ಕೋವಿಡ್ 19 ಸೋಂಕು ಪೀಡಿತರ ದ್ವಿತೀಯ ಸಂಪರ್ಕ ಹೊಂದಿದ್ದವರ ಪರೀಕ್ಷೆ: ಸಚಿವ
Covid 19 Testing of Infected Secondary Connectors: Minister
Team Udayavani, Apr 11, 2020, 6:00 AM IST
ಬೆಂಗಳೂರು: ಈವರೆಗೆ ಕೋವಿಡ್ 19 ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿ ಗಳನ್ನು ಮಾತ್ರ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಇನ್ನು ಮುಂದೆ ಸೋಂಕಿತರ ದ್ವಿತೀಯ ಸಂಪರ್ಕ ಹೊಂದಿದ್ದರು ಎಂದು ಗುರುತಿಸುವ ವ್ಯಕ್ತಿಗಳನ್ನು ಕಡ್ಡಾಯವಾಗಿ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸೋಂಕು ತಗಲಿದ್ದರೆ ಇದರಿಂದ ಶೀಘ್ರ ತಿಳಿಯಲಿದೆ ಎಂದರು.ದಿಲ್ಲಿಯ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ರಾಜ್ಯದಿಂದ ಭಾಗಿ ಯಾಗಿದ್ದವರ ಪೈಕಿ 40 ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢವಾಗಿದೆ. ರಾಜ್ಯದಿಂದ ಸಮಾವೇಶದಲ್ಲಿ ಭಾಗವಹಿ ಸಿದ್ದವರ ಪೈಕಿ 1,176 ಮಂದಿಯ ಸೋಂಕು ಪರೀಕ್ಷೆ ಮಾಡಲಾಗಿದೆ. 976 ಮಂದಿಯ ವರದಿ ನೆಗೆಟಿವ್ ಬಂದಿದೆ. ಬಾಕಿ 160 ಮಂದಿಯ ಪರೀಕ್ಷಾ ವರದಿ ಬರಬೇಕಿದೆ. ರಾಜ್ಯದವರೇ ಆದ 581 ಮಂದಿ ಸದ್ಯ ಹೊರರಾಜ್ಯಗಳಲಿದ್ದು, ಅವರನ್ನು ಪತ್ತೆ ಮಾಡಿ ತಪಾಸಣ ಕ್ರಮ ಕೈಗೊಳ್ಳುವಂತೆ ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ವದಂತಿಗಳಿಗೆ ಕಿವಿ ಕೊಡಬೇಡಿ
ಕೋವಿಡ್ 19 ಸೋಂಕು ಕುರಿತು ವದಂತಿಗಳು ಹೆಚ್ಚಾಗುತ್ತಿವೆ. ರಾಜ್ಯ ಸರಕಾರ ಆರೋಗ್ಯ ಇಲಾಖೆ ವೆಬ್‌ಸೈಟ್‌ನಲ್ಲಿ ಕೋವಿಡ್ 19 ಸೋಂಕಿನ ಕುರಿತು ಎಲ್ಲ ಮಾಹಿತಿ ಸಿಗುತ್ತದೆ. ವದಂತಿಗಳ ಬಗ್ಗೆಯೂ ಅಲ್ಲಿಯೇ ಮಾಹಿತಿ ಇದ್ದು, ಖಚಿತಪಡಿಸಿ ಕೊಳ್ಳಬಹುದು. ರಾಜ್ಯದ ಯಾವ ಭಾಗದಲ್ಲಿ ಎಷ್ಟು ಕೋವಿಡ್ 19 ಪ್ರಕರಣಗಳಿವೆ ಎಂದು ತೋರಿಸಲು ಡ್ಯಾಶ್‌ಬೋರ್ಡ್ ಸಹ ಇದೆ. ಜತೆಗೆ ಕೋವಿಡ್ 19 ಹೋರಾಟದಲ್ಲಿ ಸರಕಾರದ ಜತೆ ಕೈಜೋಡಿಸಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತೇನೆ ಎಂದರೆ ಅಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.