ಕೋವಿಡ್-19 ವಿರುದ್ಧ ಹೋರಾಟದಲ್ಲಿ ದಕ್ಷಿಣ ಕೊರಿಯಾದ ತಂತ್ರಜ್ಞಾನ
Team Udayavani, Apr 11, 2020, 5:15 PM IST
ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದರ ಬಳಿಕ ಕೋವಿಡ್ ವೈರಸ್ ಅನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳು ಜಗತ್ತಿನ ಪ್ರಶಂಸೆಯನ್ನು ಗಳಿಸಿದೆ. ಚೀನದಲ್ಲಿ ಅತೀ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದಂತೆ ದಕ್ಷಿಣ ಕೊರಿಯಾ ಎಚ್ಚೆತ್ತುಕೊಂಡದ್ದು ಹಲವು ಸಮಸ್ಯೆಗಳನ್ನು ಬಗೆಹರಿಸಿತು.
ತ್ವರಿತ ಕ್ರಮದ ಭಾಗವಾಗಿ ಉಚಿತ ಕೋವಿಡ್ ಪರೀಕ್ಷೆ ಮತ್ತು ಸಾಮೂಹಿಕ ಪರೀಕ್ಷೆಯನ್ನು ಕೊರಿಯಾ ಮಾಡಿತು. ಈ ಮೂಲಕ ವೈರಸ್ ಅನ್ನು ಎದುರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾದ ಹೆಜ್ಜೆಯನ್ನು ಇಟ್ಟಿತ್ತು. ಹೆಚ್ಚಿನ ವೇಗಕ್ಕಾಗಿ ದಕ್ಷಿಣ ಕೊರಿಯಾ ತಂತ್ರಜ್ಞಾನವನ್ನೂ ಬಳಸಿ ಕೊಂಡಿತು. ಇದರ ಪರಿಣಾಮ ಸೋಂಕು ಹರಡುವಿಕೆಯ ಸರಪಳಿಯನ್ನು ಕಡಿತಗೊಳಿಸಲು ಸಾಧ್ಯವಾಯಿತು.
ಮಾಹಿತಿ
ಸೋಂಕಿತ ರೋಗಿಗಳು ತೆಗೆದುಕೊಳ್ಳಲೇ ಬೇಕಾದ ಕ್ರಮಗಳನ್ನು ನಿಯಮಿತವಾಗಿ ಆನ್ ಲೈನ್ ನಲ್ಲಿ ಪ್ರಕಟಿಸಲಾಗುತ್ತದೆ. ವಿದೇಶಗಳಿಂದ ಬಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸೋಂಕಿನ ಪರೀಕ್ಷೆ ಮಾಡಿಸಬೇಕಿತ್ತು. ಬಳಿಕ ಅಲ್ಲೇ ಈ ಆಪ್ ಅನ್ನು ಡೌನ್ ಲೋಡ್ ಮಾಡಿ ಪ್ರತಿದಿನ ತಮ್ಮ ರೋಗಲಕ್ಷಣಗಳನ್ನು ವರದಿ ಮಾಡುವುದನ್ನು ಕಡ್ಡಾಯ ಗೊಳಿಸಿತ್ತು.
ಎಚ್ಚರಿಕೆ
ಕೊರಿಯಾದಲ್ಲಿ ಬಹುತೇಕರಲ್ಲಿ ಅಂದರೆ 10ರಲ್ಲಿ 9 ಮಂದಿಯಲ್ಲಿ ಮೊಬೈಲ್ ಇದೆ. ಮೇಲಿನ ಆಪ್ ಮೂಲಕ ಪಡೆಯಲಾದ ಮಾಹಿತಿಗಳು ಅಧಿಕಾರಿಗಳಿಗೆ ಲಭ್ಯವಾಗುತ್ತಿತ್ತು. ಆ ಆಪ್ ಸೋಂಕಿತರ ಮಾಹಿತಿಯ ಜತೆಗೆ ಅವರ ಲೊಕೇಶನ್ ಅನ್ನು ಟ್ರ್ಯಾಕ್ ಮಾಡುತ್ತಿತ್ತು. ಅವರು ಮನೆಯಿಂದ ಹೊರ ಬರುವಂತಿಲ್ಲ. ಅಲ್ಲಿನ ಜನರು ಈ ಆಪನ್ನು ಡೌನ್ ಲೋಡ್ ಮಾಡಿಕೊಂಡಿದ್ದು, ಸ್ಥಳ ಆಧಾರಿತ ತುರ್ತು ಸಂದೇಶಗಳನ್ನು ಪಡೆಯುತ್ತಿದ್ದರು. ಅಂದರೆ ಸೋಂಕು ತಗುಲಿದ ವ್ಯಕ್ತಿ ನಿಮ್ಮ ಸಮೀಪದಲ್ಲಿ ಇದ್ದರೆ ನಿಮ್ಮನ್ನು ಈ ಆಪ್ ಎಚ್ಚರಿಸುತ್ತಿತ್ತು. ಜನರು ಸಂದೇಶಗಳನ್ನು ಸ್ವಯಂಚಾಲಿತವಾಗಿ ಪಡೆಯುತ್ತಾರೆ. ನನಗೆ ಸಂದೇಶ ಬೇಡ ಎಂದು ಆಫ್ ಮಾಡುವಂತಿಲ್ಲ. ಅದು ಕಡ್ಡಾಯವೂ ಹೌದು.
