ಕುಂಬಾರಿಕೆ ಮೇಲೂ ಕೋವಿಡ್ 19 ಕರಿನೆರಳು
ಮಾರಾಟ, ಸಾಗಾಟ ಸಾಧ್ಯವಿಲ್ಲದೆ ಸಂಕಷ್ಟಕ್ಕೀಡಾದ ಕುಟುಂಬಗಳು
Team Udayavani, Apr 11, 2020, 4:47 PM IST
ಕುಂದಾಪುರ : ದೊಡ್ಡ ದೊಡ್ಡ ಐಟಿ-ಬಿಟಿ ಕಂಪೆನಿಗಳು ಮಾತ್ರವಲ್ಲದೆ ಕುಂಬಾರಿಕೆ, ಬುಟ್ಟಿ ನೇಯ್ಗೆಯಂತಹ ಗುಡಿ ಕೈಗಾರಿಕೆಗಳ ಮೇಲೂ ಕೋವಿಡ್ 19 ಕರಿನೆರಳು ಬಿದ್ದಿದ್ದು, ಕುಲಕಸುಬಾಗಿಸಿರುವ ಕರಾವಳಿ ಭಾಗದ ನೂರಾರು ಕುಟುಂಬಗಳನ್ನು ಕಂಗಲಾಗಿಸಿದೆ.
ನಿತ್ಯ ಮಣ್ಣಿನ ಪಾತ್ರೆ, ಸಲಕರಣೆಗಳನ್ನು ಮನೆಯಲ್ಲೇ ತಯಾರಿಸಿ, ಮನೆ ಮನೆಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕುಂಬಾರರ ಜೀವನ ದುಸ್ತರವೆನಿಸಿದೆ. ಆಧುನಿಕ ಕಾಲದಲ್ಲಿ ಮಣ್ಣಿನ ಪಾತ್ರೆಗಳು ಬೇಡಿಕೆ ಕಳೆದುಕೊಂಡಿದ್ದರೂ ಶ್ರಮಕ್ಕೆ ತಕ್ಕಷ್ಟು ಆದಾಯ ಪಡೆಯುತ್ತಿದ್ದರು.
ಪರಿಕರಗಳು ಮಾರಾಟವಾಗದೆ ಬಾಕಿ
ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶವೇ ಲಾಕ್‌ಡೌನ್ ಆಗಿರುವುದರಿಂದ ಕಳೆದ 2-3 ವಾರಗಳಿಂದ ಯಾವುದೇ ವ್ಯಾಪಾರ – ವಹಿವಾಟು ನಡೆಯುತ್ತಿಲ್ಲ. ಇದರಿಂದ ಬೇಡಿಕೆಯಿದೆ ಎಂದು ತಯಾರಿಸಿದ ಸಾಕಷ್ಟು ಮಣ್ಣಿನ ಪರಿಕರಗಳು ಮನೆಯಲ್ಲಿಯೇ ರಾಶಿ ಬಿದ್ದಿದೆ. ಖರೀದಿಸುವವರಿಲ್ಲ. ಪ್ರಮುಖ ಮಾರುಕಟ್ಟೆಯಾಗಿದ್ದ ವಾರದ ಸಂತೆಗಳು ಎಲ್ಲಿಯೂ ನಡೆಯುತ್ತಿಲ್ಲ. ಇದು ಕುಂಬಾರಿಕೆ ಮೇಲೆ ಭಾರೀ ಪರಿಣಾಮ ಬೀರಿದೆ.
ಅವಿಭಜಿತ ಕುಂದಾಪುರ ತಾಲೂಕಿನ ಆಲೂರಲ್ಲಿ 6 ಕುಟುಂಬಗಳು, ಕಾಲೊ¤àಡಿನಲ್ಲಿ 4-5 ಕುಟುಂಬಗಳು ಸೇರಿದಂತೆ ವಕ್ವಾಡಿ, ವಾಲೂ¤ರು, ಉಡುಪಿಯ ಬ್ರಹ್ಮಾವರ, ಪೆರ್ಡೂರು, ಆಜ್ರಿ, ಹೆಬ್ರಿ ಮತ್ತಿತರ ಕಡೆಗಳಲ್ಲಿ ಒಟ್ಟಾರೆ ಉಡುಪಿ ಜಿಲ್ಲೆಯಲ್ಲಿ 35 ಕುಟುಂಬಗಳು ಹಾಗೂ ದ.ಕ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಮತ್ತಿತರ ಕಡೆಗಳಲ್ಲಿ ಸೇರಿದಂತೆ ಸುಮಾರು 150 ಕುಟುಂಬಗಳ ಸುಮಾರು 300 ಕ್ಕೂ ಹೆಚ್ಚು ಮಂದಿ ಕುಂಬಾರಿಕೆಯನ್ನು ಕುಲಕಸುಬಾಗಿ ಮಾಡುತ್ತಿದ್ದಾರೆ.
ನಾವು ಖರೀದಿಸುತ್ತೇವೆ
ಈಗಾಗಲೇ ನಮ್ಮ ಸಂಘದಿಂದ 60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ 500 ರೂ. ಅಂತೆ ಪಿಂಚಣಿ ನೀಡಲಾಗುತ್ತಿದೆ. ಮಣ್ಣಿನ ಪರಿಕಗಳನ್ನು ನಮ್ಮ ಸಂಘದ ಮೂಲಕವೇ ಪೆರ್ಡೂರಿನಲ್ಲಿರುವ ಶೋರೂಂನಲ್ಲಿ ಖರೀದಿ ಮಾಡಲು ವ್ಯವಸ್ಥೆ ಮಾಡಲಾಗುವುದು.
– ಸಂತೋಷ್ ಕುಲಾಲ್, ಅಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘ ಉಡುಪಿ
ಮಾರುಕಟ್ಟೆಯಿಲ್ಲ
ನಾವು ಒಟ್ಟಿಗೆ 5-6 ಮಂದಿ ಸೇರಿ ಕುಂಬಾರಿಕೆ ವೃತ್ತಿಯನ್ನು ಮಾಡುತ್ತಿದ್ದೇವೆ. ಕಳೆದ ಒಂದು ತಿಂಗಳಿನಿಂದ ಸರಿಯಾದ ವಹಿವಾಟಿಲ್ಲ. ಬೇಸಗೆಯಲ್ಲಿ ಮಾರುಕಟ್ಟೆ ನಿರೀಕ್ಷೆಯಿಂದ ಪರಿಕರ ತಯಾರಿಸಿಟ್ಟಿದ್ದೆವು. ಆದರೀಗ ಮಾರಾಟ, ಸಾಗಾಟ ಸಾಧ್ಯವಿಲ್ಲ. ಇದರಿಂದ ಅಂದಾಜು 1.20 ಲಕ್ಷ ರೂ. ಗೂ ಅಧಿಕ ನಷ್ಟ ಸಂಭವಿಸಿದೆ. ಮಳೆಗಾಲ ಶುರುವಾದರೆ ಮಾರುಕಟ್ಟೆ ಇಲ್ಲ. ಇದರಿಂದ ಡಿಸೆಂಬರ್‌ವರೆಗೆ ಕಷ್ಟವಾಗಲಿದೆ.
– ರಘುರಾಮ ಕುಲಾಲ್, ಆಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.