ಶೂನ್ಯ ಪಾಸಿಟಿವ್‌ಗೆ ಜನರ ಸಹಕಾರ

ಪೊಲೀಸ್‌, ಆರೋಗ್ಯ ಇಲಾಖೆಗಳ ಸಹಕಾರ ಅಗತ್ಯ; ಎಲ್ಲೆಡೆ ಮುಂಜಾಗ್ರತೆ

Team Udayavani, Apr 12, 2020, 5:00 PM IST

ಶೂನ್ಯ ಪಾಸಿಟಿವ್‌ಗೆ ಜನರ ಸಹಕಾರ

ಚಾಮರಾಜನಗರ: ಕೋವಿಡ್-19 ಪಾಸಿಟಿವ್‌ ಪ್ರಕರಣಗಳು ಶೂನ್ಯ ಇರುವ ಕೆಲವೇ ಜಿಲ್ಲೆಗಳಲ್ಲಿ ಚಾಮರಾಜನಗರ ಸಹ ಒಂದು. ಇದಿಷ್ಟೇ ಅಲ್ಲ, ಕ್ವಾರಂಟೈನ್‌ನಲ್ಲಿ ಇರುವವರ ಸಂಖ್ಯೆ 14 ಮಾತ್ರ ಇದೆ. ಇದಕ್ಕೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ ಕೈಗೊಂಡ ಅತೀವ ಮುಂಜಾಗ್ರತಾ ಕ್ರಮಗಳೇ ಇದಕ್ಕೆ ಕಾರಣ. ಜಿಲ್ಲೆಯ ನೆರೆಯ ಕೇರಳ ರಾಜ್ಯದಲ್ಲಿ ದೇಶದ ಮೊದಲ ಕೋವಿಡ್-19 ಪಾಸಿಟಿವ್‌ ಪ್ರಕರಣ ಕಂಡು ಬಂದ ಕೂಡಲೇ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡವು. ಕೇರಳದ ವೈನಾಡು ಜಿಲ್ಲೆಯಿಂದ ಬರುವ ವಾಹನಗಳಲ್ಲಿ ವಿದೇಶಿಯರ ತಪಾಸಣೆ, ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಯಿತು.

ಕ್ವಾರಂಟೈನ್‌ ಸೆಂಟರ್‌ ಸ್ಥಾಪನೆ: ಬಹಳ ಶೀಘ್ರವಾಗಿ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ಕ್ವಾರಂಟೈನ್‌ ಸೆಂಟರ್‌ ಸ್ಥಾಪಿಸಲಾಯಿತು. ಅಂಬೇಡ್ಕರ್‌ ಭವನವನ್ನೇ 150 ವಾರ್ಡ್‌ಗಳ  ಕ್ವಾರಂಟೈನ್‌ ಸೆಂಟರ್‌ ಆಗಿ ಪರಿವರ್ತಿಸಿ ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆಜಿಲ್ಲಾಡಳಿತದಿಂದಲೇ 3 ಹೊತ್ತು ಊಟ, ಮನ ರಂಜನೆಗೆ ಟೀವಿ, ಓದಲು ಪತ್ರಿಕೆ, ಒಳಾಂಗಣ ಆಟದಂತ ಸವಲತ್ತು ನೀಡಲಾಯಿತು.

ಐಸೋಲೇಷನ್‌ ವಾರ್ಡ್‌: ಆರೋಗ್ಯ ಇಲಾಖೆಯಿಂದ ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಐಸೋಲೇಷನ್‌ ವಾರ್ಡ್‌ ಸ್ಥಾಪಿಸಿ ಸನ್ನದ್ಧಗೊಳಿಸಲಾಯಿತು. ಸರ್ಕಾರಿ ಮೆಡಿಕಲ್‌ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು, ಜೆಎಸ್‌ಎಸ್‌ ಆಸ್ಪತ್ರೆ, ಹೋಲಿಕ್ರಾಸ್‌, ಬಸವರಾಜೇಂದ್ರ ಆಸ್ಪತ್ರೆಗಳನ್ನು ಐಸೋಲೇಷನ್‌ ಸೆಂಟರ್‌ಗಳಾಗಿ ಪರಿವರ್ತಿಸಲಾಯಿತು.

