ರೈತರ ನೆರವಿಗೆ ನಿಂತ ಶಾಸಕ
ರೈತ ಬೆಳೆದ 10 ಟನ್ ಕುಂಬಳಕಾಯಿ ಖರೀದಿಸಿದ ಡಾ.ರಂಗನಾಥ್
Team Udayavani, Apr 12, 2020, 5:56 PM IST
ಸಾಂದರ್ಭಿಕ ಚಿತ್ರ
ಕುಣಿಗಲ್: ತಾಲೂಕಿನಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಜಮೀನುಗಳಿಗೆ ಶಾಸಕ ಡಾ.ರಂಗನಾಥ್ ಭೇಟಿ ನೀಡಿ ರೈತರ ಹಣ್ಣು
ತರಕಾರಿಗಳನ್ನು ಖರೀದಿ ಮಾಡುತ್ತಿದ್ದಾರೆ. ಹಣ್ಣು ತರಕಾರಿ ಬೆಳೆದ ರೈತರು ಲಾಕ್‌ಡೌನ್‌ನಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಜಮೀನಿನಲ್ಲೇ ಹಣ್ಣು
ತರಕಾರಿಗಳನ್ನು ಕೀಳದೆ ಕಂಗಾಲಾಗಿದ್ದರು. ಈ ಸಂಬಂಧ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಡಾ.ರಂಗನಾಥ್ ಸಂಕಷ್ಟದಲ್ಲಿರುವ ರೈತರ ಹಣ್ಣು
ತರಕಾರಿಗಳನ್ನು ಖುದ್ದು ಭೇಟಿ ನೀಡಿ ಖರೀದಿ ಮಾಡಿ ಕ್ಷೇತ್ರದ ಜನತೆಗೆ ಉಚಿತವಾಗಿ ವಿತರಣೆ ಮಾಡುತ್ತಿರುವ ಕೆಲಸ ಆರಂಭಿಸಿದ್ದರು.
ರೈತರು ನೇರವಾಗಿ ಶಾಸಕ ಡಾ.ರಂಗನಾಥ್‌ಗೆ ಕರೆ ಮಾಡಿ ನಾವು ಇಂಥ ಹಣ್ಣು ತರಕಾರಿ ಬೆಳೆದಿದ್ದೇವೆ ಎಂದು ಮಾಹಿತಿ ನೀಡಿ ಖರೀದಿ ಮಾಡುವಂತೆ
ಕೇಳಿಕೊಂಡಿದ್ದಾರೆ ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ಡಾ.ರಂಗನಾಥ್ ತಾಲೂಕಿನ ಕಿನ್ನಾಮಂಗಲ ಗೊಲ್ಲರಹಟ್ಟಿಯಲ್ಲಿ 3 ಎಕರೆಯಲ್ಲಿ ಕುಂಬಳಕಾಯಿ
ಬೆಳೆದಿದ್ದ ರೈತ ಚಂದ್ರಪ್ಪ ಅವರ ತೋಟಕ್ಕೆ ಭೇಟಿ ನೀಡಿ 10 ಟನ್ ಕುಂಬಳಕಾಯಿ ಖರೀದಿ ಮಾಡಿದರು. ಮುಂಗಡವಾಗಿ 10 ಸಾವಿರ ಹಣ ನೀಡಿ ಉಳಿಕೆ
ಹಣವನ್ನು ಕುಂಬಳ ಕಾಯಿಕಳುಹಿಸಿದ ತಕ್ಷಣವೇ ಕೊಡುವುದಾಗಿ ತಿಳಿಸಿದರು. ತಾಲೂಕಿನ ಶೆಟ್ಟಿಗೆರೆ ರೈತರ ಜಮೀನಿನಲ್ಲಿ ಟಮೊಟೋ ಖರೀದಿ ಮಾಡಲು ಶಾಸಕ ಡಾ.ರಂಗನಾಥ್ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರಿಗೆ ಎಳನೀರು ಕೊಡಲು ರೈತ ಕಾಲಿಗೆ ತೆಂಗಿನ ಮರ ಏರುವ ಸಲಕರಣೆ ಅಳವಡಿಸಿಕೊಂಡು ಮರ ಏರುತ್ತಿರುವುದುನ್ನು ಕಂಡು ನಾನು ಒಮ್ಮೆ ಪ್ರಯತ್ನಿಸಲೇ ಎಂದು ಶಾಸಕ ಡಾ.ರಂಗನಾಥ್ ಕಾಲಿಗೆ ಸಲಕರಣೆ ಅಳವಡಿಸಿಕೊಂಡು ತೆಂಗಿನ ಮರದ ಅರ್ಧದವರೆಗೂ ಏರಿ ಇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.