ರೆಡ್ಮಿ ನೋಟ್9 ಪ್ರೊ
Team Udayavani, Apr 13, 2020, 10:39 AM IST
ಸಾಂದರ್ಭಿಕ ಚಿತ್ರ
ರೆಡ್ಮಿಯ ನೋಟ್ ಸೀರೀಸ್‌ನ ಹೊಸ ಮೊಬೈಲ್, ರೆಡ್ಮಿ ನೋಟ್ 9 ಪ್ರೊ. ಈ ಮೊಬೈಲ್ ಎರಡು ಆವೃತ್ತಿಗಳನ್ನು ಒಳಗೊಂಡಿದೆ. 4 ಜಿಬಿ ರ್ಯಾ ಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ (ಬೆಲೆ: 14 ಸಾವಿರ ರೂ.) ಹಾಗೂ 6 ಜಿಬಿ ರ್ಯಾ ಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ. (ಬೆಲೆ: 17 ಸಾವಿರ ರೂ.) ಇವುಗಳಲ್ಲಿ, 6 ಜಿಬಿರ್ಯಾ ಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಆವೃತ್ತಿಯ ವಿಶೇಷಗಳನ್ನು ನೋಡೋಣ.
ಅಂಚು ಇಲ್ಲದ ಪರದೆ
ಇದರ ಪರದೆ 6.67 ಇಂಚಿದೆ. ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಒಳಗೊಂಡಿದೆ. ಅದಕ್ಕೆ ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆ ನೀಡಲಾಗಿದೆ. ಸೆಲ್ಫಿ ಕ್ಯಾಮೆರಾವನ್ನು
ಪರದೆಯ ಮೇಲ್ಭಾಗದ ಮಧ್ಯದಲ್ಲಿ ನೀಡಲಾಗಿದೆ. ಮೊಬೈಲ್ ಪರಿಭಾಷೆಯಲ್ಲಿ ಇದನ್ನು, ಪಂಚ್ಚೋಲ್ ಡಿಸ್ಪ್ಲೇ ಎಂದು ಕರೆಯಲಾಗುತ್ತದೆ. ಪರದೆ ದೊಡ್ಡದಾಗಿದ್ದು, ನೋಡಲು ಫ್ಲಾಗ್ ಶಿಪ್ ಮೊಬೈಲ್ ಗಳ ಗಾತ್ರವನ್ನು ಹೋಲುತ್ತದೆ. ಮೊಬೈಲ್‌ನ ಪೂರ್ತಿ ಡಿಸ್ಪ್ಲೇ ಇದ್ದು ಎಡ-ಬಲ, ಮೇಲ್ಭಾಗ- ಕೆಳಭಾಗದಲ್ಲಿ ಸಣ್ಣ ತೆಳುಗಾತ್ರದ ಅಂಚಿದೆ. ಹಾಗಾಗಿ, ಡಿಸ್ಪ್ಲೇ ದೊಡ್ಡದಾಗಿ ಕಾಣುತ್ತದೆ. ಕೆಲ ತಿಂಗಳ ಹಿಂದೆ ಟ್ರೆಂಡ್ ಆಗಿದ್ದ ಪಾಪ್‌ಅಪ್ ಕ್ಯಾಮೆರಾ ಈಗಿಲ್ಲವಾಗಿದ್ದು, ಪಂಚ್ಚೋಲ್ ಕ್ಯಾಮೆರಾ ಪರದೆಯ ವೀಕ್ಷಣೆಗೆ ಯಾವ ಅಡ್ಡಿಯನ್ನೂ ಉಂಟು ಮಾಡುವುದಿಲ್ಲ.