ಚೆಕ್‌ಪೋಸ್ಟ್‌ ಸ್ಥಾಪನೆ: ಪೊಲೀಸ್‌ ಇಲಾಖೆಯಿಂದ ಅಂತಾರಾಜ್ಯ ಸಂಪರ್ಕಿಸುವ 6 ಗಡಿಗಳಲ್ಲಿ ಚೆಕ್‌ಪೋಸ್‌ ಸ್ಥಾಪಿಸಿ ಅಂತಾರಾಜ್ಯ, ಅಂತರ ಜಿಲ್ಲೆ ವಾಹನಗಳನ್ನು ತಪಾಸಣೆ ಮಾಡಲಾಯಿತು. ಸ್ವತಃ ಡೀಸಿ, ಎಸ್ಪಿ ಜಿಲ್ಲಾ ಕೇಂದ್ರದಲ್ಲಿ ಮೈಕ್‌ ಹಿಡಿದು ಸಾಮಾಜಿಕ ಅಂತರ ಕಾಯುವಂತೆ ಮನವಿ ಮಾಡಿ ರಸ್ತೆಯಲ್ಲಿ ಜನ ಸಂಚಾರವಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಅದೃಷ್ಟದ ಬೆಂಬಲ!
ಜಿಲ್ಲೆಗೆ ಹೊಂದಿಕೊಂಡಿರುವ ಮೈಸೂರು ಜಿಲ್ಲೆ ನಂಜನಗೂಡು, ಮಂಡ್ಯ ಜಿಲ್ಲೆಯ ಮಳವಳ್ಳಿ ಇದೆ. ನಂಜನಗೂಡಿನ ಜುಬಿಲಿಯಂಟ್‌ ಕಾರ್ಖಾನೆಯಲ್ಲಿ ಜಿಲ್ಲೆಯ 56 ಮಂದಿ ಕೆಲಸ ಮಾಡುತ್ತಿದ್ದು, ಅವರ್ಯಾರಿಗೂ ಕೋವಿಡ್-19 ಪಾಸಿಟಿವ್‌ ಆಗಲಿಲ್ಲ. ನಿಜಾಮುದ್ದೀನ್‌ಗೆ ಜಿಲ್ಲೆಯ 90 ಜನರು ಹೋಗಿದ್ದರು. ಇವರಲ್ಲಿ ಓರ್ವ ಮಾತ್ರ ಮಾರ್ಚ್‌ನಲ್ಲಿ ಹೋಗಿದ್ದು, ಇನ್ನುಳಿದವರು ಜನವರಿ, ಫೆಬ್ರವರಿಯಲ್ಲಿ ಹೋಗಿ ಬಂದವರು! ಹೀಗಾಗಿ ಅದೃಷ್ಟದ ಬಲವೂ ಜಿಲ್ಲೆಗಿದೆ!

ಜನರ ಸಹಕಾರ ಮುಖ್ಯ
ಇದೊಂದು ದೊಡ್ಡ ವಿಪತ್ತು. ಇದನ್ನು ಎದುರಿಸಲು ಸಮುದಾಯವನ್ನು ಮಾನಸಿಕವಾಗಿ ಸಿದ್ಧಪಡಿಸಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಆಗ ಜನರು
ನಮಗೆ ಸ್ಪಂದಿಸುತ್ತಾರೆ. ನಮ್ಮ ಜನ ಮಾನಸಿಕವಾಗಿ ಸಿದ್ಧರಾದರು. ಆಡಳಿತದ ಎಲ್ಲ ಕ್ರಮಗಳನ್ನು ಅನುಮೋದಿಸುತ್ತಾ ಬಂದರು ಎಂದು ಜಿಲ್ಲಾಧಿಕಾರಿ ಡಾ. ಎಂ.
ರವಿ ಉದಯವಾಣಿಗೆ ತಿಳಿಸಿದರು. ಸೂಕ ಸಮಯದಲ್ಲಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಚೆಕ್‌ಪೋಸ್ಟ್‌ನಲ್ಲಿ ತೀವ್ರ ನಿಗಾ
ಇರಿಸಿದೆವು. ರಸ್ತೆಗಳಲ್ಲಿ ಸುಮ್ಮನೆ ಓಡಾಡುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಯಿತು. 535 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂತಾರಾಜ್ಯ ಗಡಿ ಬಂದ್‌ ಆಗಿದೆ. ಜೀವನಾವಶ್ಯಕ ಸಾಮಗ್ರಿಗಳ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ.
● ಆನಂದಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

● ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.