ನೆಟ್ ವರ್ಕ್ ಗಾಗಿ ಮರಹತ್ತಿದ ಅಂತಾರಾಷ್ಟ್ರೀಯ ಅಂಪೈರ್! ಅಷ್ಟಕ್ಕೂ ಆಗಿದ್ದೇನು?
Team Udayavani, Apr 11, 2020, 10:25 AM IST
ನವದೆಹಲಿ: ತಂತ್ರಜ್ಞಾನ ನೀಡಿದ ಸೌಲಭ್ಯಕ್ಕೆ ಇಡೀ ವಿಶ್ವ ವಶವಾಗಿದೆ. ಅದಿಲ್ಲದೇ ಬದುಕುವುದು ಜನರಿಗೆ ಈಗ ಬಹಳ ಕಷ್ಟ. ಅಂತಹದೊಂದು ಕಷ್ಟಕ್ಕೆ ಒಳಗಾಗಿರುವುದು ಭಾರತದ ಕ್ರಿಕೆಟ್ ಅಂಪೈರ್ ಅನಿಲ್ ಚೌಧರಿ.
ಅವರ ತಾಪತ್ರಯವೇನು ಗೊತ್ತಾ? ಅವರಿಗೆ ಕರೆ ಮಾಡಲು ನೆಟ್‌ವರ್ಕ್ ಸಿಗದೇ ಪರದಾಡುತ್ತಿದ್ದಾರೆ. ಅದಕ್ಕಾಗಿ ಅವರು ಮರಹತ್ತಿ ಅಲ್ಲಿಂದ ಮಾತಾಡಬೇಕಾದ ದುಸ್ಥಿತಿ. ಇಂತಹ ಸ್ಥಿತಿ ಬಂದಿದ್ದಾದರೂ ಯಾಕೆ? ಕಾರಣ ಕೋವಿಡ್-19 ದಿಗ್ಬಂಧನ.
ಯಾಕೆ ಹೀಗಾಗಿದ್ದು?: 55 ವರ್ಷದ ಅನಿಲ್ ಚೌಧರಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅಂಪೈರ್ ಆಗಿ ಜನಪ್ರಿಯ. ಅವರು ಇದುವರೆಗೆ 20 ಏಕದಿನ, 27 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದಾರೆ. ಕೋವಿಡ್-19 ದಿಗ್ಬಂಧನ ಹೇರುವುದಕ್ಕಿಂತ ಮುನ್ನ ದಿನ ತಮ್ಮಿಬ್ಬರು ಪುತ್ರರನ್ನು ಕರೆದುಕೊಂಡು, ತಮ್ಮ ಹಳ್ಳಿಗೆ ಹೋಗಿದ್ದಾರೆ.
ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ದಾಂಗ್ರೆಲ್ ಹಳ್ಳಿಯಲ್ಲಿ ಒಂದು ವಾರವಿದ್ದು ಬರಲು ತೆರಳಿದ್ದರು. ಅಷ್ಟರಲ್ಲಿ ದಿಗ್ಬಂಧನ ಘೋಷಣೆಯಾಗಿ ಅವರಲ್ಲಿ ಸಿಕ್ಕಿಕೊಂಡರು. ಅವರ ತಾಯಿ ಮತ್ತು ಪತ್ನಿ ದೆಹಲಿಯಲ್ಲಿದ್ದಾರೆ. ಅಪ್ಪ-ಮಕ್ಕಳು ಹಳ್ಳಿಯಲ್ಲಿ! ಅವರಿಗೆ ದೊಡ್ಡ ಸಮಸ್ಯೆಯಾಗಿರುವುದು ನೆಟ್‌ವರ್ಕ್. ದೆಹಲಿಗೆ ಕೇವಲ 85 ಕಿ.ಮೀ. ದೂರವಿರುವ ಈ ಹಳ್ಳಿಯಲ್ಲಿ ನೆಟ್‌ವರ್ಕ್ ಇಲ್ಲ!
ಅದೇನಾದರೂ ಸಿಗಬೇಕಾದರೆ ಊರ ಹೊರಗಿನ ಮರಹತ್ತಿ ಅಲ್ಲಿಂದ ಮಾತಾಡಬೇಕು. ಅದೂ ಸಿಗುವ ಖಾತ್ರಿಯಿಲ್ಲ. ಇಲ್ಲವಾದರೆ ಮನೆ ಮೇಲೆ ಹತ್ತಬೇಕು. ಇದರಿಂದ ಸಮಯ ಕಳೆಯಲಾಗದೇ ತಾಪತ್ರಯದಲ್ಲಿದ್ದಾರೆ.
ಅದಕ್ಕೂ ಹೆಚ್ಚಿನ ಸಮಸ್ಯೆಯೊಂದಿದೆ! ಕೋವಿಡ್-19 ದಿಂದ ದಿಗ್ಬಂಧನ ಹೇರಲಾಗಿದ್ದರೂ ಮಕ್ಕಳಿಗೆ ಅಂತರ್ಜಾಲದ ಮೂಲಕ ತರಗತಿ ನಡೆದೇ ಇದೆ. ಅದರಲ್ಲಿ ಭಾಗವಹಿಸಲು ಮಕ್ಕಳಿಗೆ ಆಗುತ್ತಿಲ್ಲ. ವಾಪಸ್ ದೆಹಲಿಗೆ ಹೋಗಲೂ ಆಗುತ್ತಿಲ್ಲ. ಈ ಅವಧಿಯಲ್ಲಿ ಅನಿಲ್, ಹಳ್ಳಿಗರಿಗೆ ಸ್ವತ್ಛತೆಯ ಪಾಠ ಹೇಳಿ ಕೊಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.