ಇದ್ದ ಕಡೆಯಲ್ಲೇ ಇರುವಂತೆ ಸೂಚನೆ; ಅಮೆರಿಕದಲ್ಲಿನ ಭಾರತೀಯ ವಿದ್ಯಾರ್ಥಿಗಳಿಗೆ ರಾಯಭಾರಿ ಸಲಹೆ
Team Udayavani, Apr 13, 2020, 6:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಾಷಿಂಗ್ಟನ್: ಸುದೀರ್ಘ ಅವಧಿಯ ಲಾಕ್ ಡೌನ್‌ನಿಂದಾಗಿ ಅಮೆರಿಕದ ಹಲವಾರು ವಿಶ್ವವಿದ್ಯಾಲಯಗಳು ಮುಚ್ಚಿರುವ ಕಾರಣ ಅಲ್ಲಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಅವರಿಗೆ ಸಂದೇಶವೊಂದನ್ನು ರವಾನಿಸಿರುವ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಣ್ ಜಿತ್ ಸಿಂಗ್ ಸಂಧು, ‘ನೀವು ಸದ್ಯಕ್ಕೆ ಎಲ್ಲಿದ್ದೀರೋ, ಅಲ್ಲೇ ಇರಿ. ಹಾಗಿದ್ದರಷ್ಟೇ ನೀವು ಸುರಕ್ಷಿತವಾಗಿರುತ್ತೀರಿ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮಗೆ ಏನು ಸಹಾಯ ಬೇಕೋ ಅದನ್ನು ನಾವು ಮಾಡುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಭಾರತೀಯ ರಾಯಭಾರಿ ಕಚೇರಿಯು ಭಾನುವಾರ ಆಯೋಜಿಸಿದ್ದ ಇನ್‌ಸ್ಟಾಗ್ರಾಂ ನೇರ ಪ್ರಸಾರದಲ್ಲಿ ಸುಮಾರು 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಈ ವೇಳೆ ಸಂದೇಶ ರವಾನಿಸಲಾಗಿದೆ. ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದರೆ ಸಾಕು, ನಾವು ನಿಮ್ಮನ್ನು ಭಾರತಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡುತ್ತೇವೆ ಎಂಬ ಭರವಸೆಯನ್ನೂ ನೀಡಲಾಗಿದೆ. ಅಮೆರಿಕದಲ್ಲಿ ಸುಮಾರು 2.50 ಲಕ್ಷ ಭಾರತೀಯ ವಿದ್ಯಾರ್ಥಿಗಳಿದ್ದಾರೆ.
20,637ಕ್ಕೇರಿದ ಸಾವಿನ ಸಂಖ್ಯೆ: ಕೋವಿಡ್ ವೈರಸ್ ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನೇ ಮೀರಿಸಿರುವ ಅಮೆರಿಕ ಈಗ ಜಗತ್ತಿನಲ್ಲೇ ಅತಿ ಹೆಚ್ಚು ಸಾವು ಕಂಡ ರಾಷ್ಟ್ರ ಎಂಬ ಅಪಖ್ಯಾತಿಗೆ ಗುರಿಯಾಗಿದೆ. ಇಲ್ಲಿ ಭಾನುವಾರ ಸಾವಿನ ಸಂಖ್ಯೆ 20,637ಕ್ಕೇರಿದೆ. ಇಟಲಿಯಲ್ಲಿ ಈವರೆಗೆ ಒಟ್ಟು 19,468 ಮಂದಿ ಈ ವೈರಸ್ ಗೆ ಬಲಿಯಾಗಿದ್ದಾರೆ. 5.3 ಲಕ್ಷಕ್ಕೂ ಅಧಿಕ ಅಮೆರಿಕನ್ನರು ಸೋಂಕಿನಿಂದ ಬಳಲುತ್ತಿದ್ದಾರೆ.
ಅಮೆರಿಕ ತಲುಪಿದ ಔಷಧ: ಮಲೇರಿಯಾ ನಿಗ್ರಹ ಔಷಧದ ಮೇಲೆ ಭಾರತ ಹೇರಿದ್ದ ರಫ್ತು ನಿರ್ಬಂಧ ವಾಪಸ್ ಪಡೆದ ಬೆನ್ನಲ್ಲೇ ಭಾನುವಾರ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವುಳ್ಳ ಸಂಗ್ರಹವು ಅಮೆರಿಕಕ್ಕೆ ತಲುಪಿದೆ. ಮಾನವೀಯ ನೆಲೆಯಲ್ಲಿ ಭಾರತವೇ ಈ ಔಷಧವನ್ನು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಿದೆ.
