ದೂರದಿಂದಲೇ ರೋಗಿಯ ಎದೆ ಬಡಿತ ಪ್ರಮಾಣ ದಾಖಲಿಸಲು ಬಂದಿದೆ ಡಿಜಿಟಲ್ ಸ್ಟೆತಾಸ್ಕೋಪ್
Team Udayavani, Apr 12, 2020, 7:22 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರು ರೋಗಿಯಿಂದ ಕೊಂಚ ದೂರವೇ ನಿಂತು ಅವರ ಎದೆ ಬಡಿತ ಕೇಳಿಸಿಕೊಳ್ಳಬಹುದಾದಂತಹ ಡಿಜಿಟಲ್ ಸ್ಟೆತಾಸ್ಕೋಪ್ ಒಂದನ್ನು ಐಐಟಿ-ಬಾಂಬೆಯ (ಐಐಟಿ-ಬಿ) ಸಂಶೋಧಕರು ಕಂಡುಹಿಡಿದಿದ್ದಾರೆ.
ಬ್ಲೂ ಟೂತ್ ಸಾಧನದ ಮೂಲಕ ರೋಗಿಯ ಎದೆಬಡಿತದ ಸದ್ದು ವೈದ್ಯರಿಗೆ ಕೇಳಿಸುತ್ತದೆ. ಹೀಗಾಗಿ ವೈದ್ಯರು ರೀಡಿಂಗ್ ತೆಗೆದುಕೊಳ್ಳಲು ರೋಗಿಯ ಹತ್ತಿರವೇ ಹೋಗಬೇಕೆಂದಿಲ್ಲ. ಈ ಸಾಧನ ಬಳಸುವುದರಿಂದ ಸೋಂಕಿತ ವ್ಯಕ್ತಿಯಿಂದ ವೈದ್ಯರಿಗೆ ವೈರಸ್ ಅಂಟಿಕೊಳ್ಳುವ ಅಪಾಯ ಇರುವುದಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಐಐಟಿ-ಬಿ ತಂಡವು ಪೇಟೆಂಟ್ ಪಡೆದಿರುವ ಈ ಸಾಧನ, ರೋಗಿಯ ದೇಹದಿಂದ ಅಗತ್ಯವಿರುವ ಸದ್ದುಗಳನ್ನು ರೆಕಾರ್ಡ್ ಮಾಡಿ, ರೋಗಿಯ ಆರೋಗ್ಯ ದಾಖಲೆಗಳಿಗೆ ಸಂಬಂಧಿಸಿದಂತೆ ಅದನ್ನು ಸಂಗ್ರಹಿಸಿಡುವ ವ್ಯವಸ್ಥೆಯನ್ನೂ ಹೊಂದಿದೆ. ಇಂತಹ 1000 ಸ್ಟೆತಾಸ್ಕೋಪ್‌ಗಳನ್ನು ಈಗಾಗಲೇ ದೇಶದ ವಿವಿಧ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಬಳಸಲಾಗುತ್ತಿದೆ ಎಂದು ತಂಡ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.