ಕೃಷಿ ಚಟುವಟಿಕೆಗಿಲ್ಲ ಲಾಕ್‌ಡೌನ್‌ ಬಿಸಿ

ನಗರ ಪ್ರದೇಶ ಬಹುತೇಕ ಸ್ತಬ್ಧಹಳ್ಳಿಗಳಲ್ಲಿ ಗರಿಗೆದರಿದ ಚಟುವಟಿಕೆಮುಂದಿನ ಬೆಳೆ ಬೆಳೆಯಲು ಸಜ್ಜು

Team Udayavani, Apr 13, 2020, 11:14 AM IST

13-April-03

ಚಿತ್ರದುರ್ಗ: ಜೆ.ಎನ್‌.ಕೋಟೆ ಗ್ರಾಮದ ಜಮೀನೊಂದರಲ್ಲಿ ರೈತರು ಈರುಳ್ಳಿ ಸಂಸ್ಕರಣೆಯಲ್ಲಿ ತೊಡಗಿರುವ ದೃಶ್ಯ.

ಚಿತ್ರದುರ್ಗ: ಬರಸಿಡಿಲಿನಂತೆ ಬಂದಪ್ಪಳಿಸಿರುವ ಕೋವಿಡ್‌ 19 ವೈರಸ್‌ ಗೆ ಇಡೀ ಜಗತ್ತು ಬೆಚ್ಚಿ ಬಿದ್ದಿದೆ. ಬದುಕಿನ ಹಳಿ ತಪ್ಪುತ್ತಿರುವುದರಿಂದ ಜನ ಕೂಡಾ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ, ಈ ನಡುವೆ ಕೆಲ ಅಚ್ಚರಿ ಎಂಬಂತಹ ಸಂಗತಿಗಳು ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿಸಿದಾಗ ಕಾಣ ಸಿಗುತ್ತಿವೆ.

ನಗರ ಪ್ರದೇಶಗಳು ಕೊರೊನಾ ಮಹಾಮಾರಿ ಕಾರಣಕ್ಕೆ ಬಿಕೋ ಎನ್ನುತ್ತಿದ್ದರೆ ಗ್ರಾಮೀಣ ಪ್ರದೇಶಗಳು ಸ್ವತ್ಛಂಧವಾಗಿವೆ. ನಗರ ಪ್ರದೇಶದ ಬದುಕು ಬಹುತೇಕ ಸ್ತಬ್ಧಗೊಂಡಿದ್ದರೆ, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರುತ್ತಿವೆ. ಈಗಾಗಲೇ ತರಕಾರಿ ಮತ್ತಿತರೆ ಬೆಳೆದಿರುವ ರೈತರು ನಿರೀಕ್ಷಿತ ಬೆಳೆ, ಮಾರುಕಟ್ಟೆ ಸಿಗುತ್ತಿಲ್ಲ ಎಂಬ ಸಂಕಟದಲ್ಲಿದ್ದಾರೆ. ಆದರೆ, ಇಷ್ಟಕ್ಕೆ ದೃತಿಗೆಡದ ರೈತರು ಮುಂದಿನ ಬೆಳೆ ಬೆಳೆಯಲು ಸಜ್ಜಾಗುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ರೈತರು ಸಾಮಾಜಿಕ ಅಂತರ ಎನ್ನುವುದಕ್ಕಿಂತ ಸಾಮಾನ್ಯ ಬದುಕಿನಂತೆಯೇ ತಮ್ಮಷ್ಟಕ್ಕೆ ತಾವು ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಭತ್ತ, ರಾಗಿ ಮತ್ತಿತರೆ ಒಕ್ಕಣೆ, ಈರುಳ್ಳಿ ಸಂಸ್ಕರಣೆ, ಗೋಧಿ  ಒಕ್ಕಣೆ, ರಾಗಿ ಕೂಯ್ಲು, ಹೂ ಬಿಡಿಸುವುದು, ವಿಳ್ಯೆದೆಲೆ ಬಳ್ಳಿ ಪೋಷಣೆ ಸೇರಿ ಹಲವು ಕೆಲಸಗಳಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಗ್ರಾಮಗಳಿಗೆ ಮರಳಿದವರು ಹೊರ ಬಾರದೆ ಅಂತರ ಕಾಯ್ದುಕೊಂಡಿದ್ದಾರೆ.

ಮುಂಗಾರಿಗೆ ಕಾಲಿಟ್ಟ ರೈತ: ನಗರ ಪ್ರದೇಶಗಳಲ್ಲಿ ಮನೆ ಸೇರಿರುವ ಜನ ಮುಂದೇನು, ಎಲ್ಲಿಗೆ ಬರುತ್ತೆ ಕೊರೊನಾ, ಯಾವಾಗ ಮುಗಿಯುತ್ತೆ ಲಾಕ್‌ ಡೌನ್‌, ನನ್ನ ಕೆಲಸ ಉಳಿಯುತ್ತಾ, ನನ್ನ ಸಂಬಳ ಬರುತ್ತಾ ಎಂಬ ನೂರಾರು ಚಿಂತೆಯಲ್ಲಿದ್ದಾರೆ. ಆದರೆ, ಹಳ್ಳಿಗಳಲ್ಲಿ ರೈತರು ಬೆಳಗ್ಗೆಯೇ ಮುದ್ದೆ ಮುರಿದು, ಮಧ್ಯಾಹ್ನಕ್ಕೂ ಒಂದಿಷ್ಟು ಕಟ್ಟಿಕೊಂಡು ಎತ್ತು, ಗಾಡಿಗಳ ಜತೆಗೆ ಜಮೀನು ಸೇರುತ್ತಿದ್ದಾರೆ. ಯುಗಾದಿ ನಂತರ ಹೊನ್ನಾರು ಪೂಜೆ ಮಾಡಿ, ಮುಂಗಾರಿಗೆ ಅಣಿಯಾಗುತ್ತಿದ್ದಾರೆ.

