲ್ಲಿ, ಅವರಿಗೆ ಹೇಗೆ ಬಂದಿತು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ವೈರಸ್ ಹರಡಿದ ಮೂಲ ಪತ್ತೆಗೆ ಆರೋಗ್ಯ ಇಲಾಖೆ ವಿಶ್ವ ಆರೋಗ್ಯ ಸಂಸ್ಥೆ ನಿಯಮಾವಳಿ ಅನುಸಾರ ವೈರಾಲಜಿ ತಜ್ಞರೊಬ್ಬರನ್ನು ತನಿಖಾಧಿಕಾರಿಯನ್ನಾಗಿ (ಕನ್ಸಟೆಂಟ್) ನಿಯೋಜಿಸಲಾಗಿದ್ದು, ಈ ಅಧಿಕಾರಿ ಸೋಂಕು ಹರಡಿದ್ದು ಎಲ್ಲಿಂದ, ಅದಕ್ಕೆ ಕಾರಣರು ಯಾರು, ಸೋಂಕಿತರು ಯಾರ್ಯಾರನ್ನು ಸಂಪರ್ಕಿಸಿದ್ದಾರೆ ಎಂಬುದರ ಕುರಿತಂತೆ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.
ಸೋಂಕಿನ ಮೂಲ ಪತ್ತೆಯಾದಲ್ಲಿ ಹರಡುವಿಕೆಯನ್ನು ಸುಲಭವಾಗಿ ತಪ್ಪಿಸಬಹುದು. ಈ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ಅಧಿಕಾರಿಗಳು ಮೂಲ ಪತ್ತೆಗೆ ಕಾರ್ಯೋನ್ಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.