Chikkaballapura ಕೋವಿಡ್ ಗುಣಮುಖರಿಗೆ ಆಸ್ಪತ್ರೆ ಸಿಬ್ಬಂದಿಗಳಿಂದ ಚಪ್ಪಾಳೆಯ ಬೀಳ್ಕೊಡುಗೆ!
Team Udayavani, Apr 12, 2020, 7:13 PM IST
ಚಿಕ್ಕಬಳ್ಳಾಪುರ.. ಮಹಾ ಮಾರಿ ಕೊರೊನಾ ಸೋಂಕಿನಿಂದ ಇಲ್ಲಿನ ಕೋವಿಡ್-19 ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಗುಣಮುಖರಾದ ನಾಲ್ವರನ್ನು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕೊರೊನಾ ಐಸೋಲೇಷನ್ ವಾಡ್೯ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು, ದಾದಿಯರು, ಆರೋಗ್ಯ ಇಲಾಖೆ ಸಿಬ್ಬಂದಿ ಗುಣಮುಖರಾದವರಿಗೆ ಚಪ್ಪಾಳೆ ತಟ್ಟಿ ಭವ್ಯವಾಗಿ ಬಿಳ್ಕೊಟ್ಟರು. ಇದೇ ವೇಳೆ ಮನೆಗೆ ಹೊರಟವರಿಗೆ ಹೂಗುಚ್ಚದ ಜೊತೆಗೆ ಹಣ್ಣು ಹಂಪಲು ನೀಡಿ ಶುಭ ಹಾರೈಸಲಾಯಿತು.