ಕೆರೆ ಗೇಟ್ ತೆರೆದು ಕುಡಿವ ನೀರು ಪೋಲು!
ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರ ಆಗ್ರಹ
Team Udayavani, Apr 10, 2020, 5:43 PM IST
ತೆಲಸಂಗ: ಹೊರ ವಲಯದ ಕೆರೆ ನೀರು ಹರಿಬಿಡಲು ಕಿಡಿಗೇಡಿಗಳು ಹಾಳು ಮಾಡಿದ್ದ ವಾಲ್ ದುರಸ್ತಿ ಮಾಡಲಾಯಿತು.
ತೆಲಸಂಗ: ಕೆಲ ಕಿಡಿಗೇಡಿಗಳು ಗ್ರಾಮದ ಹೊರ ವಲಯದ ಕೆರೆಯ ಗೇಟ್ ಗಳನ್ನು ತೆರೆದು ನೀರು ಹರಿಬಿಟ್ಟ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ತೆಲಸಂಗ ಸೇರಿದಂತೆ 4 ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ತಲೆದೋರಬಾರದು ಅನ್ನುವ ಕಾರಣಕ್ಕೆ ಕೆರೆಯಲ್ಲಿ ಉಳಿಸಿಕೊಂಡಿರುವ ಕೆರೆ
ನೀರನ್ನು ಹರಿಬಿಡುವ ಕೆಲಸ ಒಂದು ವಾರದಲ್ಲಿ ಮೂರು ಬಾರಿ ನಡೆದಿದೆ ಎನ್ನಲಾಗಿದೆ. ರಾತ್ರಿ ಹೊತ್ತು ನೀರು ಬಿಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ರಾತ್ರಿ ಸ್ಥಳಕ್ಕೆ ತೆಲಸಂಗ ಗ್ರಾಪಂ ಸಿಬ್ಬಂದಿ ಆಗಮಿಸುತ್ತಿದ್ದಂತೆ ಕಿಡಿಗೇಡಿಗಳು ಓಡಿ ಹೋಗಿದ್ದಾರೆ. ಸದ್ಯಕ್ಕೆ ಕೆರೆ ಕೆಳಭಾಗದ ಮತ್ತು ಸುತ್ತಲಿನ ರೈತರು ಬೇಕಂತಲೇ ಈ ಕೃತ್ಯ ಎಸಗುತ್ತಿದ್ದಾರೆ. ರಾತ್ರಿ ಹೊತ್ತು ಪಂಪ್‌ಸೆಟ್ ಬಳಸಿ ಮತ್ತು ವಾಲ್ ತಿರುವಿ ಹಾಗೂ ಒಡ್ಡ ಒಡೆದು ನೀರು ಬಿಟ್ಟುಕೊಳ್ಳುತ್ತಾರೆ ಅಂತ ಗೊತ್ತಿದ್ದರೂ ಅಂಥವರ ಮೇಲೆ ಪ್ರಕರಣ ದಾಖಲಿಸದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Bailhongal: ಯುವಕನಿಗೆ ಚಾಕು ಇರಿದು ಬರ್ಬರವಾಗಿ ಕೊ*ಲೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.