ನಿಜಕ್ಕೂ ನಾನು ಸತ್ತೇ ಹೋದೆ ಎನಿಸಿದ್ದೆ, ಮತ್ತೆ ಬದುಕಿ ಬಂದೆ
Team Udayavani, Apr 11, 2020, 3:00 PM IST
ನೈಜೀರಿಯಾ: ನಾನು ಸತ್ತೇ ಹೋಗುತ್ತೇನೆ ಎನಿಸುತ್ತಿತ್ತು, ಆದರೆ ಬದುಕಿ ಬಂದೆ. ಇದೇ ನನ್ನ ಅದೃಷ್ಟ ಎಂದಿದ್ದಾರೆ ಕೋವಿಡ್-19 ಸೋಂಕನ್ನು ಗೆದ್ದು ಬಂದಿರುವ ಒಲುವಾಸನ್ ಅಯೋದೆಜಿ.
ನೈಜೀರಿಯಾದ ಪಟ್ಟಣ ಲಾಗೋಸ್‌ನ ಒಲುವಾಸನ್, ತಮ್ಮ ಅನುಭವವನ್ನು ಟ್ವಿಟ್ಟರ್‌ಪೋಸ್ಟ್ ಮುಖಾಂತರ ಹಂಚಿಕೊಂಡಿದ್ದಾರೆ. ಅವರು ಲಾಗೋಸ್ ನ ಪ್ರತ್ಯೇಕ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಇಂಗ್ಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಡೇ ಪ್ರವಾಸದ ಬಳಿಕ ಒಲುವಾಸನ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮುಖ್ಯ ಅತಿಥಿಯಾಗಿದ್ದ ಅವರು ರಾಣಿ ಎಲಿಜಬೆತ್ , ರಾಜಮನೆತನದ ಸದಸ್ಯರು, ಕಾಮನ್‌ವೆಲ್ತ್ ಪ್ರಧಾನ ಕಾರ್ಯದರ್ಶಿ ಪ್ರಟೀಷಿಯಾ ಸ್ಕಾಟ್ಲೆಂಡ್ ಜತೆಗೆ ಮಾರ್ಚ್ 9ರಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
29 ವರ್ಷದ ಒಲುವಾಸುನ್ ಲಾಗೋಸ್‌ನಲ್ಲಿನ ತಮ್ಮ ಮನೆಗೆ ಮರಳಿದ ಬಳಿಕ ಅವರು ಅನಾರೋಗ್ಯಕ್ಕೆ ಒಳಗಾದರು. ತತ್‌ಕ್ಷಣವೇ ಅಲ್ಲಿನ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅನ್ನು ಪರೀಕ್ಷೆಗೆ ಒಳಪಡಿಸಿದರು ಎಂದಿದ್ದಾರೆ.
ಅಸಹನೀಯ ನೋವು
ನಾನು ಸಾಯುತ್ತೇವೆ ಅಂದುಕೊಂಡಿದ್ದೆ. ದಿನಗಳು ಉರುಳಿದಂತೆ ಕಠಿಣವಾಗಿದ್ದವು. ಹಸಿವಿಲ್ಲದೆ, ವಾಂತಿ ದಿನವೆಲ್ಲಾ ಅಸಹನೀಯ ನೋವು ಕಾಡತೊಡಗಿತ್ತು ಎಂದು ಅವರು ಬರೆದಿದ್ದಾರೆ. ಜತೆಗೆ ಈ ರೋಗಕ್ಕೆ ತುತ್ತಾಗುವುದರಿಂದ ತನ್ನ ಸಂಸ್ಥೆಯ ಭವಿಷ್ಯದ ಕುರಿತು ಯೋಚಿಸುವಂತೆ ಮಾಡಿದೆ. ನಾನು ಸಾಯುತ್ತೇನೆ ಎಂದು ಭಾವಿಸಿದ್ದೆ. ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ ಎಂದು ಅವರು ಹೇಳಿದರು.