ಈಗಾಗಲೇ ಬಹುತೇಕ ಜಮೀನು ಹದಗೊಂಡಿದ್ದು ಇನ್ನೊಂದು ಮಳೆ ನಂತರ ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತವೆ. ಕುಸಿದ ಬೆಲೆ ನಡುವೆಯೂ ಮೆಕ್ಕೆಜೋಳ ಮಾರಾಟ: ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಯುವ ರೈತರು ಸಾಮಾನ್ಯವಾಗಿ ಯುಗಾದಿ ಮುಗಿಯುವವರೆಗೆ ಮಾರುಕಟ್ಟೆಗೆ ತರದೆ ಹಾಗೇ ಇಟ್ಟಿರುತ್ತಾರೆ. ಯುಗಾದಿ ನಂತರ ಬೆಲೆ ಹೆಚ್ಚಾಗುತ್ತದೆ ಎನ್ನುವುದು ರೈತರ ಲೆಕ್ಕಾಚಾರ. ಆದರೆ, ಈ ವರ್ಷ ರೈತರ ಲೆಕ್ಕಾಚಾರ ತಲೆಕೆಳಗಾಗಿದೆ. ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳಕ್ಕೆ ಬೆಲೆ ಸಿಗುತ್ತಿಲ್ಲ. ಆದರೂ, ಕೊರೊನಾ ಆತಂಕದಿಂದ ಎಲ್ಲವೂ ಬಂದ್‌ ಆಗುತ್ತಿರುವುದರಿಂದ ರೈತರು ಮುಂದೇನು ಎಂಬ ಆತಂಕದ ಕಾರಣಕ್ಕೆ ಸಿಕ್ಕಿದ ಬೆಲೆಗೆ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದಾರೆ.

ಈರುಳ್ಳಿ ಕುಯ್ಲಿಗೆ ಒತ್ತು: ಹಿಂಗಾರು ಹಂಗಾಮಿನಲ್ಲಿ ಬೆಳೆದ ಈರುಳ್ಳಿ ಬೆಳೆ ಕೂಯ್ಲಿಗೆ ಬಂದಿದೆ. ಈರುಳ್ಳಿಯನ್ನು ಕಿತ್ತು ಸಂಸ್ಕರಣೆ ಮತ್ತು ಮಾರಾಟಕ್ಕೆ ಇದು ಸಕಾಲ. ಆಗಾಗ ಮಳೆ ಬೀಳುತ್ತಿರುವುದರಿಂದ ಗೆಡ್ಡೆ ಹಾಳಾಗುವ ಆತಂಕವೂ ಕಾಡುತ್ತಿದೆ. ಹೀಗಾಗಿ, ರೈತರು ಈರುಳ್ಳಿ ಕೂಯ್ಲಿಗೆ ಒತ್ತು ನೀಡಿದ್ದಾರೆ. ಮುಂಗಾರು ಹಂಗಾಮಿನ ಕೊನೆಗೆ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದರಿಂದ ಬಿತ್ತನೆ ಹೆಚ್ಚಾಗಿತ್ತು. ಆದರೆ, ಈಗ ಬೆಲೆ ಕುಸಿತವಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿಲ್ಲ. ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ. ಎಲ್ಲವೂ ಸಹಜವಾಗಿಯೇ ನಡೆಯುತ್ತಿವೆ. ಆಗಾಗ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಗುಂಪು ಸೇರದಂತೆ ಎಚ್ಚರಿಸಿ ಹೋಗುತ್ತಿದ್ದಾರೆ.
ಬಸವರಾಜಪ್ಪ ಸಜ್ಜನ,
ಜೆ.ಎನ್‌. ಕೋಟೆ ರೈತ ತಿಪ್ಪೇಸ್ವಾಮಿ ನಾಕೀಕೆರೆ

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್‌ ಸಿಸಿ ಕೊಠಡಿಯೂ ಶಿಥಿಲ

ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್‌ ಸಿಸಿ ಕೊಠಡಿಯೂ ಶಿಥಿಲ

Renukaswamy

Renukaswamy Case: ಮಗ ಬೇಡಿಕೊಂಡ ಫೋಟೋ ನೋಡಲಾರೆ: ತಾಯಿ ರತ್ನಪ್ರಭಾ ಕಣ್ಣೀರು

Sirigere: ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ಲಾರಿಗೆ ಡಿಕ್ಕಿ.. ಓರ್ವ ಮೃತ್ಯು, ಇಬ್ಬರಿಗೆ ಗಾಯ

Sirigere: ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಲಾರಿಗೆ ಡಿಕ್ಕಿ.. ಓರ್ವ ಮೃತ್ಯು, ಇಬ್ಬರಿಗೆ ಗಾಯ

1-ddaaa

Darshan ಫೋಟೋ ವೈರಲ್;ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ: ಸಿಬಿಐ ತನಿಖೆಗೆ ಒತ್ತಾಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: ಬಾಲಕಿಯ ಅತ್ಯಾಚಾರ; ಆರೋಪಿಗೆ 20 ವರ್ಷ ಕಠಿನ ಶಿಕ್ಷೆ

Mangaluru: ಬಾಲಕಿಯ ಅತ್ಯಾಚಾರ; ಆರೋಪಿಗೆ 20 ವರ್ಷ ಕಠಿನ ಶಿಕ್ಷೆ

1-weewqe

Road roller ಅಡಿಯಲ್ಲಿ ಸಿಲುಕಿ ಇಬ್ಬರು ದಾರುಣ ಸಾ*ವು

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.