ಕಳೆದ ವಾರದ ಆರಂಭದಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು 35.82 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಹಾಗೂ 9 ಮೆಟ್ರಿಲ್ ಟನ್ ಫಾರ್ಮಾಸ್ಯುಟಿಕಲ್ ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಭಾರತಕ್ಕೆ ಮನವಿ ಮಾಡಿದ್ದರು. ಅದರಂತೆ, ಔಷಧ ಹೊತ್ತ ವಿಮಾನವು ನೆವಾರ್ಕ್ ವಿಮಾನ ನಿಲ್ದಾಣ ತಲುಪಿದೆ.
ಟ್ರಂಪ್ ವಿರುದ್ಧ ಕಿಡಿ
ಸಾವಿನ ಸಂಖ್ಯೆ 20 ಸಾವಿರ ದಾಟುತ್ತಲೇ ಅಧ್ಯಕ್ಷ ಟ್ರಂಪ್ ವಿರುದ್ಧ ಅಸಮಾಧಾನ ಆರಂಭವಾಗಿದೆ. ಈ ವೈರಸ್ ನ ಗಂಭೀರತೆ ಕುರಿತು ಆರಂಭದಲ್ಲೇ ಪದೇ ಪದೆ ಎಚ್ಚರಿಕೆ ನೀಡಿದರೂ ಟ್ರಂಪ್ ಕಿವಿ ಗೊಡಲೇ ಇಲ್ಲ. ಸೋಂಕು ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ಬದಲು ಅಂಥ ಸಂದೇಶಗಳನ್ನು ನಿಯಂತ್ರಿಸುವ, ಹಿರಿಯ ಅಧಿಕಾರಿಗಳು ನೀಡಿರುವ ಎಚ್ಚರಿಕೆಗೆ ಟಾಂಗ್ ನೀಡುವ, ಆರ್ಥಿಕತೆಯ ಲಾಭ ಪಡೆಯುವುದರಲ್ಲೇ ಟ್ರಂಪ್ ನಿರತರಾದರು. ಅವರ ನಿರ್ಲಕ್ಷ್ಯ ಧೋರಣೆಯೇ ಅಮೆರಿಕನ್ನರ ಈ ಪ್ರಮಾಣದ ಸಾವಿಗೆ ಕಾರಣ ಎಂಬ ದೀರ್ಘ ತನಿಖಾ ವರದಿಯನ್ನು ದೇಶದ ಪ್ರಮುಖ ಪತ್ರಿಕೆಗಳಲ್ಲೊಂದಾದ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ.
ಅದರಲ್ಲಿ ಸಂಭಾವ್ಯ ವೈರಸ್‌ನ ಅಪಾಯದ ಕುರಿತು ಆರೋಗ್ಯ ಅಧಿಕಾರಿಗಳು, ರಾಷ್ಟ್ರೀಯ ಭದ್ರತಾ ಅಧಿಕಾರಿಗಳು, ತಜ್ಞರು, ಗುಪ್ತಚರ ಸಂಸ್ಥೆಗಳು ನೀಡಿದ ಎಚ್ಚರಿಕೆಯ ಸಂದೇಶಗಳನ್ನೂ ಪ್ರಕಟಿಸಲಾಗಿದೆ. ‘ಆಂತರಿಕ ಭಿನ್ನಮತ, ಸಮರ್ಪಕ ಯೋಜನೆಯ ಕೊರತೆ, ತಾನು ಹೇಳಿದ್ದೇ ನಡೆಯಬೇಕೆಂಬ ಟ್ರಂಪ್ ಧೋರಣೆಯೇ ದೇಶ ಇಂದು ಶೋಚನೀಯ ಸ್ಥಿತಿಗೆ ತಲುಪಲು ಕಾರಣ’ ಎಂದೂ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
Burqa ban; ಸ್ವಿಟ್ಜರ್ಲೆಂಡ್ ನಲ್ಲಿ ಬುರ್ಖಾ ನಿಷೇಧ ಕಾನೂನು ಜಾರಿ: ಗರಿಷ್ಠ ದಂಡ
Court Verdict: ಹಿಂದೂ ಸಂತ ಚಿನ್ಮಯ್ ದಾಸ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.