ವಿವಾಹ ನಿಯಮ ಉಲ್ಲಂಘಿಸಿದರೆ ಎಫ್‌ಐಆರ್: ಸಿಪಿಐ
Team Udayavani, Apr 10, 2020, 5:28 PM IST
ಎನ್.ಆರ್.ಪುರ: ಪಪಂನಲ್ಲಿ ಕೋವಿಡ್ ಕುರಿತ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಯಿತು
ಎನ್.ಆರ್.ಪುರ: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿವಾಹವನ್ನು ಮನೆಯಲ್ಲಿಯೇ ಮಾಡಬೇಕು. ವಧು ಮತ್ತು ವರನ ಕಡೆ ತಲಾ 5 ಜನರು ಮಾತ್ರ ಇರಬೇಕು. ಈ ನಿಯಮ ಉಲ್ಲಂಘಿಸಿದರೆ ಎಫ್‌ಐಆರ್ ದಾಖಲಿಸಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ಸಿಪಿಐ ಎಸ್.ಸುರೇಶ್ ಹೇಳಿದರು.
ಪಪಂನಲ್ಲಿ ನಡೆದ ಕೋವಿಡ್ ಕುರಿತು ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.ಲಾಕ್‌ಡೌನ್ ಇರುವುದರಿಂದ ಹೊರ ಜಿಲ್ಲೆಯಿಂದ ಯಾರಿಗೂ ಜಿಲ್ಲೆಯ ಒಳಗೆ ಬರಲು ಅವಕಾಶವಿಲ್ಲ. ಮಂಗಳೂರಿನಿಂದ ಬಿಜಾಪುರಕ್ಕೆ ಕಾರ್ಮಿಕರನ್ನು 15ಸಾವಿರ ರೂ. ಬಾಡಿಗೆ ಆಧಾರದ ಮೇಲೆ ದಾವಣ ಗೆರೆಗೆ ಸೇರಿದ ಖಾಸಗಿ ಆ್ಯಂಬುಲೆನ್ಸ್ ನಲ್ಲಿ 21 ಜನರನ್ನು ಸಾಗಿಸುತ್ತಿದ್ದ ಪ್ರಕರಣ ಕಂಡು ಬಂದಿದೆ. ಇವರನ್ನು ಬಂಧಿ ಸಿ, ಎಫ್ ಐಆರ್ ದಾಖಲಿಸಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಮುಂದೆ ಹೊರ ಜಿಲ್ಲೆಗೆ ಹೋಗ
ಬೇಕಾದರೆ ಡಿಸಿ, ಎಸ್ಪಿ ಸಹಿಯುಳ್ಳ ಪತ್ರ ಅಗತ್ಯ ಎಂದರು.
ಅಕ್ರಮವಾಗಿ ವಾಹನಗಳ ಒಳಬರುವಿಕೆ ತಡೆಗಟ್ಟಲು ಎನ್.ಆರ್.ಪುರದಲ್ಲಿ 3, ಬಾಳೆಹೊನ್ನೂರಿ ನಲ್ಲಿ 1 ಹೆಚ್ಚುವರಿ ತಪಾಸಣಾ ಘಟಕ ಸ್ಥಾಪಿಸಲಾಗಿದೆ ಎಂದರು. ತಾಪಂ ಇಒ ಎಸ್.ನಯನ, ಕೊಪ್ಪ ಡಿವೈಎಸ್ ಪಿ.ಎಸ್.ರಾಜು, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ| ವೀರ ಪ್ರಸಾದ್ ಮಾತನಾಡಿದರು. ತಹಶೀಲ್ದಾರ್ ಎಚ್.ಎಸ್.ಪರಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.