ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷವೂ ಅನುಮಾನ ?
Team Udayavani, Apr 11, 2020, 5:51 AM IST
ಟೋಕಿಯೊ: ಮುಂದಿನ ವರ್ಷ (2021)ಕ್ಕೆ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಕೂಡ ನಡೆಯುವುದು ಅನುಮಾನವಾಗಿದೆ ಎಂದು ಟೋಕಿಯೊ ಗೇಮ್ಸ್ನ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ತೋಶಿರೊ ಮುಟೊ ಹೇಳಿದ್ದಾರೆ.
ಕೋವಿಡ್ 19 ವೈರಸ್ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ ಕೂಟವನ್ನು 2021ಕ್ಕೆ ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಇದೀಗ ಜಪಾನ್ನಲ್ಲಿ ವೈರಸ್ ಸೋಂಕು ಹೆಚ್ಚುತ್ತಿದ್ದು ಪ್ರಧಾನಿ ಶಿಂಜೊ ಅಬೆ ಒಂದು ವಾರ ತುರ್ತು ಘೋಷಣೆ ಮಾಡಿದ್ದಾರೆ.
ಕಳೆದ ತಿಂಗಳು ಇಂಟರ್ನ್ಯಾಶನಲ್ ಒಲಿಂಪಿಕ್ ಸಮಿತಿ (ಐಒಸಿ) ಎಲ್ಲ ರಾಷ್ಟ್ರಗಳ ಜತೆ ಸಭೆ ನಡೆಸಿ 2021ರಲ್ಲಿ ಒಲಿಂಪಿಕ್ಸ್ ನಡೆಸುವುದಾಗಿ ನಿರ್ಧರಿಸಿತು. ಆದರೆ ಇದು ಕೂಡ ನಡೆಯುವುದು ಅನುಮಾನವಾಗಿದೆ ಏಕೆಂದರೆ ಕೋವಿಡ್ 19 ಸೋಂಕು ಯಾವಾಗ ಹತೋಟಿಗೆ ಬರುತ್ತದೆ ಎನ್ನುವುದು ಇನ್ನೂ ತಿಳಿದಿಲ್ಲ ಹೊರತಾಗಿ ಈಗಾಗಲೆ ನಿಗಧಿಯಾಗಿರುವ ಕ್ರೀಡಾಕೂಟಕ್ಕೆ 16 ತಿಂಗಳು ಮಾತ್ರ ಉಳಿದಿದೆ. ಈ ನಡುವೆ ಲಾಕ್ಡೌನ್ ಎಷ್ಟು ತಿಂಗಳು ಇರುತ್ತದೆ ಎನ್ನುವುದರ ಬಗ್ಗೆಯೂ ಖಚಿತ ಮಾಹಿತಿಯಿಲ್ಲ. ಇದರಿಂದ ಕ್ರೀಡಾಕೂಟಕ್ಕೆ ಬೇಕಾದ ಸಿದ್ಧತೆಯೂ ವಿಳಂಬವಾಗುತ್ತದೆ. ಈ ಎಲ್ಲ ದೃಷ್ಟಿಕೋನದಿಂದ ಮುಂದಿನ ವರ್ಷವು ಒಲಿಂಪಿಕ್ಸ್ ನಡೆಯುವುದು ಅನುಮಾನವಾಗಿದೆ ಎಂದು ತೋಶಿರೊ ಮುಟೊ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.