ಹೊಸ ಸೋಂಕು ಪತ್ತೆಯಾಗುತ್ತಿದ್ದಂತೆ ದೇಶದಾದ್ಯಂತದ ಫೋನ್‌ಗಳಲ್ಲಿ ಸಂದೇಶಗಳು ರವಾನೆಯಾಗುತ್ತದೆ. ತುರ್ತು ಸೂಚನೆಗಳು ಬಂದಾಗ ಜನರು ಇದನ್ನು ಪಾಲಿಸುತ್ತಾರೆ. ಪ್ರಾದೇಶಿಕ ಸರಕಾರಗಳು ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಕೋವಿಡ್ ಮಾಹಿತಿಯನ್ನು ಪ್ರಜೆಗಳಿಗೆ ನೀಡುತ್ತಿದ್ದಾರೆ. ಆ ಪ್ರದೇಶಗಳಲ್ಲಿನ ಜನರನ್ನು ಕೇಂದ್ರವಾಗಿರಿಸಿ ಪಾಸಿಟಿವ್ ಪ್ರಕರಣ ಪತ್ತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಹೊಸ ವೈರಸ್ ಪ್ರಕರಣಗಳಲ್ಲಿ ದಕ್ಷಿಣ ಕೊರಿಯಾ ಸ್ವಲ್ಪ ಕುಸಿತ ಕಂಡಿದೆ.
ದಕ್ಷಿಣ ಕೊರಿಯಾದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ. 200 ಜನರು ಸಾವನ್ನಪ್ಪಿದ್ದು. ಸುಮಾರು ಅರ್ಧದಷ್ಟು ಸೋಂಕಿತ ಜನರು ಗುಣಮುಖರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವೆಬ್ ಸೈಟ್ ನಲ್ಲಿ ಮಾಹಿತಿ
ಸಿಯೋಲ್ ನ ಸುಮಾರು 158,000 ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾದ ಜೊಂಗ್ನೊ-ಗು ಸರಕಾರವು ತಮ್ಮ ವೆಬ್ ಸೈಟ್ ನಲ್ಲಿ ರೋಗಿಗಳ ಹೆಸರನ್ನು ಬಿಟ್ಟು ಪಟ್ಟಿಯನ್ನು ಸಂಗ್ರಹಿಸುತ್ತದೆ. ಅವರು ವಾಸಿಸುವ ಪ್ರದೇಶ ಮತ್ತು ಪ್ರಸ್ತುತ ಅವರು ಯಾವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾವ ಸಮಯದಲ್ಲಿ ದಾಖಲಾಗಿದ್ದಾರೆ ಮೊದಲಾದ ಮಾಹಿತಿಯನ್ನು ನಿಯಮಿತವಾಗಿ ಅಪ್ ಡೇಟ್ ಮಾಡುತ್ತಿದೆ.
ಮೆಸೇಜ್ ಹೀಗೆ ಬರುತ್ತದೆ
ಜನರಿಗೆ ಬರುವ ಸಂದೇಶದ ಉದಾಹರಣೆ: ಸಿಯೋಲ್‌ನ ಸೋಮರ್ಸೆಟ್ ಪ್ಯಾಲೇಸ್ ಹೋಟೆಲ್ನಲ್ಲಿ ತಂಗಿರುವ 15 ವಿದೇಶಿಯರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಅವರ ಚಲನ ವಲನಗಳು, ನಡೆದು ಬಂದ ಹಾದಿ ಮೊದಲಾದ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ವೆಬ್ ಸೈಟ್ ಭೇಟಿ ನೀಡಿ.”
ಕೆಲವರಿಗೆ ಕಿರಿಕಿರಿ
Covid 19 ನಿಂದ ಉಂಟಾಗುವ ಅಪಾಯದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯೂ ದೈನಂದಿನ ಮಾಹಿತಿ ಮತ್ತು ಸೋಂಕಿತರ ವಿವರಗಳನ್ನು ಮೆಸೇಜ್ ಮೂಲಕ ಪಡೆಯುತ್ತಾರೆ. ಇದು ಜನರ ಮೇಲೂ ಪರಿಣಾಮ ಬೀರುತ್ತಿದೆ. ಕೆಲವರಿಗೆ ಪ್ರಯೋಜನವಾದರೆ ಕಿರಿಕಿರಿಯಾಗುತ್ತಿದೆ ಎಂಬವರೂ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.