ಕೋವಿಡ್-19 ಎದುರಿಸಲು ರೈಲ್ವೇ ಐಸೋಲೇಶನ್ ಬೋಗಿ ಸಿದ್ಧ: ನಳಿನ್
Team Udayavani, Apr 13, 2020, 11:59 AM IST
"ಕೋವಿಡ್-19 ಐಸೊಲೇಶನ್ ಬೋಗಿ'ಯನ್ನು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರು ರವಿವಾರ ಪರಿಶೀಲಿಸಿದರು.
ಮಂಗಳೂರು: ಕೋವಿಡ್-19 ನಿಯಂತ್ರಿಸುವ ಸಲುವಾಗಿ ರೈಲ್ವೇ ಇಲಾಖೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಿದ್ಧಪಡಿಸಿರುವ “ಕೋವಿಡ್-19 ಐಸೋಲೇಶನ್ ಬೋಗಿ’ಯನ್ನು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ವೇದವ್ಯಾಸ ಕಾಮತ್ ರವಿವಾರ ಪರಿಶೀಲಿಸಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಸಂಸದ ನಳಿನ್, ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ಹಾಗೂ ಸುರೇಶ್ ಅಂಗಡಿ ಅವರ ಪ್ರಯತ್ನಕ್ಕೆ ಪೂರಕವಾಗಿ ಪಾಲ್ಗಟ್ ವಿಭಾಗವು ನಿಗದಿತ ಅವಧಿಗಿಂತ ಮುಂಚೆಯೇ 32 ಕೋಚ್ಗಳನ್ನು ಸಿದ್ಧಪಡಿಸಿದೆ. ಈ ಪೈಕಿ 20ನ್ನು ಮಂಗಳೂರಿಗೆ ಮೀಸಲಿಡಲಾಗಿದೆ. ಇವುಗಳಲ್ಲಿ ಒಟ್ಟು 320 ಬೆಡ್ಗಳಿವೆ ಎಂದರು.
ಕೋವಿಡ್-19 ಎದುರಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ನಡೆಸಿದೆ. ಆಸ್ಪತ್ರೆಗಳಲ್ಲಿ ಪೂರಕ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೇ ಐಸೋಲೇಶನ್ ಕೋಚ್ ಸಿದ್ಧಪಡಿಸಲಾಗಿದೆ. ಇದನ್ನು ಇಲ್ಲಿ ಬಳಕೆ ಮಾಡಬಹುದು ಅಥವಾ ಹೆಚ್ಚು ಪ್ರಕರಣಗಳಿರುವ ಕೇರಳ, ಕಾಸರಗೋಡಿಗೂ ಕಳುಹಿಸಬಹುದು. ಒಂದು ಕೋಚ್ನಲ್ಲಿ ಆಕ್ಸಿಜನ್ ವ್ಯವಸ್ಥೆ ಇದೆ. ಒಂದು ಕೋಚ್ ಪ್ಯಾರಾ ಮೆಡಿಕಲ್ಗೆ ಮೀಸಲಿಡಲಾಗಿದೆ. ರೈಲು ಸೇವೆ ಆರಂಭಗೊಂಡಾಗ ಕಂಕನಾಡಿಯ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಪ್ರತ್ಯೇಕ ಸ್ಥಳದಲ್ಲಿ ಇಡುತ್ತೇವೆ ಎಂದು ಹೇಳಿದರು. ರೈಲ್ವೇ ಇಲಾಖೆಯ ಕೋಚಿಂಗ್ ಡಿಪೊ ಮ್ಯಾನೇಜರ್ ರಾಜೇಶ್ ಕುಮಾರ್ ಮೀನಾ, ಏರಿಯಾ ಆಫೀಸರ್ ಶ್ರೀಧರನ್, ಎಸ್ಎಂಆರ್ ರಾಮಕುಮಾರ್, ಎಸ್ಎಸ್ಇ ಪ್ರವೀಣ್ ಉಪಸ್ಥಿತರಿದ್ದರು.
7 ದಿನಗಳಿಂದ ಪಾಸಿಟಿವ್ ಇಲ್ಲ
ದೇಶದ ಕೊರೊನಾ ಹೋರಾಟದ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಾವು ಮೊದಲು ಸಭೆ ಮಾಡಿದ್ದೇವೆ. ವೆನ್ಲಾಕ್ ಆಸ್ಪತ್ರೆಯನ್ನು ಕೊರೊನಾ ಚಿಕಿತ್ಸೆಗಾಗಿ ಮೀಸಲಿಟ್ಟೆವು. ತಲಪಾಡಿ ಗಡಿ ಬಂದ್ನಂಥ ಕಠಿನ ಕ್ರಮ ಕೈಗೊಂಡೆವು. ಇದರಿಂದ ಬಹುತೇಕ ನಿಯಂತ್ರಣ ಆಗಿದೆ. ಪಾಸಿಟಿವ್ ಆಗಿದ್ದವರು ಡಿಸಾcರ್ಜ್ ಆಗುತ್ತಿದ್ದಾರೆ. ಏಳು ದಿನಗಳಿಂದ ಪಾಸಿಟಿವ್ ಪ್ರಕರಣಗಳು ಬಂದಿಲ್ಲ. ಇದಕ್ಕಾಗಿ ಎಲ್ಲ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯರು, ನರ್ಸ್ಗಳು, ಸಿಬಂದಿ, ಪೊಲೀಸರು ಮತ್ತು ಸಾರ್ವಜನಿಕರಿಗೆ ಅಭಿನಂದನೆ ಎಂದು ಸಂಸದ ನಳಿನ್ ಹೇಳಿದರು.
ಸುಸಜ್ಜಿತ ಬೋಗಿ
ಐಸೋಲೇಶನ್ ಬೋಗಿಯಲ್ಲಿ ಎಲೆಕ್ಟ್ರಾನಿಕ್ ಚಾರ್ಜಿಂಗ್ ವ್ಯವಸ್ಥೆ, ಬಟ್ಟೆ, ಕೋಟ್, ಔಷಧ, ಬಕೆಟ್ ಇಡಲು ಪ್ರತ್ಯೇಕ ವ್ಯವಸ್ಥೆಯಿದ್ದು, ಎಲ್ಲದರಲ್ಲೂ ಡಸ್ಟ್ ಬಿನ್, ವೈದ್ಯರಿಗೆ ಸೌಲಭ್ಯ, ಔಷಧ ಸಿಂಪಡಿಸಲು ಸೋಡಿಯಂ ಹೈಪೋಕ್ಲೋರೈಡ್ ವ್ಯವಸ್ಥೆ, ಎಲ್ಲ ಕಿಟಿಕಿಗಳಿಗೆ ಸೊಳ್ಳೆ ಪರದೆ ಅಳವಡಿಸಲಾಗಿದೆ. ಪ್ಯಾಂಟ್ರಿ ಕಾರ್ ಮತ್ತು ಫುಡ್ ವಿಭಾಗವೂ ಇದೆ ಎಂದು ನಳಿನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್ವೆಲ್ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.