ದಯವಿಟ್ಟು ಮಾಸ್ಕ್ ಧರಿಸುವುದನ್ನು ಮಾತ್ರ ಮರೆಯಬೇಡಿ: ವೈರಾಣು ತಜ್ಞರ ಸಲಹೆ
ಕೋವಿಡ್ 19 ವೈರಸ್ ಸೋಂಕಿಗೆ 40 ಸೂಕ್ಷ್ಮಾಣು ಎಳೆಗಳು ಸಾಕು
Team Udayavani, Apr 12, 2020, 6:27 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹಾಂಕಾಂಗ್: ದಯವಿಟ್ಟು, ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ಮಾಸ್ಕ್ ಇಲ್ಲದಿದ್ದರೆ ಪರವಾಗಿಲ್ಲ ಎನ್ನುವ ನಿರ್ಲಕ್ಷ್ಯ ಬೇಡ. ಕೋವಿಡ್ ವೈರಸ್ ಪೀಡಿತ ರೋಗಿಯ ಒಂದು ಮಿಲಿಲೀಟರ್ ಜೊಲ್ಲು ರಸದಲ್ಲಿ ಕೋಟಿಗಟ್ಟಲೆ ಕೋವಿಡ್ ವೈರಸ್‌ನ ಕಣಗಳಿರಬಹುದು. ಕೇವಲ 40-200 ಸೂಕ್ಷ್ಮಾಣು ಎಳೆಗಳು ಆರೋಗ್ಯವಂತ ವ್ಯಕ್ತಿಗೆ ಕೋವಿಡ್ ಸೋಂಕು ತರಬಲ್ಲುದು. ಇದು ಆರೋಗ್ಯ ತಜ್ಞರು ನೀಡಿರುವ ಎಚ್ಚರಿಕೆ.
ವೈರಸ್‌ನ ಒಂದು ಕಣ ಸೋಂಕು ತರಲು ಸಾಧ್ಯವಿಲ್ಲ. ವೈರಸ್‌ನ 40-200 ಕಣಗಳು ಮೂಗು, ಬಾಯಿ ಅಥವಾ ಶ್ವಾಸಕೋಶದ ಮೂಲಕ ಪ್ರವೇಶಿಸಿದಾಗ ವ್ಯಕ್ತಿಗೆ ಸೋಂಕು ತಗಲುತ್ತದೆ. ವ್ಯಕ್ತಿ ಸೀನಿದಾಗ ಹೊರಬೀಳುವ ಹನಿಗಳಲ್ಲಿ ಅಧಿಕ ಪ್ರಮಾಣದ ವೈರಸ್ ಕಣಗಳು ಇದ್ದು, ಅವು ವ್ಯಕ್ತಿಯ ದೇಹವನ್ನು ಪ್ರವೇಶಿಸಿದಾಗ ಸೋಂಕು ತಗಲುತ್ತದೆ.
ಹೀಗಾಗಿ, ಮಾಸ್ಕ್ ಧರಿಸಿದರೆ, ಸೋಂಕು ಪೀಡಿತರು ಸೀನಿದಾಗ ಅಥವಾ ಕೆಮ್ಮಿದಾಗ ದ್ರವದ ಹನಿಗಳ ಮೂಲಕ ಹೊರಬಂದ ಅಪಾರ ಪ್ರಮಾಣದ ವೈರಸ್‌ಗಳು ಮೂಗು, ಬಾಯಿ, ಶ್ವಾಸಕೋಶದ ಮೂಲಕ ನಿಮ್ಮ ದೇಹದೊಳಕ್ಕೆ ಹೋಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್, ಸೂಕ್ಷ್ಮಜೀವಿಶ್ಯಾಸ್ತ್ರಜ್ಞ ಯ್ನಾನ್ ಕೋಕ್ ಯಂಗ್ ತಿಳಿಸಿದ್ದಾರೆ.
ಚೈನೀಸ್ ಸೆಂಟರ್ ಫಾರ್ ಡಿಸ್ಸಿಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್‌ನ ಪ್ರಧಾನ ಕಾರ್ಯದರ್ಶಿ ಜಾರ್ಜ್‌ಗೊ ಪ್ರತಿಕ್ರಿಯಿಸಿ, ಮಾಸ್ಕ್ ಧರಿಸದೇ ಇರುವುದು ಯೂರೋಪ್, ಅಮೆರಿಕದ ಜನ ಮಾಡಿದ ದೊಡ್ಡ ತಪ್ಪು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.