![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 10, 2020, 6:29 PM IST
ಚೆನ್ನೈ: ಕೊರೊನಾ ವೈರಸ್ ಜಾಗೃತಿ ಮೂಡಿಸಲು ಮಾಡಿದ ಚಿತ್ರ ಬರಹ.
ಪ್ಯಾರಿಸ್: ಲಾಕ್‌ಡೌನ್ ಆದೇಶ ಜಾರಿಯಾದಾಗಿನಿಂದ ಹಲವು ವಿಲಕ್ಷಣವಾದ ಸುದ್ದಿಗಳೂ ಬರುತತಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ದೃಷ್ಟಿಯಿಂದ ಸಾವಿರಾರು, ನೂರಾರು ಕಿ.ಮೀ. ಗಳನ್ನು ಕಾಲು ದಾರಿಯಲ್ಲೇ ಸಾಗಿ ಊರು ಸೇರಿದವರೂ ಇದ್ದಾರೆ. ಇವರ ಮಧ್ಯೆ ಮದ್ಯಪಾನವಿಲ್ಲದೇ ತೊಂದರೆಗೀಡಾದ ಕೆಲವು ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡದ್ದಿದೆ.
ಇಲ್ಲೊಬ್ಬ ಭೂಪ ಸಿಗರೇಟ್‌ಗಾಗಿ ಪಕ್ಕದ ದೇಶಕ್ಕೆ ಹೋಗಿ ಅಪಾ ಯವನ್ನು ಎದುರಿಸಿ 120 ಪೌಂಡ್ ದಂಡ ಪಾವತಿಸಿ ದ್ದಾನೆ. ಅದೃಷ್ಟವಶಾತ್ ಪೊಲೀಸರು ಮತ್ತೆ ಮನೆಗೆ ತಂದು ಬಿಟ್ಟಿದ್ದಾರೆ.
ಎಲ್ಲರಿಗೂ ತಿಳಿದಿರುವ ಹಾಗೇ ಕೋವಿಡ್-19 ನಿಯಂತ್ರಣಕ್ಕಾಗಿ ಫ್ರಾನ್ಸ್ ನಲ್ಲೂ ಲಾಕ್ ಡೌನ್ ಜಾರಿ ಮಾಡಲಾಗಿದೆ. ಆದರೆ ಈ ಘಟನೆಯ ಮೂಲ ರೂವಾರಿಯಾದ ಸಿಗರೇಟ್ ವ್ಯಸನಿ (ಆತನ ಹೆಸರನ್ನು ಬಹಿರಂಗಪಡಿಸಿಲ್ಲ) ದೇಶದಲ್ಲಿ ಎಲ್ಲಿಯೂ ಸಿಗರೇಟ್ ಸಿಗುತ್ತಿಲ್ಲ. ಆದರೆ ಸಿಗರೇಟ್ ಸೇದದೇ ಇರುವುದು ಹೇಗೆ ಎಂದು ಭಾವಿಸಿ ಸಿಗರೇಟ್ ಖರೀದಿಗಾಗಿ ಪಕ್ಕದ ದೇಶಕ್ಕೆ ಗಾಡಿ ತೆಗೆದುಕೊಂಡು ಹೊರಟ. 20 ಮೈಲಿ ಹೋದವನನ್ನು ಚೆಕ್‌ಪೋಸ್ಟ್ ನಲ್ಲಿದ್ದ ಅಧಿಕಾರಿಗಳು ತಡೆದು ವಾಪಸು ಕಳಿಸಿದರು.
ಕಾಲ್ನಡಿಗೆಯಲ್ಲಿ ಪಯಣ
ಪೊಲೀಸರ ಆದೇಶದಂತೆ ಮನೆಗೆ ಹಿಂದಿರುಗಿದವನೇ ಮತ್ತೂಂದು ಉಪಾಯ ಹುಡುಕಿದೆ. ತಾನು ವಾಸವಿರುವ ಸ್ಥಳದಿಂದ ಸ್ಪೇನ್‌ನ ಲಾ ಜಾನ್ ಕ್ವೆರಾಕ್ಕೆ ಅಂದಾಜು 40 ಕಿ.ಮೀ. ದೂರ. ಕಾಲ್ನಡಿಗೆಯಲ್ಲೇ ಹೊರಡಲು ಅನುವಾದ. ಅರ್ಧ ದಿನದ ಪಯಣವೆಂದು ಭಾವಿಸಿ ಪೊಲೀಸರ ಕಣ್ತಪ್ಪಿಸಿ ಬೆಟ್ಟ, ಕಂದಕ ದಾಟಲು ಹೊರಟ.
ಅಪಾಯ ಎದುರಾಗಿತ್ತು
ಆದರೆ ಹೀಗೆ ಗುಡ್ಡ ಪ್ರದೇಶಗಳ ಮಧ್ಯೆ ಹೊರಟವನು ಪೈರೆನೀಸ್ ಬೆಟ್ಟಗಳ ನಡುವೆ ಸಾಗುವಾಗ ಆಯತಪ್ಪಿ ಕಂದಕಕ್ಕೆ ಬಿದ್ದ. ಆಪಾಯ ಸಿಲುಕಿ ಮುಂದೇನು ಮಾಡುವುದು ಎಂದು ಯೋಚಿಸುತ್ತಿದವನಿಗೆ ತನ್ನ ಮೊಬೈಲ್ ನೆನಪಾಯಿತು. ತತ್‌ಕ್ಷಣ ಫೋನ್ ತಗೆದುಕೊಂಡು ಎಸ್‌ಒಎಸ್ ಸಂದೇಶ ರವಾನಿಸಿದ. ಮೌಂಟೇನ್ ಪೊಲೀಸರು ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ಆಗಮಿಸಿ ಕಂದಕಕ್ಕೆ ಬಿದ್ದವನನ್ನು ಎತ್ತಿದರು.
ದಂಡ ತೆತ್ತ
ಸುರಕ್ಷಿತವಾಗಿ ಪುನಃ ಆತನ ನಿವಾಸದ ಬಳಿ ಬಿಟ್ಟ ಪೊಲೀಸರು ಲಾಕ್‌ಡೌನ್ ನಿಯಮ ಉಲ್ಲಂ ಸಿ ಸಿಗರೇಟ್ ಖರೀದಿಗೆ ತೆರಳಿದ್ದಕ್ಕೆ 120 ಪೌಂಡ್ ದಂಡ ವಿಧಿಸಿದರು. ಸದ್ಯ ಫ್ರಾ®Õ…ನಲ್ಲಿ ಪರಿಸ್ಥಿತಿ ಹೇಗಿದೆ ಅಂದರೆ ಯಾದ ದಾಖಲೆಗಳಿಲ್ಲದೆ ಯಾರಾದರೂ ರಸ್ತೆಗೆ ಇಳಿದರೆ 50 ಪೌಂಡ್‌ಗಿಂತಲೂ ಹೆಚ್ಚು ದಂಡ ತೆರಲೇಬೇಕು.
ಸುಷ್ಮಿತಾ ಜೈನ್
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.