ಕಾಂಗೋದಲ್ಲಿ ಎಬೊಲಾ ಪ್ರಕರಣ ಪತ್ತೆ
Team Udayavani, Apr 13, 2020, 12:19 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಾಷಿಂಗ್ಟನ್: ಜಗತ್ತೇ ಕೋವಿಡ್ 19 ವೈರಸ್ ದುಃಸ್ವಪ್ನದಲ್ಲಿ ಮುಳುಗಿರುವ ನಡುವೆಯೇ, ಈ ಹಿಂದೆಯೇ ವಿಶ್ವದೆಲ್ಲೆಡೆ ನಡುಕ ಹುಟ್ಟಿಸಿದ್ದ ಮಹಾಮಾರಿಯೊಂದು ಮತ್ತೂಮ್ಮೆ ಸದ್ದು ಮಾಡಿದೆ. ಒಂದು ಕಾಲದಲ್ಲಿ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾಗಿದ್ದ, ಭಯಾನಕ ಎಬೋಲಾ ವೈರಸ್‌ನ ಹೊಸ ಪ್ರಕರಣ ಪೂರ್ವ ಕಾಂಗೋದಲ್ಲಿ ಶನಿವಾರ ಪತ್ತೆಯಾಗಿದೆ. ಈ ದೇಶವು ಎಬೊಲಾ ಮುಕ್ತ ಎಂದು ಘೋಷಿಸಲು ಕೇವಲ ಮೂರು ದಿನ ಬಾಕಿಯಿದ್ದಾಗಲೇ ಈ ಘಟನೆ ನಡೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಎಬೊಲಾದ 2ನೇ ಕೇಂದ್ರಸ್ಥಾನ ಎಂದೇ ಕುಖ್ಯಾತಿ ಗಳಿಸಿರುವ ಬೇನಿ ಎಂಬ ಪ್ರದೇಶದಲ್ಲೇ ಈ ಪ್ರಕರಣ ಪತ್ತೆಯಾಗಿದೆ. ಕಳೆದ 42 ದಿನಗಳಿಂದ ಯಾವುದೇ ಪ್ರಕರಣವೂ ಇಲ್ಲಿ ಪತ್ತೆಯಾಗದ ಕಾರಣ, ಈಗ ಕಾಂಗೋ ಎಬೊಲಾ ಮುಕ್ತ ಎಂದು ಸೋಮವಾರ ಘೋಷಿಸಲು ನಿರ್ಧರಿಸಲಾಗಿತ್ತು.
ಆದರೆ, ಈಗಿನ ಸ್ಥಿತಿ ನೋಡಿದರೆ ಬಹಳ ಬೇಸರವಾಗುತ್ತದೆ. ಈ ಪ್ರಕರಣದಿಂದಾಗಿ ಇನ್ನೆಷ್ಟು ಮಂದಿಗೆ ಹರಡುತ್ತದೋ ಎಂಬ ಭಯ ಮೂಡಿದೆ ಎಂದು ಡಬ್ಲ್ಯೂಎಚ್‌ಒ ಮುಖ್ಯಸ್ಥ ಟೆಡ್ರೋ ಸ್ ಗೆಬ್ರೆಯೇಸಸ್ ಹೇಳಿದ್ದಾರೆ. ಇದೇ ವೇಳೆ, ಬೇನಿಯಲ್ಲಿ ಈಗಗಲೇ 2 ಕೋವಿಡ್ ವೈರಸ್ ಪ್ರಕರಣವೂ ಪತ್ತೆಯಾಗಿದೆ.
2014-16ರ ಅವಧಿಯಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ತಲೆಎತ್ತಿದ್ದಎಬೊಲಾವು ನಂತರದಲ್ಲಿ ಕಣ್ಮರೆಯಾಗಿತ್ತು. 2018ರ ಆಗಸ್ಟ್‌ನಲ್ಲಿ ಕಾಂಗೋದಲ್ಲಿ ಈ ವೈರಸ್ ಪ್ರತ್ಯಕ್ಷವಾಗಿ, 2260
ಮಂದಿಯನ್ನು ಬಲಿಪಡೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.