ಪ್ರೊಸೆಸರ್: ಇದರಲ್ಲಿ ಸ್ನಾಪ್ ಡ್ರಾಗನ್ 720ಜಿ ಪೊ›ಸೆಸರ್ (ಎಂಟು ಕೋರ್‌ಗಳು) ಅಳವಡಿಸಲಾಗಿದೆ. ಇದು ಮಧ್ಯಮ ದರ್ಜೆಯ ಪೊ›ಸೆಸರ್ ಆಗಿದ್ದರೂ,
ವೇಗವಾಗಿ ಕೆಲಸ ನಿರ್ವಹಿಸುತ್ತದೆ. ಮೊಬೈಲ್‌ನ ಸಾಮಾನ್ಯ ಬಳಕೆ ಸೇರಿದಂತೆ, ಗೇಮ್‌ಗಳಿಗೆ ಸೂಕ್ತವಾಗಿದೆ. ಅಪ್ಲಿಕೇಶನ್‌ಗಳ ತೆರೆದುಕೊಳ್ಳುವಿಕೆ ಬೇಗನೆ
ಆಗುತ್ತದೆ. ಅಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಮ್ ಇದ್ದು, ಇದಕ್ಕೆ ಎಂಐಯುಐ ವಿನ್ಯಾಸ ಒದಗಿಸಲಾಗಿದೆ.
ಕ್ಯಾಮೆರಾ: 48 ಮೆಗಾಪಿಕ್ಸಲ್ ಮುಖ್ಯ ಕ್ಯಾಮೆರಾ, 8 ಮೆ.ಪಿ. ಅಲ್ಟ್ರಾವೈಡ್, 5 ಮೆ.ಪಿ. ಮ್ಯಾಕ್ರೋ, 2 ಮೆ.ಪಿ. ಡೆಫ್ರ್ ಸೆನ್ಸರ್ ಕ್ಯಾಮೆರಾ ಸೇರಿ, ನಾಲ್ಕು ಲೆನ್ಸ್‌ಗಳ ಕ್ಯಾಮೆರಾ ಹೊಂದಿದೆ. ಸೆಲ್ಫಿ 16 ಮೆ.ಪಿ. ಕ್ಯಾಮೆರಾ ಇದೆ. ಎರಡೂ ಬದಿಯ ಕ್ಯಾಮೆರಾ- ಫಲಿತಾಂಶ ತೃಪ್ತಿಕರವಾಗಿದೆ. 4 ಕೆ ವಿಡಿಯೋ ಕೂಡ ರೆಕಾರ್ಡಿಂಗ್ ಮಾಡಬಹುದಾಗಿದೆ.
ತ್ರಿಬಲ್ ಸ್ಲಾಟ್: ಇದರಲ್ಲಿ ಎರಡು 4ಜಿ ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದು. ಮೊಬೈಲ್‌ನ ಆನ್ ಅಂಡ್ ಆಫ್ ಬಟನ್ನೇ, ಪಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡ ಆಗಿರುವುದು ವಿಶೇಷ! ಮೊಬೈಲ್‌ನ ಆನ್ ಆಫ್ ಬಟನ್ ಮೇಲೆ ಸುಮ್ಮನೆ ಬೆರಳಿಟ್ಟರೆ, ಮೊಬೈಲ್ ಪರದೆ ಸಕ್ರಿಯವಾಗುವ ಜೊತೆಗೆ ಲಾಕ್ ಕೂಡ ಏಕಕಾಲಕ್ಕೆ ಓಪನ್ ಆಗುತ್ತದೆ. ಬೆರಳಚ್ಚು ಗುರುತಿ ಸುವಿಕೆ ವೇಗವಾಗಿದೆ. 5020 ಎಂಎಎಚ್ ಬ್ಯಾಟರಿ ಆವರೇಜ್ ಬಳಕೆಗೆ ಎರಡು ದಿನ ಬರುತ್ತದೆ. ಒಂದೂವರೆ ದಿನಕ್ಕಂತೂ ಅಡ್ಡಿಯಿಲ್ಲ. 18 ವ್ಯಾಟ್ ವೇಗದ ಟೈಪ್ ಸಿ ಚಾರ್ಜರ್ ನೀಡಲಾಗಿದೆ.
ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.