ಸಂಕಷ್ಟದಲ್ಲಿ ಬೇಬಿ ಸ್ವೀಟ್ ಕಾರ್ನ್ ಬೆಳೆಗಾರರು
ಉತ್ತಮ ಫಸಲು ಬಂದರೂ ಸೂಕ್ತ ಮಾರುಕಟ್ಟೆ ಇಲ್ಲ ಮಹಾರಾಷ್ಟ್ರ ಗಡಿ ಬಂದ್‌ನಿಂದ ಸಾಗಾಟ ಸಮಸ್ಯೆ ಹೆಚ್ಚಳ
Team Udayavani, Apr 11, 2020, 5:03 PM IST
ಚಿಕ್ಕೋಡಿ: ಬೆಳಕೂಡ ಗ್ರಾಮದ ರೈತರು ಬೆಳೆದ ಬೇಬಿ ಸ್ವೀಟ್ ಕಾರ್ನರ್ ಮೆಕ್ಕೆಜೋಳ ಕಾಳು ಗಟ್ಟುವ ಮೂಲಕ ಹಾಳಾಗುತ್ತಿರುವುದನ್ನು ಪ್ರದರ್ಶಿಸಿದ ಬೆಳೆಗಾರರು.
ಚಿಕ್ಕೋಡಿ: ಕಿಲ್ಲರ ಕೊರೊನಾ ಅಟ್ಟಹಾಸದಿಂದ ಬೇಬಿ ಸ್ವೀಟ್ ಕಾರ್ನ್ ಬೆಳೆದ ರೈತ ಕಣ್ಣೀರು ಸುರಿಸುವಂತಾಗಿದೆ. ಸೂಕ್ತ ಮಾರುಕಟ್ಟೆ ಇಲ್ಲದೇ ಜಮೀನಿನಲ್ಲಿ ಬೆಳೆ ಹಾಳಾಗುತ್ತಿದೆ. ಇದರಿಂದ ರೈತನ ಬದುಕು ಕಷ್ಟಕರವಾಗಿದೆ. ತಾಲೂಕಿನ ಬೆಳಕೂಡ ಗ್ರಾಮ ವ್ಯಾಪ್ತಿಯ ಶಿವಶಂಕರ ಹಿರೇಮಠ ಹಾಗೂ ಅಪ್ಪಯ್ಯ ಹಿರೇಮಠ ಅವರ ನಾಲ್ಕು ಎಕರೆ ಜಮೀನಿನಲ್ಲಿ ಬೇಬಿ ಗೋವಿನ ಜೋಳದ ಬೆಳೆದಿದ್ದು, ಫಸಲು ಚನ್ನಾಗಿ ಬಂದಿದೆ. ಆದರೆ ಕೊರೊನಾ ಹಾವಳಿಯಿಂದ ಇಡೀ ದೇಶ ಲಾಕ್‌ಡೌನ್ ಆಗಿದೆ. ಅದರಲ್ಲಿಯೂ ನೆರೆಯ ಮಹಾರಾಷ್ಟ್ರ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಇದರಿಂದ ಬೇಬಿ ಸ್ವೀಟ್ ಕಾರ್ನ್ ಬೆಳೆದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ನಾಲ್ಕು ಎಕರೆ ಬೆಳೆಗೆ ಪ್ರತಿ ಎಕರೆಗೆ ತಲಾ 20 ಸಾವಿರ ರೂ. ಖರ್ಚು ಮಾಡಿ ಗೋವಿನ ಜೋಳ ಬಿತ್ತನೆ ಮಾಡಲಾಗಿದೆ. ಈ ಮೊದಲು ಮಹಾರಾಷ್ಟ್ರದ ಮಿಜರ್ ಹತ್ತಿರ ಅರಗ ಕಾರ್ಖಾನೆಗೆ ಗೋವಿನ ಜೋಳ ಸಾಗಾಟವಾಗುತ್ತಿತ್ತು. ಅಲ್ಲಿಂದ ದೊಡ್ಡ-ದೊಡ್ಡ ಹೊಟೇಲ್‌ಗಳಿಗೆ ಸರಬರಾಜು ಆಗುತ್ತಿತ್ತು. ಕೊರೊನಾ ಹಿನ್ನೆಲ್ಲೆಯಲ್ಲಿ ರಾಜ್ಯದ ಗಡಿ ಭಾಗ ಸಂಪೂರ್ಣ ಬಂದ್ ಆಗಿದೆ. ಜಮೀನಿನಲ್ಲಿ ಮೆಕ್ಕೆಜೋಳ ಬಲಿತು ಕಾಳಾಗುತ್ತಿದೆ. ಇದರಿಂದ ರೈತನಿಗೆ ಬಹಳ ನಷ್ಟವಾಗುತ್ತಿದೆ.
