ಹೊರ ಜಿಲ್ಲೆಗಳಿಂದ ಜನರು ಬರುವುದನ್ನು ತಡೆಗಟ್ಟಿ : ಬಾಲಕೃಷ
ತಾಲೂಕಿನ ಗಡಿಯಲ್ಲಿ ನಿಗಾ ವಹಿಸಿ
Team Udayavani, Apr 12, 2020, 2:18 PM IST
ಚನ್ನರಾಯಪಟ್ಟಣ: ಮಂಡ್ಯ ಜಿಲ್ಲೆಯಿಂದ ತಾಲೂಕಿಗೆ ಸಂಪರ್ಕ ಕಲ್ಪಿಸುವ ಗಡಿ ಭಾಗಗಳನ್ನು ಶಾಸಕ ಸಿ.ಎನ್. ಬಾಲಕೃಷ್ಣ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿ
ಮಂಡ್ಯ ಜಿಲ್ಲೆಯ ಯಾವೊಬ್ಬ ವ್ಯಕ್ತಿಯೂ ತಾಲೂಕು ಪ್ರವೇಶ ಮಾಡಬಾರದು ಎಂದು ಗಡಿಕಾ ಯುವ ಸಿಬ್ಬಂದಿಗೆ ತಾಕೀತು ಮಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಐದು ಮಂದಿಗೆ ಕೊರೊನಾ ಪತ್ತೆಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್. ಪೇಟೆ ಹಾಗೂ ಮೇಲುಕೋಟೆ ಭಾಗಗಳಿಂದ ಯಾವುದೇ ವಾಹನವಾಗಲಿ ಹಾಗೂ ಪಾದಚಾರಿ ಕಂಡು ಬಂದಲ್ಲಿ ಕೂಡಲೇ ತಾಲೂಕು ಆಡಳಿತದ ಗಮನಕ್ಕೆ ತರಬೇಕು ಎಂದು ಆದೇಶಿಸಿದರು. ರಾತ್ರಿ ಹಾಗೂ ನಸುಕಿನ ವೇಳೆ ಗಡಿ ಭಾಗದಲ್ಲಿ ಹೆಚ್ಚು ಜಾಗೃತರಾಗಬೇಕು, ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಬೇಕು. ತಾಲೂಕಿನ ಯಾರಾದರೂ ಮಂಡ್ಯ ಜಿಲ್ಲೆಯ ಹಳ್ಳಿಗಳಿಗೆ ತರಳಿದರೆ ಅವರಿಗೆ ಪುನಃ ತಾಲೂಕಿಗೆ ಪ್ರವೇಶ ನೀಡುವುದಿಲ್ಲ ಎಂದು ತಿಳಿಸಬೇಕು ಎಂದರು.
ಮೈಸೂರು-ಶಿವಮೊಗ್ಗ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚು ಜವಾಬ್ದಾರಿ ಇದೆ, ಮೈಸೂರು ಕಡೆಯಿಂದ ಬರುವ ಲಾರಿ ಹಾಗೂ ಇತರ ಕೃಷಿ ಉತ್ಪನ್ನ ಸರಬರಾಜು ವಾಹನ ಚಾಲಕ ಹಾಗೂ ನಿರ್ವಾಹಕರನ್ನು ತಪಾಸಣೆ ಮಾಡಿ ನಂತರ ತಾಲೂಕಿನ ಒಳಕ್ಕೆ ಬಿಟ್ಟುಕೊಳ್ಳಿ. ಬೈಕ್ ಕಾರುಗಳಿಗೆ ಅಪ್ಪಿ ತಪ್ಪಿಯೂ ಪ್ರವೇಶ ನೀಡಬಾರದು ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕಿದ್ದು ಇಂತಹ ವೇಳೆಯಲ್ಲಿ ಅನುಕುಂಪ ತೋರುವುದು
ನಿಲ್ಲಬೇಕು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಜೆ.ಬಿ.ಮಾರುತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಚಂದ್ರಶೇಖರ್, ಬಿಸಿಎಂ ಅಧಿಕಾರಿ ಮಂಜುನಾಥ, ವೃತ್ತ ನಿರೀಕ್ಷಕ ಕುಮಾರ, ಪುರಸಭೆ ಸಿಒ ಎಂ.ಕುಮಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಶಾಸಕರೊಂದಿಗೆ ಆನೆಗೋಳ, ಕಾಂತರಾಜಪುರ, ಮೇಲು
ಕೋಟೆ, ನಾಗಮಂಗಲ, ಸಾಸಲು ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ವೀಕ್ಷಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.