ಟಾಸ್ಕ್ ಫೋರ್ಸ್ ಸಮಿತಿಯಿಂದ ಜಾಗೃತಿ
ಹುಡೇಂ ಗ್ರಾಮದಲ್ಲಿ ಸಾವಿರ ಮನೆಗಳಿಗೆ ಭೇಟಿ, ಕೋವಿಡ್ ವೈರಸ್ ನಿಯಂತ್ರಣಕ್ಕೆ ಸೂಚನೆ
Team Udayavani, Apr 11, 2020, 4:17 PM IST
ಬಳ್ಳಾರಿ: ಟಾಸ್ಕ್ಫೋರ್ಸ್ ಸಮಿತಿ ಸದಸ್ಯರು ಕೂಡ್ಲಿಗಿ ತಾಲೂಕು ಹುಡೇಂ ಗ್ರಾಮದಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿದರು.
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದಲ್ಲಿ ಒಂದು ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದ ಗ್ರಾಪಂ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಕೋವಿಡ್ ವೈರಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಿದರು.
ಗ್ರಾಪಂ ಅಧ್ಯಕ್ಷ ಪಿ.ಮಂಜುನಾಥ ಮಾತನಾಡಿ, ಜೀವ ಉಳಿದರೆ ಜೀವನ ಎನ್ನುವುದನ್ನು ಅರಿತು ಕರೋನಾ ವೈರಸ್ ನಿಯಂತ್ರಣಕ್ಕಾಗಿ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು. ತಾ.ಪಂ ಸದಸ್ಯ ಜಿ.ಪಾಪನಾಯಕ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಕಂಡುಬಂದಿರುವುದರಿಂದ ಗಡಿ ಗ್ರಾಮಗಳಲ್ಲೂ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಮನೆಯಲ್ಲಿರುವ ಮೂಲಕ ಲಾಕ್‌ಡೌನ್ ಆದೇಶ ಪಾಲಿಸಬೇಕು. ಗುಂಪುಗೂಡುವುದನ್ನು ಸ್ವಯಂ ಪ್ರೇರಿತರಾಗಿ ತಡೆಯಬೇಕು. ಅಲ್ಲದೆ, ದಿನಕ್ಕೆ 8-10 ಬಾರಿ ಕೈಗಳನ್ನು ಸೋಪ್‌ನಿಂದ ತೊಳೆಯುವ ಮೂಲಕ ರೋಗ ಹರಡುವುದನ್ನು ತಡೆಯಬೇಕು ಎಂದು ಮನೆ, ಮನೆಗೂ ಭೇಟಿ ನೀಡಿದ ಅರಿವು ಮೂಡಿಸಿದರು.
ಆಯುರ್ವೇದಿಕ್ ಆಸ್ಪತ್ರೆ ವೈದ್ಯಾಧಿಕಾರಿ ಶಿವಲಿಂಗಪ್ಪ, ಪಿಡಿಒ ಮೂಕಪ್ಪ, ಕರುನಾಡು ಸ್ವಯಂ ಸೇವಾ ಸಂಸ್ಥೆ ಕಾರ್ಯದರ್ಶಿ ಹುಡೇಂ ಕೃಷ್ಣಮೂರ್ತಿ, ಗ್ರಂಥಾಲಯ ಮೇಲ್ವಿಚಾರಕ ತುಡುಮ ಗುರುರಾಜ್, ಗ್ರಾಪಂ ಸದಸ್ಯ ರಸೂಲ್‌ಸಾಬ್, ಮುಖಂಡರಾದ ರಾಮಚಂದ್ರಪ್ಪ, ಸೂರಯ್ಯ, ನಡುಗಡ್ಡೆ ತಿಪ್ಪೇಸ್ವಾಮಿ, ಗ್ರಾಪಂ ಸಿಬ್ಬಂದಿ ತಿಪ್ಪೇರುದ್ರಪ್ಪ, ಪಾಲಯ್ಯ, ಅಂಜಿನಪ್ಪ, ಮಲಿಯಪ್ಪ, ದಕ್ಷಿಣಮೂರ್ತಿ, ಎಎನ್‌ಎಂಗಳಾದ ಪ್ರೇಮಾ, ಸ್ವಾಮಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಹುಡೇಂ ಗ್ರಾಮದ ಒಂದು ಸಾವಿರಕ್ಕೂ ಅದಿಕ ಮನೆಗಳಿಗೆ ಟಾಸ್ಕ್ ಫೋರ್ಸ್ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ, ಹೋಟೆಲ್ ಮತ್ತು ಅಂಗಡಿ ಮಾಲೀಕರಿಗೆ ಲಾಕ್‌ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.