ಹಾಗಾಗಿ ನಾನು ಗೆಲ್ಲಲು ಸಾಧ್ಯವಾಯಿತು. ಕೊನೆಗೂ ವೈದ್ಯರಿಂದ ಒಳ್ಳೆಯ ಸುದ್ದಿಯನ್ನು ಸ್ವೀಕರಿಸಿದರು. ಅದೇನೆಂದರೆ ತಾನು ಪೂರ್ಣ ಗುಣಮುಖರಾಗಿ ಹೊರಬಂದಿದ್ದು. ಆದರೂ ಎರಡು ದಿನಗಳ ಕಾಲ ವಿಶೇಷ ವೀಕ್ಷಣೆಯಲ್ಲಿಡಲಾಯಿತು. ಬಳಿಕ ಬಿಡುಗಡೆ ಮಾಡಲಾಯಿತು.
ಎನ್‌ಸಿಡಿಸಿ ದೇಶದ ಪ್ರಮುಖ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯಾಗಿದ್ದು, ಕೋವಿಡ್ 19 ಸಾಂಕ್ರಾಮಿಕ ರೋಗ ಪ್ರತಿಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದು, ಸಕಾರಾತ್ಮಕ ಪರೀಕ್ಷೆಯ ಬಳಿಕ ಲಾಗೋಸ್ ನ ಉಪನಗರವಾದ ಯಾಬಾದ ಆಸ್ಪತ್ರೆಯಲ್ಲಿ ಕೇಂದ್ರಕ್ಕೆ ಆ್ಯಂಬುಲೆನ್ಸ್ ಮೂಲಕ ತಮ್ಮನ್ನು ಕರೆದೊಯ್ಯಲಾಯಿತು ಎಂ ಬರೆದಿದ್ದಾರೆ. ಹಾಗೆಯೇ ಆಸ್ಪತ್ರೆಯಲ್ಲಿ ರೋಗಿಗಳಿಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲಾಗಿತ್ತು ಎಂದಿದ್ದಾರೆ.
ಪ್ರತ್ಯೇಕ ಕೇಂದ್ರ
ಸ್ಟಾಂಡ್ ಟು ಎಂಡ್ ರೇಪ್ ಇನಿಶಿಯೇಟಿವ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಒಸೋ ವೊಬಿ ಅವರು ಲೈಂಗಿಕ ದೌರ್ಜನ್ಯದ ವಿರುದ್ದ ಮತ್ತು ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿ ನೀಡುವುದು. ಜತೆಗೆ ಲೈಂಗಿಕ ಕಿರುಕುಳದಿಂದ ಬದುಕುಳಿದವರಿಗೆ ಮಾನಸಿಕ ಸಾಮಾಜಿಕ ಸೇವೆಗಳನ್ನು ಒದಗಿಸಲು ಸಹಕರಿಸುತ್ತಿದ್ದರು.
ಅವರು 2019 ರ ಕಾಮನ್‌ವೆಲ್ತ್ ಯುವವ್ಯಕ್ತಿ ಎಂದು ಗೌರವಿಸಲ್ಪಟ್ಟರು.ಪ್ರಸ್ತುತ ನೈಜೀರಿಯಾದಲ್ಲಿ 135 ಕೋವಿಡ್ 19 ಪ್ರಕರಣಗಳು ದೃಢಪಟ್ಟಿದ್ದು ಅವುಗಳಲ್ಲಿ 81 ಪ್ರಕರಣಗಳು ಲಾಗೋಸ್‌ನಲ್ಲಿ ದಾಖಲಾಗಿದ್ದವು ಎಂದು ಅವರು ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಧನ್ಯವಾದ
ವೈರಸ್ ಪ್ರಕರಣವನ್ನು ಗುರುತಿಸಿ ಚಿಕಿತ್ಸೆ ನೀಡುವಲ್ಲಿ ರಾಜ್ಯವು ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದು ಲಾಗೋಸ್ ರಾಜ್ಯ ಗವರ್ನರ್ ಮತ್ತು ಆರೋಗ್ಯ ಆಯುಕ್ತರಿಗೆ ಒಲುವಾಸನ್, ತಮ್ಮ ಟ್ವಿಟರ್‌ನಲ್ಲಿ ಧನ್ಯವಾದವನ್ನು ಅರ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.