ಚಿಕ್ಕೋಡಿ ಪೂರ್ವ ಭಾಗದ ಬೆಳಕೂಡ ಗ್ರಾಮ ವ್ಯಾಪ್ತಿಯ ಪ್ರದೇಶ ಸಂಪೂರ್ಣ ಬರಪೀಡಿತ ಪ್ರದೇಶವಾಗಿದೆ. ಇಂತಹ ಪ್ರದೇಶದಲ್ಲಿ ನೀರು ಸಿಗುವುದು ಕಷ್ಟ. ಆದರೂ ಸಾಲಸೋಲ ಮಾಡಿ ಕೊಳವೆ ಬಾವಿ ಕೊರೆಸಿ ಬೆಳೆಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಇದೀಗ ಬೇಬಿ ಸ್ವೀಟ್ ಕಾರ್ನ್ ಬೆಳೆ ಫಸಲು ಬಂದಿದೆ. ಆದರೆ ಮಾರಾಟವಾಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಉಪಜೀವನ ಸಾಗಿಸಲು ಬೇಬಿ ಸ್ವೀಟ್ ಕಾರ್ನ್ ಬಿತ್ತನೆ ಮಾಡಲಾಗಿತ್ತು. ಈಗ ಬೆಳೆ ಕೈಗೆ ಬಂದಿದೆ. ಆದರೆ ಮಾರುಕಟ್ಟೆಗೆ ಹೋಗದೇ ಹೊಲದಲ್ಲಿ ಹಾಳಾಗುತ್ತಿದೆ. ಮಾರುಕಟ್ಟೆಗೆ ಸಾಗಾಟವಾಗಿದ್ದರೇ ಟನ್‌ಗೆ ಕನಿಷ್ಠ 7 ಸಾವಿರ ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಈಗ ಲಾಕ್ ಡೌನ್ ಇರುವುದರಿಂದ ಕನಿಷ್ಠ 3 ಲಕ್ಷ ರೂ. ಹಾನಿ ಸಂಭವಿಸುತ್ತಿದೆ ಎಂದು ಅಪ್ಪಯ್ಯ ಹಿರೇಮಠ ಕಳವಳ ವ್ಯಕ್ತಪಡಿಸಿದರು.
ಸಾಲ ಮಾಡಿ ಬೆಬಿ ಸ್ವೀಟ್ ಕಾರ್ನರ್ ಬಿತ್ತನೆ ಮಾಡಲಾಗಿದೆ. ಈಗ ಬಂದ್ ಇರುವುದರಿಂದ ಬೆಳೆ ಮಾರುಕಟ್ಟೆಗೆ ಕಳಿಸಲು ಸಾಧ್ಯವಾಗುತ್ತಿಲ್ಲ, ಕೂಡಲೇ ಕೃಷಿ
ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳು ಬೆಳೆಹಾನಿಗೆ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ. ಇಲ್ಲವಾದರೆ ಮಾರುಕಟ್ಟೆಗೆ ಸಾಗಿಸಲು ಅನುಕೂಲ ಕಲ್ಪಿಸಬೇಕು.
ಶಿವಶಂಕರ ಹಿರೇಮಠ, ಬೆಳಕೂಡ ರೈತ
ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.